
ಘಟನೆಯ ದಿನ ಅಂದರೆ ಫೆ.10 ರಂದು ಶಿಕ್ಷಕಿ ಕವಿತಾ ಹೆತ್ತವರೊಂದಿಗೆ ಡಿಡಿಪಿಐ ಕಛೇರಿಗೆ ಬಂದಿದ್ದರು. ಈ ವೇಳೆ ಕವಿತಾ ಅವರು ಮಾತನಾಡಿದ ವೀಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಅಷ್ಟಕ್ಕೇ ಹೋಲಿ ಏಂಜಲ್ ಶಾಲೆಯ ಆಡಳಿತ ಮಂಡಳಿಯು ಶಿಕ್ಷಕಿ ಹುದ್ದೆಯಿಂದಲೇ ವಜಾ ಮಾಡಿದೆ. ನಿಮ್ಮ ಸೇವೆ ಇನ್ನು ಅಗತ್ಯ ಇಲ್ಲ ಅಂತಾ ಹೋಲಿ ಏಂಜಲ್ ಶಾಲೆಯಿಂದ ಗೇಟ್ ಪಾಸ್ ಕೊಡಲಾಗಿದೆ. ಆ ಬಳಿಕ ಕವಿತಾ ಅವರ ಮೊಬೈಲ್‍ಗೆ ವಿದೇಶಗಳಿಂದ ನಿರಂತರವಾಗಿ ಬೆದರಿಕೆ ಕರೆಗಳು ಆರಂಭಿಸಿದವು. ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ ಕವಿತಾ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ. ಸದ್ಯ ಶಿಕ್ಷಕಿ ಕವಿತಾ ಅವರು ಪೊಲೀಸ್ ಠಾಣೆಯ ಮೊರೆ ಹೋಗಿದ್ದಾರೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
