ಮೊಹಮ್ಮದ್ ಶಮಿ ಮದುವೆಯ ವಿಚ್ಛೇದನ ವಿಚಾರ : ಪತ್ನಿಗೆ ಜೀವನಾಂಶ ನೀಡಲು ಕೋರ್ಟ್ ಆದೇಶ..!

ಮೊಹಮ್ಮದ್ ಶಮಿ ಅವರು ಭಾರತದ ಕ್ರಿಕೆಟ್ ತಂಡದ ವೇಗದ ಬೌಲರ್ ಎಂದೇ ಪ್ರಸಿದ್ಧಿಯಾಗಿದ್ದಾರೆ. ಇವರ ದಾಂಪತ್ಯ ಜೀವನವು ಬಿರುಕುಗೊಂಡ ವಿಚಾರ ಎಲ್ಲರಿಗೂ ತಿಳಿದಿದೆ. ಮೊಹಮ್ಮದ್ ಶಮಿ ಮತ್ತು ಹಸೀನ್ ಜಹಾನ್ ಅವರ ಮದುವೆಯು ಅದಾಗಲೇ ಮುರಿದು ಬಿದ್ದಿತ್ತು. ವಿಚ್ಛೇದಿತ ಪತ್ನಿ ಜೀವನಾಂಶವನ್ನು ಬೇಡಿ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಇದೀಗ ಕೋಲ್ಕತ್ತಾ ನ್ಯಾಯಾಲಯವು ಮೊಹಮ್ಮದ್ ಶಮಿ ಅವರಿಗೆ ಜೀವನಾಂಶವನ್ನು ನೀಡುವಂತೆ ಆದೇಶಿಸಿದೆ.

ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಪ್ರಕರಣಗಳನ್ನು ಹೆಚ್ಚಾಗಿಯೇ ಕೇಳುತ್ತಿದ್ದೇವೆ. ಮೊಹಮ್ಮದ್ ಶಮಿ ಮತ್ತು ಹಸೀನ್ ಜಾಹಾನ್ ಅವರ ವಿವಾಹವು, ಸ್ನೇಹಿತರ ಹಾಗೂ ಸಂಬಂಧಿಗಳ ಎದುರಲ್ಲಿಯೇ ನಡೆದಿತ್ತು. ಬಳಿಕ ಪ್ರಾರಂಭವಾದ ಮನಸ್ತಾಪಗಳಿಂದ ವಿಚ್ಛೇದನವು ಆಯ್ತು. ಹಸಿನ್ ಜಹಾನ್ ಅವರು ಮೊಹಮ್ಮದ್ ಶಮಿ ವಿರುದ್ಧ ಕೌಟುಂಬಿಕ ಆರೋಪಗಳನ್ನು ಹೇರಿದ್ದರು.

ಹಸಿನ್ ಜಹಾನ್ ಅವರು ನ್ಯಾಯಾಲಯದಲ್ಲಿ ತನಗೆ ಬದುಕಲು ಹಣಕಾಸಿನ ವ್ಯವಸ್ಥೆಯನ್ನು ಮೊಹಮ್ಮದ್ ಶಮಿ ಅವರು ನೀಡುವಂತೆ ಮನವಿ ಸಲ್ಲಿಸಿದ್ದರು. ಮೊಹಮ್ಮದ್ ಶಮಿ ಅವರಿಂದ ತಿಂಗಳಿಗೆ 10 ಲಕ್ಷ ರೂಪಾಯಿಗಳನ್ನು ಜೀವನಾಂಶವಾಗಿ ನೀಡುವಂತೆ ಬೇಡಿಕೆಯನ್ನು ಇಟ್ಟಿದ್ದರು. 2018ರಲ್ಲಿ ಹಸಿನ್ ಜಹಾನ್ ಅವರು ಜೀವನಾಂಶ ಕೋರಿ ಕಾನೂನು ಮೊಕದ್ದಮೆ ಹೂಡಿದ್ದರು.

ಹಸಿನ್ ಜಾನ್ ಅವರು 10 ಲಕ್ಷ ರೂಪಾಯಿಗಳನ್ನು ಎರಡು ಭಾಗಗಳಾಗಿ ವಿಂಗಡಿಸಿ ಕೇಳಿದ್ದರು. ಅದರಲ್ಲಿ ಏಳು ಲಕ್ಷ ರೂಪಾಯಿಗಳನ್ನು ತನ್ನ ಸ್ವಂತಕ್ಕಾಗಿ ಮತ್ತು ಮೂರು ಲಕ್ಷ ರೂಪಾಯಿಗಳನ್ನು ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ ಎಂದು ಸ್ಪಷ್ಟಪಡಿಸಿದ್ದರು. ಇದೇ ವಿಚಾರವಾಗಿ ಈಗ ನ್ಯಾಯಾಲಯವು ಆದೇಶ ಹೊರಡಿಸಿದೆ. ಮೊಹಮ್ಮದ್ ಶಮಿಯವರು ಮಾಸಿಕ 50,000 ರೂಪಾಯಿಗಳನ್ನು ನೀಡಬೇಕು, ಹಸಿನ್ ಅವರಿಗೆ ಜೀವನಾಂಶವಾಗಿ ನೀಡಬೇಕು ಎಂದು ಆದೇಶಿಸಿದೆ.

Check Also

ಮಂಗಳೂರು: ವಿಡಿಯೋ ಲೈಕ್ ಮಾಡಿ 5 ಲಕ್ಷ ಕಳೆದುಕೊಂಡರು..!

ಮಂಗಳೂರು: ಆನ್‌ಲೈನ್ ಗಳಿಕೆಯ ನಕಲಿ ಜಾಲಕ್ಕೆ ಸಿಲುಕಿ ವ್ಯಕ್ತಿಯೊಬ್ಬರು 5 ಲಕ್ಷ ರೂ. ಕಳೆದುಕೊಂಡಿದ್ದಾರೆ. ಸೆ. 28ರಂದು ದೂರುದಾರರು ಇನ್ …

Leave a Reply

Your email address will not be published. Required fields are marked *

You cannot copy content of this page.