
ಬಂಟ್ವಾಳ: ಮಾಣಿ ನಿವಾಸಿ ವಿಶ್ವನಾಥ (28) ಅವರ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ ಘಟನೆ ಏಪ್ರಿಲ್ 12 ರಂದು ಸಂಜೆ ನಡೆದಿದೆ.
ಮನೆಯಲ್ಲಿದ್ದ ವೇಳೆ ಪರಿಚಯದ ನವೀನ್ ಎಂಬಾತನು ಸುಮಾರು ಒಂದು ವರ್ಷದ ಹಿಂದೆ ನಡೆದ ಗಲಾಟೆ ವಿಷಯವಾಗಿ ತಕರಾರು ತೆಗೆದು, ಕಲ್ಲಿನಿಂದ ಹಲ್ಲೆ ನಡೆಸಿ ಜೀವಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹಲ್ಲೆಯಿಂದ ಗಾಯಗೊಂಡ ವಿಶ್ವನಾಥರನ್ನು ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ದೊರೆತ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 92/2026, ಕಲಂ 118(1), 109 BNS 2023 ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಪ್ರಕರಣದ ಆರೋಪಿಯಾಗಿರುವ ಬಂಟ್ವಾಳ ಬರಿಮಾರು ನಿವಾಸಿ ಪಿ. ನವೀನ್ (43) ಅವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
