ದೇಶ

BREAKING NEWS : 3 ದಶಕದ ಬಳಿಕ ರಾಜೀವ್ ಗಾಂಧಿ ಹತ್ಯೆ ಆರೋಪಿ ‘ನಳಿನಿ ಶ್ರೀಹರನ್’ ಜೈಲಿನಿಂದ ಬಿಡುಗಡೆ

ವೆಲ್ಲೂರು : ಸುಪ್ರೀಂಕೋರ್ಟ್ ಆದೇಶದ ಒಂದು ದಿನದ ಬಳಿಕ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀಹರನ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಆರು ಅಪರಾಧಿಗಳನ್ನ 31 ವರ್ಷಗಳ ಜೈಲುವಾಸದ ನಂತರ ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿ ಆದೇಶದ ಬಳಿಕ ನಳಿನಿ ಶ್ರೀಹರನ್ ಶನಿವಾರ ಸಂಜೆ ಬಿಡುಗಡೆಯಾಗಿದ್ದಾರೆ. ಪೆರೋಲ್ ಷರತ್ತುಗಳ ಭಾಗವಾಗಿ ತನ್ನ ಉಪಸ್ಥಿತಿಯನ್ನ ಗುರುತಿಸಲು ಆಕೆ ಇಂದು ಬೆಳಿಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಳು. ಅಂದ್ಹಾಗೆ, ಮೇ ತಿಂಗಳಲ್ಲಿ, ಸರ್ವೋಚ್ಚ ನ್ಯಾಯಾಲಯವು ತನ್ನ ಅಸಾಧಾರಣ ಅಧಿಕಾರವನ್ನು …

Read More »

ವಾಟ್ಸಾಪ್ ನಕಲಿ ವೈರಲ್‌ ಸಂದೇಶದ ಯಡವಟ್ಟು: ಫ್ಲೇಮ್​ ಲಿಲ್ಲಿ ಗಡ್ಡೆ ತಿಂದು ಯುವಕ ಸಾವು

ಚನ್ನೈ: ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚಿಗೆ ವೈರಲ್‌ ಸುದ್ದಿಗಳು ಹೆಚ್ಚುತ್ತಿದ್ದು, ಕೆಲವು ಮಂದಿ ನಕಲಿ ಸುದ್ದಿಗಳನ್ನು ಕೂಡ ಹರಡುತ್ತಿದ್ದು, ಇದರಿಂದ ಹಲವು ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿರುವ ಸನ್ನಿವೇಶ ನಿರ್ಮಾಣವಾಗಿದೆ ಕೂಡ. ಈ ನಡುವೆ ವಾಟ್ಸಪ್‌ ಬಂದಿದ್ದ ಸಂದೇಶವನ್ನು ಅನುಸರಿಸಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಲೋಕನಾಥನ್ ಅವರು ತಿರುಪಟ್ಟೂರು ಜಿಲ್ಲೆಯ ಅಂಬೂರು ಬಳಿಯ ಮಿನ್ನೂರು ಮೂಲದವರು. 25 ವರ್ಷದ ಲೋಗನಾಥನ್ ಎನ್ನುವ ಯುವಕ ಮಿನ್ನೂರಿನ ಖಾಸಗಿ ಕಲ್ಲು ಕ್ವಾರಿಯಲ್ಲಿ ಕೆಲಸ ಮಾಡುತ್ತಿದ್ದ. ಈ ಸಂದರ್ಭದಲ್ಲಿ, ಲೋಗನಾಥನ್ ಸೆನ್ಸಾಂಟಲ್ ಹೂವಿನ ಸಸ್ಯದ ಗೆಡ್ಡೆ ಗೆಣಸುಗಳನ್ನು …

Read More »

ಅನಾರೋಗ್ಯದಲ್ಲಿರುವ ಲಾಲುಗೆ ಮೂತ್ರಪಿಂಡ ದಾನ ಮಾಡಲಿದ್ದಾರೆ ಸಿಂಗಪುರದಲ್ಲಿರುವ ಮಗಳು ರೋಶಿನಿ

ನವದೆಹಲಿ: ಅನಾರೋಗ್ಯಕ್ಕೆ ಒಳಗಾಗಿರುವ ರಾಷ್ಟ್ರೀಯ ಜನತಾ ದಳದ(ಆರ್‌ಜೆಡಿ) ವರಿಷ್ಠ ಲಾಲು ಪ್ರಸಾದ್ ಯಾದವ್ ಅವರಿಗೆ ಸಿಂಗಪುರದಲ್ಲಿರುವ ಮಗಳು ರೋಶಿನಿ ಯಾದವ್ ಕಿಡ್ನಿ ದಾನ ಮಾಡಲಿದ್ದಾರೆ ಎಂದು ಅವರ ಕುಟುಂಬದ ಆಪ್ತರು ತಿಳಿಸಿದ್ದಾರೆ. ಸಿಂಗಪುರದಲ್ಲಿ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆದಿದ್ದ 74 ವರ್ಷದ ಲಾಲು, ಕಳೆದ ತಿಂಗಳು ಸ್ವದೇಶಕ್ಕೆ ವಾಪಸ್ ಆಗಿದ್ದರು. ಆರೋಗ್ಯದ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಆರ್‌ಜೆಡಿ ಅಧ್ಯಕ್ಷರಿಗೆ ಕಿಡ್ನಿ ಕಸಿ ಮಾಡಿಸಿಕೊಳ್ಳಲು ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಂಗಪುರದಲ್ಲಿರುವ ಅವರ ಮಗಳು ರೋಶಿನಿ ಯಾದವ್, ತಮ್ಮ ತಂದೆಗಾಗಿ ಮೂತ್ರಪಿಂಡ ನೀಡಲು ಮುಂದೆ ಬಂದಿದ್ದಾರೆ …

Read More »

ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10% ಮೀಸಲಾತಿಗೆ ಸುಪ್ರಿಂ ಅಸ್ತು

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 10 ರಷ್ಟು ಮೀಸಲಾತಿ ಕಲ್ಪಿಸಿರುವುದರ ಕುರಿತು ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.ಹೌದು 10 ರಷ್ಟು ಮೀಸಲಾತಿ ನೀಡುವ ಕೇಂದ್ರ ಸರ್ಕಾರದ ನಿರ್ಧಾರವನ್ನ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಐವರು ನ್ಯಾಯಮೂರ್ತಿಗಳ ಸಂವಿಧಾನಿಕ ಪೀಠವು ಇಡಬ್ಲ್ಯೂಎಸ್ ಮೀಸಲಾತಿಗೆ ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದೆ. ಕೇಂದ್ರ ಸರ್ಕಾರದಿಂದ ಇಡಬ್ಲ್ಯುಎಸ್ ಗೆ 10% ಮೀಸಲಾತಿ ಒದಗಿಸುವ 103ನೇ ಸಾಂವಿಧಾನಿಕ ತಿದ್ದುಪಡಿಯ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ 40ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆ ಆಗಿದ್ದವು. ಜಸ್ಟೀಸ್ ಉದಯ್ …

Read More »

ನಾಳೆ ಸಂಭವಿಸಲಿದೆ ವರ್ಷದ ಕೊನೆಯ ʻಚಂದ್ರಗ್ರಹಣʼ. ಭಾರತದಲ್ಲಿ ಚಂದ್ರಗ್ರಹಣದ ಎಲ್ಲೆಲ್ಲಿ ಗೋಚರಿಸಲಿದೆ? ಇಲ್ಲಿದೆ ಮಾಹಿತಿ

ನವದೆಹಲಿ: 2022 ರ ಕೊನೆಯ ʻಸಂಪೂರ್ಣ ಚಂದ್ರಗ್ರಹಣ (Lunar Eclipse)ʼವು ನವೆಂಬರ್ 8 ರಂದು(ನಾಳೆ) ಸಂಭವಿಸಲಿದೆ. ನಾಸಾ (ನ್ಯಾಷನಲ್ ಏರೋನಾಟಿಕ್ಸ್ ಮತ್ತು ಸ್ಪೇಸ್ ಅಡ್ಮಿನಿಸ್ಟ್ರೇಷನ್) ಪ್ರಕಾರ, ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮೂರು ವರ್ಷಗಳವರೆಗೆ ಸಂಭವಿಸುವುದಿಲ್ಲ. ಈ ಮಾಹಿತಿಯನ್ನು ಹಂಚಿಕೊಂಡಿರುವ ನಾಸಾ ಟ್ವೀಟ್ ಮಾಡಿದ್ದು, ‘ನವೆಂಬರ್ 8, 2022 ರಂದು ಚಂದ್ರನು ಭೂಮಿಯ ನೆರಳಿನಲ್ಲಿ ಹಾದುಹೋಗುತ್ತಾನೆ ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಇದು ಮತ್ತೆ 3 ವರ್ಷಗಳ ನಂತ್ರ ಸಂಭವಿಸುತ್ತದೆ. ಆದ್ದರಿಂದ ಇದು ನಿಮ್ಮ ಪ್ರದೇಶದಲ್ಲಿ ಗೋಚರಿಸುತ್ತದೆಯೇ ಎಂದು ಪರೀಕ್ಷಿಸಲು ಮರೆಯದಿರಿ. ಕೊನೆಯ ಬಾರಿಗೆ ಮೇ …

Read More »

You cannot copy content of this page.