December 9, 2024
WhatsApp Image 2022-11-28 at 7.19.24 PM

ಉಳ್ಳಾಲ: ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷರಾದ ಯೋಗೀಶ್‌ ಶೆಟ್ಟಿ ಜಪ್ಪುರವರ ಮಾತೃಶ್ರೀಯವರಾದ ಶ್ರೀಮತಿ ಕಲ್ಯಾಣಿ ಶೆಟ್ಟಿ ಯವರು ನ. 15ರಂದು ದೈವಾದೀನರಾಗಿದ್ದರು. ಮೃತರು ಉಳಿದೊಟ್ಟು ದಿವಂಗತ ಬಿರ್ಮು ಶೆಟ್ಟಿ ಅವರ ಮಗಳು, ಪಡ್ಯಾರ ಮನೆ ದಿವಂಗತ ಸೀತಾರಾಮ ಶೆಟ್ಟಿ ಅವರ ಪತ್ನಿಯಾಗಿದ್ದು, ಇಂದು ಅವರ ವೈಕುಂಠ ಸಮಾರಾಧನೆ ಕಾರ್ಯಕ್ರಮವು ಕೊಲ್ಯ ಶ್ರೀ ಮುಕಾಂಬಿಕಾ ದೇವಸ್ಥಾನದಲ್ಲಿ ನಡೆಯಿತು.

ಈ ಕಾರ್ಯಕ್ರಮದ ಪ್ರಾರಂಭದಲ್ಲಿ ಚಿತ್ರ ನಿರ್ಮಾಪಕ ತಮ್ಮಣ್ಣ ಶೆಟ್ಟಿ, ವ್ಯಕ್ತಿ ಯೊಬ್ಬರು ದೈವಾದೀನರಾದ ಸಂದರ್ಭದಲ್ಲಿ ಅಳವಡಿಸ ಬೇಕಾದ ತುಳುನಾಡ ಕಟ್ಟು ಕಟ್ಟಲೆ ಬಗ್ಗೆ ವಿವರಣೆ ನೀಡಿದರು. ಖ್ಯಾತ ಉದ್ಯಮಿ ಜಗದೀಶ್ ಬೋಳೂರು,
ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಮೋನಪ್ಪ ಭಂಡಾರಿ, ಕರ್ನಾಟಕ ಸರ್ಕಾರದ ಅಲೆಮಾರಿ ನಿಗಮದ ಮಾಜಿ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳ್ಳಿದೊಟ್ಟು ಮೃತರ ಗುಣಗಾನ ಮಾಡಿದರು.

This image has an empty alt attribute; its file name is WhatsApp-Image-2022-11-29-at-9.49.53-AM.jpeg

ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ ಖಾದರ್, ಕೆ.ಎಂ.ಎಫ್ ಸಂಸ್ಥೆಯ ಅಧ್ಯಕ್ಷ ಸುಚರಿತ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಬಿಜೆಪಿ ಮುಖಂಡ ಚಂದ್ರಶೇಖರ್ ಉಚ್ಚಿಲ್, ಉಮನಾಥ್ ಬೋಳಾರ್,ಹೇಮಂತ್ ಶೆಟ್ಟಿ,ದೀರಜ್ ಕೊಂಡಣ, ರಾಘವ ಗಟ್ಟಿ, , ಜೆಡಿಎಸ್ ಮುಖಂಡ ಮೋಹನ್ ದಾಸ್ ಶೆಟ್ಟಿ ,ದಿನಕರ್ ಉಳ್ಳಾಲ್ , ಹರ್ಷರಾಜ್ ಮುದ್ಯ, ರಾಜರತ್ನ ಸನಿಲ್, ರಾಜ್ ಗೋಪಾಲ್, ಸುರೇಂದ್ರ ಶೆಟ್ಟಿ ಚಿಕ್ಕಮಗಳೂರು , ಜ್ಯೋತಿ ಜೈನ್, ಆಶಾ ಅತ್ತಾವರ್, ಮಂಜುನಾಥ್ ಅಡಪ ಸಂಕಬೆಲ್ , ಜೋಸೆಫ್ ಲೋಬೊ, ಇಬ್ರಾಹಿಂ ಜಪ್ಪು, ಕ್ಲೀಟಸ್ ಲೋಬೊ, ರಮೇಶ್ ಪೂಜಾರಿ, ಸುನೀಲ್ ಶೆಟ್ಟಿ ಕಾವೂರು, ಲಯನ್ಸ್ ಗಣೇಶ್ ಸಾಲಿಯಾನ್ ಜಪ್ಪಿನಮೊಗರು, ವಿಜಯ ಪ್ರಸಾದ್ ಆಳ್ವ, ಮಹಬಲ ಹೆಗಡೆ, ಸ್ವರ್ಣ ಸುಂದರ್ ಡಿಂಕಿ ಡೈನ್ ಕದ್ರಿ  ಮತ್ತು ಗ್ರಾಮ ಪಂಚಾಯತ್ ಅಧ್ಯಕ್ಷರುಗಳು,ವಿವಿಧ ಪಕ್ಷದ ಮುಖಂಡರುಗಳು,ಗಣ್ಯವ್ಯಕ್ತಿಗಳು,ಪತ್ರ ಕರ್ತರು,ಪಂಚಾಯತ್ ಸದಸ್ಯರು,ಕೌನ್ಸಿಲರ್ ಗಳು,ಉಧ್ಯಮಿಗಳು ಭಾಗವಹಿಸಿ ಮೃತರ ಅತ್ಮಕ್ಕೆ ಶಾಂತಿಕೋರಿ ಶ್ರದ್ಧಾಂಜಲಿ ಸಲ್ಲಿಸಿದರು.

This image has an empty alt attribute; its file name is WhatsApp-Image-2022-11-28-at-6.00.34-PM-1024x862.jpeg

This image has an empty alt attribute; its file name is WhatsApp-Image-2022-11-28-at-6.00.35-PM-1-1024x462.jpeg

About The Author

Leave a Reply

Your email address will not be published. Required fields are marked *

You cannot copy content of this page.