ಪೋಷಕರು – ಶಿಕ್ಷಕರ ಭೇಟಿ ತಪ್ಪಿಸಲು ‘ರೈಲ್ವೆ ಹಳಿಗೆ ತಲೆಕೊಟ್ಟ’ ಬಾಲಕ : ಆತ್ಮಹತ್ಯೆಗೂ ಮುನ್ನ ‘ಬರೆದ ಪತ್ರ ವೈರಲ್ ‘ 

ಲಕ್ನೋ : ಶಾಲೆಯಲ್ಲಿ ಪಾಲಕರು-ಶಿಕ್ಷಕರನ್ನು ಭೇಟಿಯಾಗುವುದನ್ನು ತಪ್ಪಿಸಲು 9 ನೇ ತರಗತಿಯ ವಿದ್ಯಾರ್ಥಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಲಕ್ನೋದಲ್ಲಿ ನಡೆದಿದೆ. ವರದಿಗಳ ಪ್ರಕಾರ ಗೋಮತಿ ನಗರದ ನಿವಾಸಿ ಆದಿತ್ಯ ತಿವಾರಿ ಎಂಬ ವಿದ್ಯಾರ್ಥಿ ರೈಲ್ವೇ ಹಳಿಯ ಮೇಲೆ ಮಲಗಿ ಆತ್ಮಹತ್ಯೆಗೆ ಯತ್ನಿಸಿದ್ದು ಇದೀಗ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

CMS ಖಾಸಗಿ ಶಾಲೆಯ PPRO ವಿದ್ಯಾರ್ಥಿ ತನ್ನ ಅಧ್ಯಯನದಲ್ಲಿ ಉತ್ತಮವಾಗಿದ್ದಾನೆ. ಆದರೆ ಅವನು ತನ್ನ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ಕಾರಣ ಪೋಷಕರು ಮತ್ತು ಶಿಕ್ಷಕರ ಸಭೆಯನ್ನು ಕರೆಯಲಾಗಿತ್ತು.

ವಿದ್ಯಾರ್ಥಿ ಆದಿತ್ಯನೊಂದಿಗೆ ಶಿಕ್ಷಕರು ಮಾತನಾಡಬೇಕೆಂದುಕೊಂಡಾಗಲೆಲ್ಲ ಆತ ಸಭೆಯಿಂದ ತಪ್ಪಿಸಿಕೊಂಡು ಹೋಗುತ್ತಿದ್ದನು. ಹೀಗಾಗಿ ಆದಿತ್ಯನ ಮನೆಗೆ ಭೇಟಿ ಮಾಡಲು ಶಿಕ್ಷಕರು ನಿರ್ಧರಿಸಿದ್ದರು ಎಂದು ವರದಿಯಾಗಿದೆ. ಇದರಿಂದ ಹೆದರಿದ ಆದಿತ್ಯ ತನ್ನ ಜೀವನವನ್ನು ಅಂತ್ಯಗೊಳಿಸಲು ಯತ್ನಿಸಿದ್ದ ಎನ್ನಲಾಗಿದೆ. ಅದೃಷ್ಟವಶಾತ್ ಆತನ ಜೀವಕ್ಕೆ ಯಾವುದೇ ಅಪಾಯವಾಗಿಲ್ಲ. ಸಣ್ಣಪುಟ್ಟ ಗಾಯಗಳಿಂದ ಆತನನ್ನು ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ.

ಇದಕ್ಕೂ ವಿದ್ಯಾರ್ಥಿಯು ತನ್ನ ಶಿಕ್ಷಕರಿಗೆ ಬರೆದಿದ್ದ ಕ್ಷಮೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.’ಗೌರವಾನ್ವಿತ ಮೇಡಂ, ನಾನು 9-ಸಿ ತರಗತಿಯ ಆದಿತ್ಯ ತಿವಾರಿ. ನನ್ನ ತಪ್ಪಿಗಾಗಿ ನಾನು ಕ್ಷಮೆಯಾಚಿಸುತ್ತೇನೆ, ನಾನು ಏನು ಮಾಡಿದೆ, ಅದು ಅತ್ಯಂತ ತಪ್ಪು. ಮೇಡಂ, ಇದು ಎಂದಿಗೂ ಪುನರಾವರ್ತನೆಯಾಗುವುದಿಲ್ಲ ಎಂದು ನಾನು ಭರವಸೆ ನೀಡುತ್ತೇನೆ’ ಎಂದು ಆತ್ಮಹತ್ಯೆ ಯತ್ನಕ್ಕೂ ಮುನ್ನ ವಿದ್ಯಾರ್ಥಿ ಪತ್ರದಲ್ಲಿ ಬರೆದಿದ್ದಾರೆ.

Check Also

ಉಳ್ಳಾಲ: ಹರೇಕಳ-ಅಡ್ಯಾರ್ ಹೊಸ ಸೇತುವೆಯಲ್ಲಿ ಅಪಘಾತ : ಮೂವರಿಗೆ ಗಾಯ

ಉಳ್ಳಾಲ: ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಲ್ಲಿ ಮೂವರು ಗಾಯಗೊಂಡಿರುವ ಘಟನೆ ಹರೇಕಳ- ಅಡ್ಯಾರ್ ನೂತನ ಸೇತುವೆಯಲ್ಲಿ ಇಂದು ಸಂಭವಿಸಿದೆ …

Leave a Reply

Your email address will not be published. Required fields are marked *

You cannot copy content of this page.