ಶ್ರದ್ಧಾ ಕೊಲೆ ಮಾದರಿಯಲ್ಲೇ ಮತ್ತೊಂದು ಕೊಲೆ : ಹಿಂದೂ ಯುವತಿ ತುಂಡು ತುಂಡಾಗಿ ಕತ್ತರಿಸಿದ ಪ್ರೇಮಿ

ಶ್ರದ್ಧಾ ವಾಕರ್ ಹತ್ಯೆ ಭಾರತವನ್ನು ಬೆಚ್ಚಿಬೀಳಿಸಿರುವಂತೆಯೇ, ಬಾಂಗ್ಲಾದೇಶದಲ್ಲಿ ಹಿಂದೂ ಯುವತಿಯನ್ನು ಪ್ರೇಮಿಯೊಬ್ಬ ತುಂಡು ತುಂಡಾಗಿ ಕತ್ತರಿಸಿದ್ದಾನೆ. ಅಬುಬಕರ್ ಎಂಬಾತ ಕವಿತಾ ರಾಣಿಯನ್ನು ಕತ್ತರಿಸಿದ್ದಾನೆ. ನವೆಂಬರ್ 6 ರಂದು, ಅಬುಬಕರ್ ಕೆಲಸಕ್ಕೆ ಹಾಜರಾಗಿರಲಿಲ್ಲ.

ಫೋನ್‌ ನಲ್ಲಿಯೂ ಸಂಪರ್ಕಕ್ಕೆ ಸಿಗಲಿಲ್ಲ. ಅವರು ಕೆಲಸ ಮಾಡುತ್ತಿದ್ದ ಸಾರಿಗೆ ಸಂಸ್ಥೆಯ ಮಾಲೀಕರು ಅವರ ಬಾಡಿಗೆ ಮನೆಗೆ ವ್ಯಕ್ತಿಯನ್ನು ಕಳುಹಿಸಿದ್ದಾರೆ. ಮನೆಗೆ ಹೊರಗಿನಿಂದ ಬೀಗ ಹಾಕಲ್ಪಟ್ಟಿದ್ದು, ಅಬುಬಕರ್ ನಾಪತ್ತೆಯಾಗಿರುವ ಬಗ್ಗೆ ಅನುಮಾನ ಹೆಚ್ಚಾಗುತ್ತಿದ್ದಂತೆ ಜಮೀನು ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಬಂದು ಬಾಗಿಲನ್ನು ತೆರೆದಾಗ ಪೆಟ್ಟಿಗೆಯಲ್ಲಿ ಮಹಿಳೆಯ ತಲೆಯಿಲ್ಲದ ಶವ ಪತ್ತೆಯಾಗಿದೆ. ಆಕೆಯ ತಲೆಯನ್ನು ಪಾಲಿಥಿನ್‌ ಕವರ್ ನಲ್ಲಿ ಸುತ್ತಿ ಪ್ರತ್ಯೇಕವಾಗಿ ಇಡಲಾಗಿತ್ತು. ಕೈಗಳು ಕಾಣೆಯಾಗಿದ್ದವು. ಕೊಲೆಯಾದ ಯುವತಿಯನ್ನು ಕಾಳಿಪಾಡ್ ಬಾಚಾರ್ ಎಂಬವರ ಪುತ್ರಿ ಕವಿತಾ ರಾಣಿ ಎಂದು ಗುರುತಿಸಲಾಗಿದೆ.

ನವೆಂಬರ್ 7 ರಂದು, ಪೊಲೀಸರು ಅಬುಬಕರ್ ಮತ್ತು ಆತನ ಲೈವ್-ಇನ್ ಪಾಲುದಾರಳಾದ ಸಪ್ನಾ ಅವರನ್ನು ಬಂಧಿಸಿದರು. ಬಾಂಗ್ಲಾದೇಶದ ರಾಪಿಡ್ ಆಕ್ಷನ್ ಬೆಟಾಲಿಯನ್(RAB) ಅಧಿಕಾರಿ ಅಬುಬಕರ್ ಮತ್ತು ಸಪ್ನಾ ಕಳೆದ ನಾಲ್ಕು ವರ್ಷಗಳಿಂದ ಗೋಬರ್ಚಾಕ ಸ್ಕ್ವೇರ್ ಪ್ರದೇಶದ ಮನೆಯೊಂದರಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು ಎಂದು ಹೇಳಿದರು.

ಇತ್ತೀಚೆಗೆ, ಅಬುಬಕರ್ ಕವಿತಾಗೆ ಹತ್ತಿರವಾಗಿದ್ದ, ನಂತರ ಅವಳನ್ನು ಬರ್ಬರವಾಗಿ ಕೊಂದು ಹಲವು ತುಂಡುಗಳಾಗಿ ಕತ್ತರಿಸಿದ್ದಾನೆ. ಆಶ್ಚರ್ಯದ ವಿಷಯವೆಂದರೆ ಹತ್ಯೆಗೆ ಐದು ದಿನಗಳ ಮೊದಲು ಅವರು ಭೇಟಿಯಾಗಿದ್ದರು.

ನವೆಂಬರ್ 5 ರಂದು ಸಪ್ನಾ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಕವಿತಾಳನ್ನು ಅಬುಬಕರ್ ತನ್ನ ಬಾಡಿಗೆ ಮನೆಗೆ ಆಹ್ವಾನಿಸಿದ್ದ. ಅಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಕೋಪದ ಭರಾಟೆಯಲ್ಲಿ ಅಬುಬಕರ್ ಆಕೆಯನ್ನು ಕತ್ತು ಹಿಸುಕಿ ಸಾಯಿಸಿದ್ದಾನೆ. ದೇಹದಿಂದ ಕೈಗಳನ್ನು ಕತ್ತರಿಸಿ ಚರಂಡಿಯಲ್ಲಿ ವಿಲೇವಾರಿ ಮಾಡಿದ್ದಾನೆ. ತಲೆಯನ್ನು ಪಾಲಿಥಿನ್ ಚೀಲದಲ್ಲಿ ಸುತ್ತಿ ಉಳಿದ ದೇಹವನ್ನು ಪೆಟ್ಟಿಗೆಯಲ್ಲಿ ಎಸೆದು ಪರಾರಿಯಾಗಿದ್ದಾನೆ.

ಅದೇ ರಾತ್ರಿ ಅಬುಬಕರ್ ತನ್ನ ಲೈವ್-ಇನ್ ಪಾಲುದಾರೆ ಸಪ್ನಾ ಅವರೊಂದಿಗೆ ರುಪ್ಸಾ ನದಿ ದಾಟಿ ಢಾಕಾಗೆ ತೆರಳಿದ್ದ ಎಂದು RAB ಅಧಿಕಾರಿ ಬಹಿರಂಗಪಡಿಸಿದ್ದಾರೆ. ಆದರೆ ಮರುದಿನ ಕವಿತಾ ರಾಣಿ ಅವರ ಶವವನ್ನು ಅವರ ಬಾಡಿಗೆ ಮನೆಯಿಂದ ವಶಕ್ಕೆ ಪಡೆದ ನಂತರ ಪೊಲೀಸರು ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು.

ನವೆಂಬರ್ 6 ರ ರಾತ್ರಿ ಆರೋಪಿ ಅಬುಬಕರ್ ಇರುವ ಸ್ಥಳವನ್ನು ಪೊಲೀಸರು ಮತ್ತು RAB ಇಂಟೆಲಿಜೆನ್ಸ್ ಪತ್ತೆಹಚ್ಚಿದೆ. ನಂತರ ಅಬುಬಕರ್ ಮತ್ತು ಸಪ್ನಾ ಅವರನ್ನು ಗಾಜಿಪುರ ಜಿಲ್ಲೆಯ ಬಸನ್ ಪೊಲೀಸ್ ಠಾಣೆ ವ್ಯಾಪ್ತಿಯ ಚೌರಸ್ತಾ ಪ್ರದೇಶದಿಂದ ಬಂಧಿಸಲಾಯಿತು. ಪೊಲೀಸರು ಆರೋಪಿಯನ್ನು ಸೋಣದಂಗ ಠಾಣೆಗೆ ಒಪ್ಪಿಸಿದ್ದಾರೆ.

ವಿಚಾರಣೆ ವೇಳೆ ಅಬುಬಕರ್ ತನ್ನ ಅಪರಾಧ ಕೃತ್ಯ ಒಪ್ಪಿಕೊಂಡಿದ್ದಾನೆ. ನಗರದ ಗೋಬರ್ಚಾಕ ಪ್ರದೇಶದಲ್ಲಿ ಕಿರಿದಾದ ಸ್ಥಳದಿಂದ ಪಾಲಿಥಿನ್‌ ನಲ್ಲಿ ಸುತ್ತಿದ ಕವಿತಾ ಅವರ ತುಂಡರಿಸಿದ ಕೈಗಳನ್ನು RAB ವಶಪಡಿಸಿಕೊಂಡಿದೆ.

Check Also

ಮುಸ್ಲಿಂ ರಾಷ್ಟ್ರವಾದ ತಜಿಕಿಸ್ತಾನದಲ್ಲಿ ಹಿಜಾಬ್ ಬ್ಯಾನ್​..!

ಭಾರತದಲ್ಲಿ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬಗ್ಗೆ ಬಹಳ ಹಿಂದಿನಿಂದಲೂ ಚರ್ಚೆ ನಡೆಯುತ್ತಿದೆ. ಕೆಲವು ರಾಜ್ಯಗಳು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಿದಾಗ, ವಿಷಯವು …

Leave a Reply

Your email address will not be published. Required fields are marked *

You cannot copy content of this page.