
ಕೋಟ: ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಆರೋಪಿಯೊಬ್ಬ ಕೋಟ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದ ಘಟನೆ ಎ.17ರಂದು ರಾತ್ರಿ ವೇಳೆ ಕೋಟದಲ್ಲಿ ನಡೆದಿದೆ.
ಸ್ವಪ್ನೀಲ್ ಸುಹಾಸ್ ಶೇಲಾರ್(37) ಬಂಧಿತ ಆರೋಪಿ. ಈತನನ್ನು ಕೋಟ ಪೊಲೀಸ್ ಠಾಣೆಯಲ್ಲಿ ದಾಖಲಾದ ಐಟಿ ಕಾಯಿದೆ ಪ್ರಕರಣಕ್ಕೆ ಸಂಬAಧಿಸಿ ಕೋಟ ಪೊಲೀಸರು ಎ.17ರಂದು ಸಂಜೆ ಮಂಗಳೂರು ಬಸ್ ನಿಲ್ದಾಣದ ಬಳಿ ವಶಕ್ಕೆ ಪಡೆದಿದ್ದು, ಅಲ್ಲಿಂದ ಆತನನ್ನು ಖಾಸಗಿ ವಾಹನದಲ್ಲಿ ಕೋಟ ಪೊಲೀಸ್ ಠಾಣೆಗೆ ಕರೆದುಕೊಂಡು ಬರುತ್ತಿದ್ದರು.
ಕೋಟ ಪೊಲೀಸ್ ಠಾಣೆಯ ಎದುರಿನ ಸರ್ವೀಸ್ ರಸ್ತೆಯ ಬಳಿ ಕಾರನ್ನು ನಿಲ್ಲಿಸಿದಾಗ ಆರೋಪಿ ಠಾಣೆಯನ್ನು ದೂರದಿಂದ ನೋಡಿ ತಪ್ಪಿಸಿಕೊಂಡು ಓಡಿ ಹೋಗಲು ಪ್ರಯತ್ನಿಸಿದನು. ಆಗ ಆತ ನಿಯಂತ್ರಣ ತಪ್ಪಿ ಅಲ್ಲಿಯೇ ರಸ್ತೆಯ ಮೇಲೆ ಬಿದ್ದಿದ್ದು ಇದರಿಂದ ಆತ ಗಾಯಗೊಂಡ ಎನ್ನಲಾಗಿದೆ. ಆತನನ್ನು ಮತ್ತೆ ವಶಕ್ಕೆ ಪಡೆದುಕೊಂಡ ಪೊಲೀಸರು, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
