April 26, 2026
WhatsApp Image 2024-02-18 at 6.23.00 PM

ಬೆಳ್ತಂಗಡಿ: ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ಒಂದೇ ದಿನ ಮೂರು ಬೈಕ್‌ಗಳು ಕಳ್ಳತನವಾದ ಘಟನೆ ನಡೆದಿದ್ದು ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಫೆ. 14ರಂದು ರಾತ್ರಿಯ ವೇಳೆ ಮೂರೂ ಬೈಕ್‌ಗಳು ಕಳ್ಳತನವಾಗಿವೆ. ಧರ್ಮಸ್ಥಳ ಗ್ರಾಮದ ಮಲ್ಲರ್ಮ ಮಾಡಿ ನಿವಾಸಿ ಬೇಬಿ ಅವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್’ ಅನ್ನು ರಾತ್ರಿಯ ವೇಳೆ ಕಳ್ಳರು ಅಪಹರಿಸಿದ್ದಾರೆ. ಬೆಳಗ್ಗೆ ಎದ್ದು ನೋಡಿದಾಗ ನಾಪತ್ತೆಯಾಗಿತ್ತು. ಮತ್ತೊಂದು ಪ್ರಕರಣದಲ್ಲಿ ಧರ್ಮಸ್ಥಳ ಗ್ರಾಮದ ಗಡಿಯಲ್ಲಿರುವ ಕಲ್ಮಂಜ ಗ್ರಾಮದ ಮದ್ಮಲ್ ಕಟ್ಟೆ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಬಂದವರು ಮನೆಯ ಸಮೀಪ ಬೈಕ್ ಅನ್ನು ಫೆ.14ರಂದು ರಾತ್ರಿಯ ವೇಳೆ ನಿಲ್ಲಿಸಿದ್ದರು ಬೆಳಗ್ಗೆ ನೋಡಿದಾಗ ಬೈಕ್ ಕಳ್ಳತನವಾಗಿತ್ತು. ಬೈಕ್‌ ಅಂದಾಜು ಮೌಲ್ಯ ಸುಮಾರು 65,000 ರೂ’ ಅಂದಾಜಿಸಲಾಗಿದೆ ಎಂದು ಸುಳ್ಯ ತಾಲೂಕಿನ ಅಖಿಲೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ಮೂರನೆಯ ಪ್ರಕರಣದಲ್ಲಿ ಕೊಪ್ಪಳದಿಂದ ಧರ್ಮಸ್ಥಳಕ್ಕೆ ಬೈಕಿನಲ್ಲಿ ಯಾತ್ರಾರ್ಥಿಯಾಗಿ ಬಂದ ಬಸವರಾಜ್ ತಮ್ಮ ಬೈಕ್ ಅನ್ನು ಧರ್ಮಸ್ಥಳದ ಯೂನಿಯನ್ ಬ್ಯಾಂಕ್ ಎಟಿಎಂ ಬಳಿ ನಿಲ್ಲಿಸಿ ನಿದ್ದೆ ಮಾಡಿದ್ದರು ಬೆಳಗ್ಗೆ ನೋಡಿದಾಗ ಬೈಕ್ ಕಳ್ಳತನವಾಗಿತ್ತು. ಈ ಮೂರೂ ಬೈಕ್‌ಗಳು ಒಂದೇ ದಿನ ಕಳ್ಳತನವಾಗಿದ್ದು ಒಂದೇ ತಂಡದ ಕೃತ್ಯ ಇರಬಹುದು ಎಂದು ಅನುಮಾನ ಪಡಲಾಗಿದ್ದು ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.