ದೇಶ

ಜ್ಯೋತಿಷಿ ಮಾತು ಕೇಳಿ ಗಂಡನನ್ನೇ ಕೊಂದ ಲೇಡಿ ಎಸ್​ಐ..!

ಕೃಷ್ಣಗಿರಿ: ಸಹಚರರೊಂದಿಗೆ ಸೇರಿ ತನ್ನಿಂದ ಬೇರ್ಪಟ್ಟ ಪತಿಯನ್ನು ಮಹಿಳಾ ಸಬ್​ ಇನ್ಸ್​ಪೆಕ್ಟರ್​, ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉತ್ತಂಗರೈನಲ್ಲಿ ಶನಿವಾರ ರಾತ್ರಿ ನಡೆದಿದೆ. ಸೆಂಥಿಲ್​​ ಕುಮಾರ್​ (48) ಮೃತ ದುರ್ದೈವಿ. ಉತ್ತಂಗರೈ ಮೂಲದ ಎಸ್​. ಚಿತ್ರಾ (47), ಉತ್ತಂಗರೈನ ಭಾರತೀಪುರಂ ಮೂಲದ ಎಂ ಸರೋಜಾ (37) ಮತ್ತು ಎಸ್. ವಿಜಯ ಕುಮಾರ್ (33) ಹಾಗೂ ತೂತುಕುಡಿಯ ರಾಜ ಪಾಂಡಿಯನ್ ಬಂಧಿತ ಆರೋಪಿಗಳು. ಉಳಿದ ಮೂವರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಸಿಂಗಾರಪೇಟೈ ಪೊಲೀಸ್​ ಠಾಣೆಯಲ್ಲಿ ವಿಶೇಷ ಸಬ್​ ಇನ್ಸ್​ಪೆಕ್ಟರ್​ ಆಗಿದ್ದ …

Read More »

ದುಬೈನಿಂದ ಒಳ ಉಡುಪಿನಲ್ಲಿ 1ಕೋಟಿ‌ ಮೌಲ್ಯದ ಚಿನ್ನಾಭರಣ ಸಾಗಾಟದ ವೇಳೆ ಸಿಕ್ಕಿಬಿದ್ದ ಯುವತಿ

ಕಾಸರಗೋಡು:ದುಬೈಯಿಂದ ಒಳ ಉಡುಪಿನಲ್ಲಿ ಬಚ್ಚಿಟ್ಟು ಒಂದು ಕೋಟಿ ರೂ.ಮೌಲ್ಯದ ಚಿನ್ನಾಭರಣವನ್ನು ಸಾಗಾಟ ಮಾಡುತ್ತಿದ್ದ ಯುವತಿಯನ್ನು ಕಲ್ಲಿಕೋಟೆ ಕರಿಪ್ಪೂರು ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡಿನ ಶಹಲಾ (19) ಬಂಧಿತ ಯುವತಿ.ಈಕೆ 1 ಕೋಟಿ ಮೌಲ್ಯದ ಚಿನ್ನಾಭರಣವನ್ನು ಮೂರು ಪ್ಯಾಕೇಟ್ ಮಾಡಿ ಒಳ ಉಡುಪಿನಲ್ಲಿ ಇಟ್ಟು ಸಾಗಾಟಕ್ಕೆ ಯತ್ನಿಸಿದ್ದರು. ಭಾನುವಾರ ರಾತ್ರಿ ದುಬೈಯಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ನಲ್ಲಿ ಬಂದಿದ್ದ ಈಕೆ ಕಸ್ಟಮ್ಸ್ ತಪಾಸಣೆ ಬಳಿಕ ರಾತ್ರಿ 11 ಗಂಟೆಗೆ ವಿಮಾನ ನಿಲ್ದಾಣದಿಂದ ಹೊರ ಬಂದಿದ್ದರು. ಪೊಲೀಸರು ಲಭಿಸಿದ ಖಚಿತ ಮಾಹಿತಿಯಂತೆ ಯುವತಿಯನ್ನು …

Read More »

ಕೇರಳದ ಈ ವಿಶ್ವವಿದ್ಯಾನಿಲಯದಲ್ಲಿ ವಿಧ್ಯಾರ್ಥಿನಿಯರಿಗೆ 60 ದಿನ ರಜೆ -ಯಾವ ಕಾರಣಕ್ಕೆ ಗೊತ್ತಾ…?

ಕೊಟ್ಟಾಯಂ : ಕೇರಳದಲ್ಲಿ ದೇಶದಲ್ಲಿ ಇದೇ ಮೊದಲ ಬಾರಿಗೆ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿರುವ ವಿಧ್ಯಾರ್ಥಿನಿಯರಿಗೆ 60 ದಿನಗಳ ಮೆಟರ್ನಿಟಿ ರಜೆ ನೀಡಲು ತೀರ್ಮಾನಿಸಿದೆ. ಕೊಟ್ಟಾಯಂನ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯ ಸ್ನಾತಕ (ಯುಜಿ) ಸ್ನಾತಕೋತ್ತರ (ಪಿಜಿ) ವಿದ್ಯಾರ್ಥಿನಿಯರಿಗೆ ಈ ಅವಕಾಶ ನೀಡಲಿದೆ. ವಿವಿಯ ಕುಲಪತಿ ಸಿ.ಟಿ ಅರವಿಂದ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಿಂಡಿಕೇಟ್ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನ ಮಾತೃತ್ವ ರಜೆ ನೀಡಲಾಗುತ್ತದೆ. ಇದರಿಂದ ವಿದ್ಯಾರ್ಥಿನಿಯರು ವಿದ್ಯಾಭ್ಯಾಸ ಮೊಟಕುಗೊಳಿಸುವುದನ್ನು ತಡೆಯಬಹುದಾಗಿದೆ ಎಂದು ವಿವಿ ತಿಳಿಸಿದೆ. …

Read More »

“ನಾನಿನ್ನೂ ಸತ್ತಿಲ್ಲ, ಬದುಕಿದ್ದೇನೆ” ಹೊಸ ವಿಡಿಯೋ ಹರಿಬಿಟ್ಟ ಮೋಸ್ಟ್ ವಾಂಟೆಂಡ್ ಉಗ್ರ ‘ಅಲ್-ಜವಾಹಿರಿ’

ನವದೆಹಲಿ : ಅಲ್ ಖೈದಾ ಹೊಸ ವೀಡಿಯೋವನ್ನ ಬಿಡುಗಡೆ ಮಾಡಿದ್ದು, ಅದರಲ್ಲಿ ಮೋಸ್ಟ್ ವಾಂಟೆಂಡ್ ಉಗ್ರ ಅಲ್-ಜವಾಹಿರಿ ಅವರ ಧ್ವನಿ ಕೇಳಿಸುತ್ತಿದೆ. ಈ ವೀಡಿಯೋದ ಮೂಲಕ, ಭಯೋತ್ಪಾದಕ ಸಂಘಟನೆ ತನ್ನ ನಾಯಕ ಜೀವಂತವಾಗಿದ್ದಾನೆ ಎಂದು ಹೇಳಿಕೊಂಡಿದೆ. ಮಾಧ್ಯಮ ವರದಿಗಳ ಪ್ರಕಾರ, ಅಲ್-ಖೈದಾ ಈ 35 ನಿಮಿಷಗಳ ವೀಡಿಯೊವನ್ನು ಶುಕ್ರವಾರ (ಡಿಸೆಂಬರ್ 23) ಬಿಡುಗಡೆ ಮಾಡಿದೆ. ಈ ರೆಕಾರ್ಡಿಂಗ್ ಅಲ್-ಜವಾಹಿರಿಯದ್ದಾಗಿದೆ ಎಂದು ಭಯೋತ್ಪಾದಕ ಸಂಘಟನೆ ಹೇಳಿಕೊಂಡಿದೆ. ಆದಾಗ್ಯೂ, ರೆಕಾರ್ಡಿಂಗ್ ಯಾವಾಗ ಮಾಡಲಾಗಿದೆ ಎಂಬುದರ ಬಗ್ಗೆ ಮಾಹಿತಿಯನ್ನ ನೀಡಲಾಗಿಲ್ಲ. ಈ ವೀಡಿಯೊವನ್ನ ಬಿಡುಗಡೆ ಮಾಡುವ ಮೂಲಕ, ಅಲ್-ಖೈದಾ …

Read More »

BREAKING NEWS : ಅಯ್ಯಪ್ಪನ ದರ್ಶನ ಪಡೆದು ವಾಪಸ್ಸಾಗುವಾಗ ಘೋರ ಅಪಘಾತ ; 40 ಅಡಿ ಕಂದಕಕ್ಕೆ ಕಾರು ಬಿದ್ದು, 8 ಭಕ್ತರು ಸಾವು

 ಕೇರಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಯ್ಯಪ್ಪ ಭಕ್ತರು ಶಬರಿಮಲೆ ದರ್ಶನಕ್ಕೆ ತೆರಳುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ಕಾರು ಕಣಿವೆಗೆ ಪಲ್ಟಿಯಾಗಿದ್ದು, ಈ ಅಪಘಾತದಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. ಥೇಣಿ ಜಿಲ್ಲೆಯ ಕುಮುಲಿ ಪರ್ವತ ಕಣಿವೆಯಲ್ಲಿ ಘೋರ ಘಟನೆ ನಡೆದಿದ್ದು, 40 ಅಡಿ ಆಳದ ಗುಂಡಿಗೆ ಕಾರು ಉರುಳಿಬಿದ್ದ ಪರಿಣಾಮ 8 ಭಕ್ತರು ಸಾವನ್ನಪ್ಪಿದ್ದಾರೆ ಎಂದು ತೇನಿ ಜಿಲ್ಲಾಧಿಕಾರಿ ಕೆ.ವಿ.ಮುರಳೀಧರನ್ ತಿಳಿಸಿದ್ದಾರೆ.

Read More »

ಕರ್ನಾಟಕ ಸೇರಿದಂತೆ ಯಾವ ರಾಜ್ಯಗಳಲ್ಲಿ ‘ಕೋವಿಡ್‌ ಮಾರ್ಗಸೂಚಿ’ ಇದೇ? ಇಲ್ಲಿದೆ ನೋಡಿ ಮಾಹಿತಿ

ನವದೆಹಲಿ: ಕರೋನಾ ವೈರಸ್ ಮತ್ತೊಮ್ಮೆ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ. ಕರೋನಾದ ಓಮಿಕ್ರಾನ್ ರೂಪಾಂತರವು ವೇಗವಾಗಿ ಬೆಳೆಯುತ್ತಿದೆ. ಇದನ್ನು ತಡೆಗಟ್ಟಲು ದೇಶದ ವಿವಿಧ ರಾಜ್ಯಗಳು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ನಡುವೆ ಕೇಂದ್ರ ಸರ್ಕಾರವು ದೇಶದ ಎಲ್ಲಾ ಕೇಂದ್ರಡಾಳಿತ ಪ್ರದೇಶಗಳು ರಾಜ್ಯಗಳು ಪರೀಕ್ಷೆ, ಮಾದರಿಗಳ ಪರೀಕ್ಷೆಯನ್ನು ಹೆಚ್ಚಿಸಲು, ಸ್ಥಳೀಯ ಅಧಿಕಾರಿಗಳಿಗೆ ಜಾಗರೂಕರಾಗಿರಲು ಆದೇಶಿಸಿವೆ. ಚೀನಾದಲ್ಲಿ (ಚೀನಾ) ಕರೋನಾ ಪ್ರಕರಣಗಳ ಹೆಚ್ಚಳದ ನಂತರ ಈ ಜಾಗರೂಕತೆಯನ್ನು ಕಾಯ್ದುಕೊಳ್ಳಲಾಗುತ್ತಿದೆ. ಕರ್ನಾಟಕದಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳಲಾಗದೆ . ಕರೋನಾ ವಿರುದ್ಧ ಮುನ್ನೆಚ್ಚರಿಕೆಗಳಿಗಾಗಿ ಯಾವ ರಾಜ್ಯವು ಯಾವ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು …

Read More »

BREAKIN NEWS : ಕೋವಿಡ್ ಪರಿಶೀಲನಾ ಸಭೆ : ಮಾಸ್ಕ್ ಕಡ್ಡಾಯ ರಾಜ್ಯಗಳಿಗೆ ಪ್ರಧಾನಿ ಸೂಚನೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಕೋವಿಡ್ ಪರಿಸ್ಥಿತಿ ಕುರಿತಂತೆ ಉನ್ನತ ಮಟ್ಟದ ಸಭೆ ನಡೆಸಿದ್ದರು. ಈ ವೇಳೆ ಮಾಸ್ಕ್ ಧರಿಸುವುದು, ಕೋವಿಡ್ ಪರೀಕ್ಷೆ ಹೆಚ್ಚಿಸುವಂತೆ ಹಾಗೂ ಜೀನೋಮ್ ಅನುಕ್ರಮದ ಮೇಲೆ ಕೇಂದ್ರೀಕರಿಸಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.   ಪಿಎಂ ಮೋದಿ ಅವರು ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲು ಮತ್ತು ಎಲ್ಲಾ ಸಕಾರಾತ್ಮಕ ಪ್ರಕರಣಗಳ ಜೀನೋಮ್ ಅನುಕ್ರಮದ ಮೇಲೆ ಕೇಂದ್ರೀಕರಿಸಲು ರಾಜ್ಯಗಳಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಜೀನೋಮ್ ಸೀಕ್ವೆನ್ಸಿಂಗ್ ಮತ್ತು ಹೆಚ್ಚಿದ ಪರೀಕ್ಷೆಯ ಮೇಲೆ ಕೇಂದ್ರೀಕರಿಸುವ ಮೂಲಕ ಬಲವರ್ಧಿತ ಕಣ್ಗಾವಲು ಅಗತ್ಯವಿದೆ ಎಂದು ಕೋವಿಡ್ ಪರಿಶೀಲನಾ ಸಭೆಯಲ್ಲಿ …

Read More »

ಆಸ್ಪತ್ರೆಯ ಕಪಾಟಿನಲ್ಲಿ ಮಗಳ, ಬೆಡ್ ಕೆಳಗಡೆ ತಾಯಿಯ ಮೃತದೇಹ ಪತ್ತೆ..!

ಗುಜರಾತ್:  ತಾಯಿ ಮತ್ತು ಮಗಳ ಶವ ಆಸ್ಪತ್ರೆಯಲ್ಲಿ ಪತ್ತೆಯಾದ ಘಟನೆ ಅಹಮದಾಬಾದ್‌ನ ಭೂಭಾಯ್ ಪಾರ್ಕ್ ಬಳಿ ನಡೆದಿದೆ. ಆಪರೇಷನ್ ಥಿಯೇಟರ್ ನ ಕಪಾಟಿನಲ್ಲಿ ಮಗಳ ಶವ ಪತ್ತೆಯಾಗಿದ್ದು, ನಂತರ ಹಾಸಿಗೆಯ ಕೆಳಗೆ ತಾಯಿಯ ಶವ ಪತ್ತೆಯಾಗಿದೆ. ಕಗ್ಡಾಪಿತ್ ಪೊಲೀಸ್ ಠಾಣೆ ವ್ಯಾಪ್ತಿಯ ಭೂಲಾಭಾಯಿ ಪಾರ್ಕ್ ಬಳಿ ಇರುವ ಆಸ್ಪತ್ರೆಯೊಳಗೆ ಕೆಟ್ಟ ವಾಸನೆ ಬರುತ್ತಿದೆ ಎಂದು ನಮಗೆ ಮಾಹಿತಿ ಬಂದಿತ್ತು.ಆಸ್ಪತ್ರೆಯ ಆಪರೇಷನ್ ಥಿಯೇಟರ್ ಒಳಗಿದ್ದ ಕಪಾಟು ವಾಸನೆ ಬರುತ್ತಿದ್ದನ್ನು ಆಸ್ಪತ್ರೆಯ ಸಿಬ್ಬಂದಿ ಅದನ್ನು ತೆರೆದರು.ಒಳಗೆ 30 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಬಳಿಕ ಆಸ್ಪತ್ರೆ ಕಪಾಟಿನಲ್ಲಿ …

Read More »

ದೇಶದಲ್ಲಿ ಪುನಃ ಮಾಸ್ಕ್ ಕಡ್ಡಾಯವಾಗುವ ಸಾಧ್ಯತೆ! – ಕೇಂದ್ರ ಸರಕಾರ

ನವದೆಹಲಿ – ಚೀನಾದಲ್ಲಿ ಕೊರೋನಾ ದೊಡ್ಡ ಪ್ರಮಾಣದಲ್ಲಿ ಭೀಕರ ರೂಪವನ್ನು ತಾಳಿದೆ. ಇಲ್ಲಿ ಮುಂದಿನ ೩ ತಿಂಗಳಲ್ಲಿ ಲಕ್ಷಾಂತರ ಜನರ ಸಾವು ಸಂಭವಿಸಲಿರುವ ಸಾಧ್ಯತೆಯನ್ನು ಊಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಜಗತ್ತಿನಲ್ಲಿ ಜಾಗೃತೆಯಿಂದಿರಲು ಎಚ್ಚರಿಸಲಾಗಿದೆ. ಭಾರತದಲ್ಲಿಯೂ ಕೇಂದ್ರೀಯ ಆರೋಗ್ಯ ಮಂತ್ರಿಗಳಾದ ಡಾ. ಭಾರತಿ ಪವಾರರವರು ‘ದೇಶದಲ್ಲಿ ಪುನಃ ಮಾಸ್ಕನ್ನು ಖಡ್ಡಾಯಗೊಳಿಸುವ ಸಾಧ್ಯತೆ ನಿರ್ಮಾಣವಾಗಿದೆ’, ಎಂದು ಪತ್ರಿಕಾ ಪರಿಷತ್ತಿನಲ್ಲಿ ಹೇಳಿದ್ದಾರೆ. ಚೀನಾದ ಪರಿಸ್ಥಿತಿಯಿಂದಾಗಿ ಭಾರತದಲ್ಲಿ ಜಾಗೃತೆಯ ಕ್ರಮವೆಂದು ಉಪಾಯಯೋಜನೆಗಳನ್ನು ಮಾಡಲಾಗುತ್ತಿದೆ. ಕೇಂದ್ರೀಯ ಆರೋಗ್ಯ ಮಂತ್ರಾಲಯದಿಂದ ಮಾರ್ಗದರ್ಶಕ ತತ್ತ್ವಗಳನ್ನು ಜ್ಯಾರಿಗೊಳಿಸಲಾಗಿದೆ. ಕೇಂದ್ರೀಯ ಆರೋಗ್ಯ ಮಂತ್ರಿಗಳಾದ ಭಾರತಿ ಪವಾರರವರು ಪತ್ರಿಕಾ …

Read More »

BIGG NEWS : 35 ದಿನಗಳ ಶಬರಿಮಲೆಯಾತ್ರೆ ವೇಳೆ 23 ಮಂದಿಗೆ ಹೃದಯಾಘಾತ :106 ಮಂದಿ ಆಸ್ಪತ್ರೆಗೆ ದಾಖಲು

ಶಬರಿಮಲೆ : ಈ ವರ್ಷ ಶಬರಿಮಲೆ ಯಾತ್ರೆಗೆ ತೆರಳಿದವರಲ್ಲಿ ಹೃದಯಾಘಾತದಿಂದ 23 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈಗಾಗಲೇ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಯಿಂದ 106 ಮಂದಿಯನ್ನು ಪಂಪಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದು ಕೋವಿಡ್ ನಂತರದ ಸಮಸ್ಯೆಗಳಿಗೆ ಸಂಬಂಧಿಸಿರಬಹುದು ಎಂದು ತಜ್ಞರು ಮಾಹಿತಿ ತಿಳಿಸಿದ್ದಾರೆ. ನೀಲಿಮಲ ಮತ್ತು ಅಪಾಚಿಮೇಡುವಿನಲ್ಲಿ ಹೆಚ್ಚಿನ ಜನರು ಅಸ್ವಸ್ಥಗೊಂಡಿದ್ದಾರೆ. 35 ದಿನಗಳಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ 23 ಮಂದಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪಂಪಾ ಮತ್ತು ಸನ್ನಿಧಾನಂ ನಡುವಿನ ಕಾರ್ಡಿಯೋ ಕೇಂದ್ರಗಳಲ್ಲಿ ಕೇವಲ ಆಮ್ಲಜನಕ ಸಿಲಿಂಡರ್‌ಗಳು ಮಾತ್ರ ಇವೆ. ಹೆಚ್ಚಿನ ಚಿಕಿತ್ಸೆಗಾಗಿ …

Read More »

You cannot copy content of this page.