ದೇಶ

ಶ್ರದ್ಧಾ ಹತ್ಯೆ ಪ್ರಕರಣ ; ಮೊದಲ ಸಿಸಿಟಿವಿ ದೃಶ್ಯ ಬಹಿರಂಗ..!

ನವದೆಹಲಿ: ಶ್ರದ್ಧಾಳನ್ನ ಹತ್ಯೆ ಮಾಡಿದ ಆರೋಪ ಹೊತ್ತಿರುವ ಅಫ್ತಾಬ್ ಅಮೀನ್ ಪೂನಾವಾಲಾ ಕಳೆದ ತಿಂಗಳು ಮುಂಜಾನೆ ಬ್ಯಾಗ್ ಹಿಡಿದುಕೊಂಡು ಮನೆಯಿಂದ ಹೊರಗೆ ನಡೆದುಕೊಂಡು ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಗೊಂಡಿವೆ. ಬ್ಯಾಗ್ ಹಿಡಿದ ಕೊಂಡು ಬೆಳಿಗ್ಗೆ ಮನೆಯಿಂ ಹೊರಡುತ್ತಿದ್ದ ಅಫ್ತಾಬ್, ಶ್ರದ್ಧಾ ದೇಹದ ಭಾಗಗಳನ್ನ ಸಾಗಿಸುತ್ತಿದ್ದರು ಎಂದು ಶಂಕಿಸಲಾಗಿದೆ. ಇನ್ನು ಪೊಲೀಸರು ದೃಶ್ಯಾವಳಿಗಳನ್ನ ಪರಿಶೀಲಿಸಲು ಪ್ರಯತ್ನಿಸುತ್ತಿದ್ದಾರೆ. ಇನ್ನು ಅಕ್ಟೋಬರ್ 18ರಂದು ದಾಖಲಾದ ಇದು ಭಯಾನಕ ಕೊಲೆ ಪ್ರಕರಣದಲ್ಲಿ ಕಾಣಿಸಿಕೊಂಡ ಮೊದಲ ದೃಶ್ಯ ಸಿಸಿಟಿವಿ ದೃಶ್ಯವಾಗಿದೆ. ಡಾರ್ಕ್ ಮತ್ತು ಗ್ರೈನ್ ವೀಡಿಯೊ ಕ್ಲಿಪ್ನಲ್ಲಿ ಒಬ್ಬ ವ್ಯಕ್ತಿಯು ತನ್ನ …

Read More »

ಚಲಿಸುತ್ತಿದ್ದ ಕಾರಿನಲ್ಲೇ ಯುವ ಮಾಡೆಲ್ ಮೇಲೆ ಗ್ಯಾಂಗ್ ರೇಪ್..!

ಕೊಚ್ಚಿ: ಯುವ ಮಾಡೆಲ್​ ಒಬ್ಬಳ ಮೇಲೆ ಕಾರಿನೊಳಗೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದ್ದು, ಈ ಪ್ರಕರಣ ಸಂಬಂಧ ಓರ್ವ ಮಹಿಳೆ ಹಾಗೂ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಗುರುವಾರ (ನ.17) ನಡೆದಿದೆ.ಮದ್ಯದ ಅಮಲಿನಲ್ಲಿ ಯುವಕರು ಮಾಡೆಲ್​ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ. ವಿವರಣೆಗೆ ಬರುವುದಾದರೆ, ಸಂತ್ರಸ್ತ ಯುವ ಮಾಡೆಲ್ ತನ್ನ ಫ್ರೆಂಡ್​ ಜೊತೆಯಲ್ಲಿ ಗುರುವಾರ ರಾತ್ರಿ 8.30ರ ಸುಮಾರಿಗೆ ಬಾರ್​ ಒಂದಕ್ಕೆ ಬಂದಿದ್ದಳು. ಸುಮಾರು 10 ಗಂಟೆ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದಳು. ತಕ್ಷಣ ಕೆಲ ಯುವಕರು ಆಕೆಯನ್ನು …

Read More »

ಶ್ರದ್ಧಾ ಕೊಲೆ ಮಾದರಿಯಲ್ಲೇ ಮತ್ತೊಂದು ಕೊಲೆ : ಹಿಂದೂ ಯುವತಿ ತುಂಡು ತುಂಡಾಗಿ ಕತ್ತರಿಸಿದ ಪ್ರೇಮಿ

ಶ್ರದ್ಧಾ ವಾಕರ್ ಹತ್ಯೆ ಭಾರತವನ್ನು ಬೆಚ್ಚಿಬೀಳಿಸಿರುವಂತೆಯೇ, ಬಾಂಗ್ಲಾದೇಶದಲ್ಲಿ ಹಿಂದೂ ಯುವತಿಯನ್ನು ಪ್ರೇಮಿಯೊಬ್ಬ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಅಬುಬಕರ್ ಎಂಬಾತ ಕವಿತಾ ರಾಣಿಯನ್ನು ಕತ್ತರಿಸಿದ್ದಾನೆ. ನವೆಂಬರ್ 6 ರಂದು, ಅಬುಬಕರ್ ಕೆಲಸಕ್ಕೆ ಹಾಜರಾಗಿರಲಿಲ್ಲ. ಫೋನ್‌ ನಲ್ಲಿಯೂ ಸಂಪರ್ಕಕ್ಕೆ ಸಿಗಲಿಲ್ಲ. ಅವರು ಕೆಲಸ ಮಾಡುತ್ತಿದ್ದ ಸಾರಿಗೆ ಸಂಸ್ಥೆಯ ಮಾಲೀಕರು ಅವರ ಬಾಡಿಗೆ ಮನೆಗೆ ವ್ಯಕ್ತಿಯನ್ನು ಕಳುಹಿಸಿದ್ದಾರೆ. ಮನೆಗೆ ಹೊರಗಿನಿಂದ ಬೀಗ ಹಾಕಲ್ಪಟ್ಟಿದ್ದು, ಅಬುಬಕರ್ ನಾಪತ್ತೆಯಾಗಿರುವ ಬಗ್ಗೆ ಅನುಮಾನ ಹೆಚ್ಚಾಗುತ್ತಿದ್ದಂತೆ ಜಮೀನು ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಬಾಗಿಲನ್ನು ತೆರೆದಾಗ ಪೆಟ್ಟಿಗೆಯಲ್ಲಿ ಮಹಿಳೆಯ ತಲೆಯಿಲ್ಲದ ಶವ …

Read More »

ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಭಾರತೀಯರಿಗೆ ಇನ್ಮುಂದೆ ಕ್ಲಿಯರೆನ್ಸ್ ಅಗತ್ಯವಿಲ್ಲ

ಸೌದಿ ಅರೇಬಿಯಾಕ್ಕೆ ಪ್ರಯಾಣಿಸುವ ಭಾರತೀಯರಿಗೆ ಇನ್ನು ಮುಂದೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರದ ಅಗತ್ಯವಿರುವುದಿಲ್ಲ. ಸೌದಿ ವೀಸಾಗೆ ಅರ್ಜಿ ಸಲ್ಲಿಸಲು ಭಾರತೀಯರು ಇನ್ನು ಮುಂದೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ. ಸೌದಿ ಅರೇಬಿಯಾ ಮತ್ತು ಭಾರತದ ನಡುವಿನ ಸಂಬಂಧ ಬಲಗೊಳಿಸುವ ದೃಷ್ಟಿಯಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಭಾರತದಲ್ಲಿನ ಸೌದಿ ರಾಯಭಾರ ಕಚೇರಿ ಟ್ವೀಟ್ ಮಾಡಿದೆ. ಇನ್ನು ಮುಂದೆ ಭಾರತೀಯ ಪ್ರಜೆಗಳು ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು (ಪಿಸಿಸಿ) ರಾಯಭಾರ ಕಚೇರಿಗೆ ಸಲ್ಲಿಸುವ ಅಗತ್ಯವಿಲ್ಲ ಎಂದು ನವದೆಹಲಿಯಲ್ಲಿರುವ ಸೌದಿ ಅರೇಬಿಯಾ ರಾಯಭಾರ ಕಚೇರಿ ಗುರುವಾರ ತಿಳಿಸಿದೆ. …

Read More »

SHOCKING NEWS: ಅನಸ್ತೇಷಿಯಾ ನೀಡದೇ ʻಸಂತಾನಹರಣ ಶಸ್ತ್ರಚಿಕಿತ್ಸೆʼ ಮಾಡಿದ ವೈದ್ಯರು: ಮಹಿಳೆಯರಿಗೆ ನರಕಯಾತನೆ

ಬಿಹಾರ: ಬಿಹಾರದ ಖಗಾರಿಯಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು 23 ಮಹಿಳೆಯರಿಗೆ ಅನಸ್ತೇಷಿಯಾ ನೀಡದೇ ʻಸಂತಾನಹರಣ ಶಸ್ತ್ರಚಿಕಿತ್ಸೆʼ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯರಿಗೆ ಅನಸ್ತೇಷಿಯಾ ನೀಡದೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯರು ನೋವಿನಿಂದ ಕಿರುಚುತ್ತಾ ಅಳುತ್ತಿದ್ದರೂ, ಅವರ ಬಾಯಿಯನ್ನು ಮುಚ್ಚಿ, ಕೈ ಮತ್ತು ಕಾಲುಗಳನ್ನು ಹಿಡಿದುಕೊಂಡು ಬಲವಂತವಾಗಿ ಆಪರೇಷನ್ ಮಾಡಲಾಗಿದೆ ಎಂದು ಸಂತ್ರಸ್ತ ಮಹಿಳೆಯರು ಆರೋಪಿಸಿದ್ದಾರೆ. ಗ್ಲೋಬಲ್ ಡೆವಲಪ್‌ಮೆಂಟ್ ಇನಿಶಿಯೇಟಿವ್ ಎಂಬ ಖಾಸಗಿ ಏಜೆನ್ಸಿ ಈ ಮಹಿಳೆಯರಿಗೆ ಆಪರೇಷನ್ ಮಾಡಿಸಿದೆ ಎನ್ನಲಾಗಿದೆ. ಇದೇ …

Read More »

ಶ್ರದ್ಧಾ ಹತ್ಯೆ ಪ್ರಕರಣ- ಸಾಕ್ಷಿ ನಾಶಕ್ಕೆ OLXನಲ್ಲಿ ಫೋನ್ ಮಾರಿದ

ನವದೆಹಲಿ: ಲೀವ್ ಇನ್ ರಿಲೇಶನ್ ಶಿಪ್‍ನಲ್ಲಿದ್ದ ಗೆಳತಿಯನ್ನು ಭೀಕರವಾಗಿ ಹತ್ಯೆಗೈದು 35 ಪೀಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಭಯಾನಕ ವಿಷಯಗಳು ಹೊರಬರುತ್ತಿವೆ. ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಹತ್ಯೆ ಬಳಿಕ ಡೇಟಿಂಗ್ ಆ್ಯಪ್ ಮೂಲಕ ಹಲವು ಯುವತಿಯರ ಜೊತೆ ಮಾತನಾಡುತ್ತಿದ್ದ. ಅದಾದ ಬಳಿಕ ಕೊಲೆ ಮಾಡಿದ್ದಕ್ಕೆ ಸಾಕ್ಷಿ ಸಿಗಬಾರದು ಎಂದು ತನ್ನ ಫೋನ್‍ನನ್ನು ಒಎಲ್‍ಎಕ್ಸ್‌ನಲ್ಲಿ ಮಾರಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ ಅಫ್ತಾಬ್ ಮತ್ತು ಶ್ರದ್ಧಾ ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕ ಪರಸ್ಪರ ಭೇಟಿಯಾಗಿದ್ದರು. ಅದಾದ ಬಳಿಕ ಕಳೆದ 3 ವರ್ಷಗಳ ಕಾಲ …

Read More »

ಪೋಷಕರು – ಶಿಕ್ಷಕರ ಭೇಟಿ ತಪ್ಪಿಸಲು ‘ರೈಲ್ವೆ ಹಳಿಗೆ ತಲೆಕೊಟ್ಟ’ ಬಾಲಕ : ಆತ್ಮಹತ್ಯೆಗೂ ಮುನ್ನ ‘ಬರೆದ ಪತ್ರ ವೈರಲ್ ‘ 

ಲಕ್ನೋ : ಶಾಲೆಯಲ್ಲಿ ಪಾಲಕರು-ಶಿಕ್ಷಕರನ್ನು ಭೇಟಿಯಾಗುವುದನ್ನು ತಪ್ಪಿಸಲು 9 ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಲಕ್ನೋದಲ್ಲಿ ನಡೆದಿದೆ. ವರದಿಗಳ ಪ್ರಕಾರ ಗೋಮತಿ ನಗರದ ನಿವಾಸಿ ಆದಿತ್ಯ ತಿವಾರಿ ಎಂಬ ವಿದ್ಯಾರ್ಥಿ ರೈಲ್ವೇ ಹಳಿಯ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದು ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ. CMS ಖಾಸಗಿ ಶಾಲೆಯ PPRO ವಿದ್ಯಾರ್ಥಿ ತನ್ನ ಅಧ್ಯಯನದಲ್ಲಿ ಉತ್ತಮವಾಗಿದ್ದಾನೆ. ಆದರೆ ಅವನು ತನ್ನ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ಕಾರಣ ಪೋಷಕರು ಮತ್ತು ಶಿಕ್ಷಕರ ಸಭೆಯನ್ನು ಕರೆಯಲಾಗಿತ್ತು. …

Read More »

ದೆಹಲಿ ಕೊಲೆ ಪ್ರಕರಣ: ಇನ್ನೂ ಸಿಗದ ಶ್ರದ್ಧಾ ತಲೆ, ಮೊಬೈಲ್ – ಹಾಗಿದ್ದರೆ ಈಗ ಇರುವ ಸಾಕ್ಷ್ಯಗಳೇನು..? ಇಲ್ಲಿದೆ ಮಾಹಿತಿ

ದೇಶವನ್ನೇ ನಡುಗಿಸಿರುವ ಸೆನ್ಸೇಷನಲ್‌ ದೆಹಲಿ ಕೊಲೆ ಪ್ರಕರಣದಲ್ಲಿ ಬಿಟ್ಟುಹೋದ ಕೊಂಡಿಗಳನ್ನು ಕೂಡಿಸಲು, ಸಾಕ್ಷ್ಯಗಳನ್ನು ಕಲೆಹಾಕಲು ಪೊಲೀಸರು ತೀವ್ರವಾಗಿ ಹೆಣಗಾಡುತ್ತಿದ್ದಾರೆ. ಕೊಲೆ ಘಟಿಸಿ ಆರು ತಿಂಗಳೇ ಆಗಿರುವುದರಿಂದ ಸಾಕ್ಷಿಗಳನ್ನು ಒಗ್ಗೂಡಿಸಲು ಕಷ್ಟಪಡಬೇಕಾಗಿದೆ. ಮೇ 18ರಂದು ಅಫ್ತಾಬ್‌ ಪೂನಾವಾಲಾ ತನ್ನ ಲಿವ್‌ ಇನ್‌ ಪಾರ್ಟ್ನರ್‌ ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದುಹಾಕಿದ್ದ. ಮರುದಿನ ಒಂದು ಫ್ರಿಜ್‌ ಮತ್ತು ಚೂರಿ ತಂದಿದ್ದ. ದೇಹವನ್ನು ಚೂರುಗಳಾಗಿ ಕತ್ತರಿಸಿ ಪ್ರತಿರಾತ್ರಿ ಹೋಗಿ ತುಣುಕುಗಳನ್ನು ಕಾಡಿನಲ್ಲಿ ಚೆಲ್ಲಿ ಬರುತ್ತಿದ್ದ. ಹಲವಾರು ಮೂಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರೂ ಶ್ರದ್ಧಾಳ ತಲೆ ಹಾಗೂ ಮೊಬೈಲ್‌ ಇನ್ನೂ ಪತ್ತೆಯಾಗಿಲ್ಲ. ಅಫ್ತಾಬ್‌ ಕೂಡ …

Read More »

ನಾಳೆಯಿಂದ ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ದರ್ಶನ : ಯಾತ್ರಿಗಳಿಗೆ ʼಕ್ಯೂ ಮೂಲಕ ಮಾತ್ರವೇ ಪ್ರವೇಶ

ತಿರುವನಂತಪುರ: ಶಬರಿಮಲೆಯ ಅಯ್ಯಪ್ಪ ದೇಗುಲವು ಬುಧವಾರದಿಂದ (ನ 16) ತೆರೆಯಲಿದ್ದು, ಗುರುವಾರದಿಂದ (ನ 17) ಎರಡು ತಿಂಗಳ ಅವಧಿಗೆ ಭಕ್ತರ ದರ್ಶನಕ್ಕೆ ಅವಕಾಶ ಇರಲಿದೆ. ವಾರ್ಷಿಕ ಮಂಡಲಂ-ಮಕರವಿಳುಕ್ಕು ಯಾತ್ರೆಗೂ ನಾಳೆಯಿಂದಲೇ ಚಾಲನೆ ಸಿಗಲಿದೆ. ದೇಗುಲದ ಹಾಲಿ ಪ್ರಧಾನ ಅರ್ಚಕರಾದ (ತಂತ್ರಿ) ಕಂಡರಾರು ರಾಜೀವರು ಮತ್ತು ಹಿಂದ ಪ್ರಧಾನ ಅರ್ಚಕರಾದ ಎನ್.ಪರಮೇಶ್ವರನ್ ನಂಬೂದಿರಿ ಅವರ ಸಮಕ್ಷಮದಲ್ಲಿ ದೇಗುಲದ ಗರ್ಭಗೃಹವನ್ನು ಇಂದು ಸಂಜೆ 5 ಗಂಟೆಗೆ ತೆರೆಯಲಾಗುವುದು. ನಂತರ ಅಯ್ಯಪ್ಪ ಮತ್ತು ಮಲಿಕಾಪುರಮ್ ದೇಗುಲಗಳ ಮುಖ್ಯ ಅರ್ಚಕರು ಪೂಜಾ ವಿಧಿಗಳನ್ನು ಆರಂಭಿಸುವ ಮೂಲಕ ಜವಾಬ್ದಾರಿಯನ್ನು ಸ್ವೀಕರಿಸಲಿದ್ದಾರೆ. 41 …

Read More »

SHOCKING NEWS: ಮಹಿಳೆಯ ರುಂಡವಿಲ್ಲದ, ತುಂಡರಿಸಿದ ದೇಹದ ಭಾಗಗಳು ಬಾವಿಯಲ್ಲಿ ಪತ್ತೆ

ವಾರಣಾಸಿ(ಉತ್ತರ ಪ್ರದೇಶ): ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಬೆನ್ನಲ್ಲೇ ಮಂಗಳವಾರ ಅಜಂಗಢದ ಅಹ್ರೌಲಾ ಪ್ರದೇಶದ ಬಾವಿಯಲ್ಲಿ ಮಹಿಳೆಯೊಬ್ಬರ ದೇಹದ ತುಂಡರಿಸಿದ ಭಾಗಗಳು ಪತ್ತೆಯಾಗಿವೆ. ದೆಹಲಿಯಲ್ಲಿ ಫುಡ್ ಬ್ಲಾಗರ್ ಅಫ್ತಾಬ್ ಪೂನಾವಾಲಾ ತನ್ನ ಲಿವ್-ಇನ್ ಪಾಲುದಾರ ಶ್ರದ್ಧಾಳನ್ನು ಕೊಂದು ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ನಗರದಾದ್ಯಂತ ಎಸೆದಿದ್ದ. ಈ ಘಟನೆ ಮಾಸುವ ಮುನ್ನವೇ ಅಂತದ್ದೇ ಒಂದು ಘಟನೆ ಅಜಂಗಢದಲ್ಲಿ ನಡೆದಿದೆ. ಅಜಂಗಢದ ದುರ್ವಾಸ-ಗಹಾಜಿ ರಸ್ತೆಯ ಪಶ್ಚಿಮ ಕಾ ಪುರ ಗ್ರಾಮದ ಬಾವಿಯಲ್ಲಿ ಕತ್ತರಿಸಿದ ಕೈ, ಕಾಲುಗಳು ಮತ್ತು ಮುಂಡವನ್ನು ಪೊಲೀಸರು ಪತ್ತೆ …

Read More »

You cannot copy content of this page.