ನವದೆಹಲಿ: ಲೀವ್ ಇನ್ ರಿಲೇಶನ್ ಶಿಪ್‍ನಲ್ಲಿದ್ದ ಗೆಳತಿಯನ್ನು ಭೀಕರವಾಗಿ ಹತ್ಯೆಗೈದು 35 ಪೀಸ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇ ದಿನೇ ಭಯಾನಕ ವಿಷಯಗಳು ಹೊರಬರುತ್ತಿವೆ. ಆರೋಪಿ ಅಫ್ತಾಬ್ ಅಮೀನ್ ಪೂನಾವಾಲಾ ಹತ್ಯೆ ಬಳಿಕ ಡೇಟಿಂಗ್ ಆ್ಯಪ್ ಮೂಲಕ ಹಲವು ಯುವತಿಯರ ಜೊತೆ ಮಾತನಾಡುತ್ತಿದ್ದ. ಅದಾದ ಬಳಿಕ ಕೊಲೆ ಮಾಡಿದ್ದಕ್ಕೆ ಸಾಕ್ಷಿ ಸಿಗಬಾರದು ಎಂದು ತನ್ನ ಫೋನ್‍ನನ್ನು ಒಎಲ್‍ಎಕ್ಸ್‌ನಲ್ಲಿ ಮಾರಿದ್ದಾನೆ.
ಪೊಲೀಸ್ ಮೂಲಗಳ ಪ್ರಕಾರ ಅಫ್ತಾಬ್ ಮತ್ತು ಶ್ರದ್ಧಾ ಡೇಟಿಂಗ್ ಅಪ್ಲಿಕೇಶನ್ ಬಂಬಲ್ ಮೂಲಕ ಪರಸ್ಪರ ಭೇಟಿಯಾಗಿದ್ದರು. ಅದಾದ ಬಳಿಕ ಕಳೆದ 3 ವರ್ಷಗಳ ಕಾಲ ಒಟ್ಟಿಗೆ ಇದ್ದರು. ಆದರೆ ಮದುವೆ ವಿಚಾರಕ್ಕೆ ಜಗಳವಾಗಿ ಆಕೆಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದ. ಅದಾದ ಬಳಿಕ ಶ್ರದ್ಧಾಳ ದೇಹವನ್ನು 35 ಪೀಸ್ ಮಾಡಿ ಅದನ್ನು ಫ್ರಿಡ್ಜ್‌ನಲ್ಲಿ ಇಟ್ಟು ಆ ಬಳಿಕ ಆ ಎಲ್ಲ ದೇಹದ ಪೀಸ್‍ನ್ನು ಕಾಡಿನಲ್ಲಿ ವಿಲೇವಾರಿ ಮಾಡಿದ್ದ.
ಇನ್ನೂ ಶ್ರದ್ಧಾಳನ್ನು ಕೊಲೆ ಮಾಡಿದ ನಂತರ ಅಫ್ತಾಬ್ ಡೇಟಿಂಗ್ ಅಪ್ಲಿಕೇಶನ್‍ಗಳಲ್ಲಿ ಸಕ್ರಿಯರಾಗಿದ್ದ. ಕಳೆದ ಆರು ತಿಂಗಳಲ್ಲಿ ಅನೇಕ ಯುವತಿಯರನ್ನು ಭೇಟಿಯಾಗಿ, ಅವರ ಜೊತೆ ಸಂಬಂಧವನ್ನು ಹೊಂದಿದ್ದ. ಅದಾದ ಬಳಿಕ ಅಫ್ತಾಬ್ ಯಾರಿಗೂ ಸಂಶಯ ಬರಬಾರದು ಎಂದು ತನ್ನ ಫೋನ್‍ನನ್ನು ಒಎಲ್‍ಎಕ್ಸ್‌ನಲ್ಲಿ ಮಾರಾಟ ಮಾಡಿದ್ದಾನೆ ಎನ್ನುವ ವಿಷಯ ಇದೀಗ ಬೆಳಕಿಗೆ ಬಂದಿದೆ.