ಬೆಂಗಳೂರು: ಇಡೀ ವಿಶ್ವವನ್ನೇ ಕನ್ನಡ ಸಿನೆಮಾ ಕಡೆ ನೋಡುವಂತೆ ಮಾಡಿದ್ದ ಕಾಂತಾರ ಸಿನೆಮಾದ ಅಧ್ಯಾಯ 1 ಇದೀಗ ಚಿತ್ರೀಕರಣ ಪ್ರಾರಂಭವಾಗಲಿದೆ., ಈಗಾಗಲೇ ಸಿನೆಮಾದ ಮುಹೂರ್ತ ಮುಗಿದಿದ್ದು, ಫಸ್ಟ್ ಲುಕ್ ಕೂಡ ಭರ್ಜರಿ ರೆಸ್ಪಾನ್ಸ್ ಪಡೆದಿದೆ.
ಕಾಂತಾರ ಸಿನೆಮಾದ ಮೊದಲ ಭಾಗವನ್ನು ತೆರೆ ಮೆಲೆ ತರಲು ಹೊರಟಿರುವ ನಿರ್ದೇಶಕ ರಿಷಬ್ ಶೆಟ್ಟಿ ಇದೀಗ ಕನ್ನಡದ ಕಲಾವಿದರ ಆಯ್ಕೆಗಾಗಿ ಆಡಿಷನ್ ಮಾಡಲು ಹೊರಟಿದ್ದಾರೆ. ಹಿರೋ ಆಗಿ ರಿಷಬ್ ಶೆಟ್ಟಿ ಇರಲಿದ್ದು, ಮತ್ತೆ ಉಳಿದವರ ಆಯ್ಕೆಗೆ ಆಡಿಷನ್ ನಡೆಯುತ್ತಿದೆ.ಅದರಂತೆ ʼಕಾಂತಾರʼ ಚಿತ್ರದಲ್ಲಿ ನಟಿಸಲು ಕಲಾವಿದರು ಬೇಕಾಗಿದ್ದಾರೆ ಎಂದು ಚಿತ್ರತಂಡ ಪ್ರಕಟಣೆಯಲ್ಲಿ ಹೇಳಿದೆ.
ಸಿನಿಮಾದಲ್ಲಿ ನಟಿಸಲು 30 ರಿಂದ 60 ರ ವಯಸ್ಸಿನ ಪುರುಷರು ಬೇಕಾಗಿದ್ದಾರೆ. ಇನ್ನು 18 ರಿಂದ 60ರ ವಯಸ್ಸಿನ ಮಹಿಳೆಯರು ಬೇಕಾಗಿದ್ದಾರೆ ಎಂದು ರಿಷಬ್ ಶೆಟ್ಟಿ ಪೋಸ್ಟ್ ನಲ್ಲಿ ಹೇಳಿದ್ದಾರೆ.
ನೋಂದಣಿಗಾಗಿ Kantara.film ಲಿಂಕ್ ಒತ್ತಿ ತಮ್ಮ ಪ್ರತಿಭೆಯನ್ನು ತೋರಿಸಬಹುದು. ರೀಲ್ಸ್ ಮತ್ತು ಅವುಗಳನ್ನೇ ಹೋಲುವ ಇತರೆ ವಿಷಯಗಳನ್ನು ಸ್ವೀಕರಿಸುವುದಿಲ್ಲ ಎಂದು ಚಿತ್ರತಂಡ ಹೇಳಿದೆ. ಡಿ.14 ರವರೆಗೆ ಲಿಂಕ್ ಚಾಲ್ತಿಯಲ್ಲಿರುತ್ತದೆ.
Miyapadavu manjeshwara kasaragodu