ದೇಶ

ಯುಪಿ ಸಿಎಂ ಯೋಗಿ ಮೊರೆ ಹೋದ ನಟ ಸುನೀಲ್ ಶೆಟ್ಟಿ

ನವದೆಹಲಿ: ಬಾಲಿವುಡ್ ಹಿರಿಯ ನಟ ಸುನೀಲ್ ಶೆಟ್ಟಿ ಪ್ರವೃತ್ತಿಯನ್ನು ತಡೆಯಲು ಸಹಾಯ ಮಾಡುವಂತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್  ಅವರನ್ನು ಒತ್ತಾಯಿಸಿದ್ದಾರೆ ಮತ್ತು ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡುವಂತೆ ಕೋರಿದ್ದಾರೆ.   ಪ್ರವೃತ್ತಿಯ ಬಗ್ಗೆ ಮಾತನಾಡಿದ ನಟ ಸುನೀಲ್ ಶೆಟ್ಟಿ, ʻ#ಬಾಲಿವುಡ್ ಅನ್ನು ಬಹಿಷ್ಕರಿಸಿʼ ಇಂತಹ ಟ್ರೆಂಡ್ ಬಾಲಿವುಡ್‌ಗೆ ಒಳ್ಳೆಯದಲ್ಲ. ನೀವು ಅದನ್ನು ನಿಲ್ಲಿಸಬಹುದು. ಟ್ವಿಟ್ಟರ್‌ನಲ್ಲಿನ ಟ್ರೆಂಡ್‌ಗಳನ್ನು ನಿಲ್ಲಿಸಬಹುದು. ಯುಪಿ ಜನರ ಬಗ್ಗೆ ಮಾಡಿರುವ ಗ್ರಹಿಕೆಗೆ ನನಗೆ ಬೇಸರವಾಗಿದೆ. ನಮ್ಮ ಸಂಗೀತ ಮತ್ತು ಕಲೆಯಿಂದ ಭಾರತವನ್ನು ವಿಶ್ವದಲ್ಲಿ …

Read More »

BREAKING NEWS : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: ಪಾಕ್ ಭಯೋತ್ಪಾದಕ ಸಂಘಟನೆ ʻTRFʼ ನಿಷೇಧ

ನವದೆಹಲಿ: ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ನ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್‌ಎಫ್) ಅನ್ನು ಗೃಹ ಸಚಿವಾಲಯ ಗುರುವಾರ ನಿಷೇಧಿಸಿದೆ. ಕಳೆದ ಕೆಲವು ವರ್ಷಗಳಿಂದ ಕಾಶ್ಮೀರಿ ಪಂಡಿತರು ಮತ್ತು ವಲಸೆ ಕಾರ್ಮಿಕರ ಮೇಲೆ ಹಾಗೂ ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲಿನ ಹೆಚ್ಚಿನ ದಾಳಿಗಳ ಹಿಂದೆ TRF ಇತ್ತು. ಟಿಆರ್‌ಎಫ್ ಕಮಾಂಡರ್ ಸಜ್ಜದ್ ಗುಲ್ ಅವರನ್ನು ಭಾರತ ಸರ್ಕಾರ ಈಗಾಗಲೇ ಭಯೋತ್ಪಾದಕ ಎಂದು ಘೋಷಿಸಿದೆ. ಗುರುವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, ಯುಎಪಿಎಯ ಮೊದಲ …

Read More »

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಅಬ್ದುಲ್ ನಜೀರ್ ನಿವೃತ್ತಿ

ನವದೆಹಲಿ:  ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಭೂವಿವಾದ, ಆಧಾರ್‌ ಸಿಂಧುತ್ವ, ತ್ರಿವಳಿ ತಲಾಕ್‌ ನಿಷೇಧ , ನೋಟು ಆಮಾನ್ಯೀಕರಣ ಸಂಬಂಧಿತ ಪ್ರಕರಣಗಳ ವಿಚಾರಣೆ ನಡೆಸಿ, ಐತಿಹಾಸಿಕ ತೀರ್ಪು ನೀಡಿದ್ದ ಕರ್ನಾಟಕದ ಮೂಡುಬಿದಿರೆ ಮೂಲದ ನ್ಯಾ. ಎಸ್‌. ಅಬ್ದುಲ್‌ ನಜೀರ್‌ ಅವರು ಬುಧವಾರ ನಿವೃತ್ತರಾಗಿದ್ದಾರೆ. ಅಯೋಧ್ಯೆ ಪ್ರಕರಣದಲ್ಲಿ ತೀರ್ಪು ನೀಡಿದ ಪಂಚ ಸದಸ್ಯ ನ್ಯಾಯಪೀಠದಲ್ಲಿದ್ದ ಏಕೈಕ ಮುಸ್ಲಿಂ ನ್ಯಾಯಮೂರ್ತಿಯಾಗಿ ವಿಶೇಷ ಗಮನ ಸೆಳೆದಿದ್ದರು. 1956ರ ಜ. 5 ರಂದು ಮೂಡುಬಿದಿರೆಯಲ್ಲಿ ಜನಿಸಿದ ನ್ಯಾ. ನಜೀರ್‌ ಅವರು ಪ್ರಾಥಮಿಕ ಶಾಲಾ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿದರು. ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ …

Read More »

ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯ ಹೊಟ್ಟೆಯೊಳಗೆ ಟವೆಲ್ ಬಿಟ್ಟ ವೈದ್ಯರು..!

ಉತ್ತರಪ್ರದೇಶ: ನೋವಿನಿಂದ ಆಸ್ಪತ್ರೆಗೆ ದಾಖಲಾದ ಮಹಿಳೆಯ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರು ಟವೆಲ್ ನ್ನು ಆಕೆಯ ಹೊಟ್ಟೆಯೊಳಗೆ ಬಿಟ್ಟ ಬಗ್ಗೆ ವರದಿಯಾಗಿದೆ. ಅಮ್ರೋಹಾದ ಬನ್ಸ್ ಖೇರಿ ಗ್ರಾಮದಲ್ಲಿ ಘಟನೆ ನಡೆದಿದ್ದು ಸಾದತ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಸೈಫೀ ನರ್ಸಿಂಗ್ ಹೋಮ್‌ನಲ್ಲಿ ನಜ್ರಾನಾ ಎಂಬ ಮಹಿಳೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ನಂತರ ಆಕೆಯ ಹೊಟ್ಟೆಯ ಒಳಗೆ ವೈದ್ಯರು ಟವೆಲ್ ಬಿಟ್ಟಿದ್ದಾರೆ. ಅಮ್ರೋಹಾದಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಮಹಿಳೆಯನ್ನು ಪರೀಕ್ಷಿಸಿದಾಗ ಆಕೆಯ ಹೊಟ್ಟೆಯಲ್ಲಿ ಟವೆಲ್ ಕಂಡು ಬಂದಿದೆ. ಈ ಕುರಿತು ತನಿಖೆಗೆ ಮುಖ್ಯ ವೈದ್ಯಾಧಿಕಾರಿ ಸಿಂಘಾಲ್ ಸೂಚಿಸಿದ್ದಾರೆ.

Read More »

ಮಹಿಳಾ ಎಸ್ಐ, ಸರ್ಕಲ್​ ಇನ್ಸ್​ಪೆಕ್ಟರ್ ನಡುವೆ ಪ್ರೇಮ್‌ ಕಹಾನಿ ; ಮುಂದೆನಾಯ್ತು…

ಮಹಿಳಾ ಸಬ್​ ಇನ್ಸ್​ಪೆಕ್ಟರ್ ಹಾಗೂ ಸರ್ಕಲ್​ ಇನ್ಸ್​ಪೆಕ್ಟರ್ ನಡುವಿನ ಪ್ರೇಮ್‌ ಕಹಾನಿ ಪ್ರಕರಣ ತೆಲಂಗಾಣದ ವಾರಂಗಲ್​ನಲ್ಲಿ (Warangal) ಭಾರಿ ಚರ್ಚೆ ಹುಟ್ಟುಹಾಕಿದೆ. ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಇಬ್ಬರನ್ನೂ ವಾರಂಗಲ್​ ಪೊಲೀಸ್​ ಕಮಿಷನರ್​ ರಂಗನಾಥ್​ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಅಮಾನತಾದ ಅಧಿಕಾರಿಗಳು ಗೆಸಿಗೊಂಡ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ರಾಯಲ ವೆಂಕಟೇಶ್ವರಲು ಮತ್ತು ದಮೇರಾ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಹರಿಪ್ರಿಯಾ ಎಂದು ವರದಿಯಾಗಿದೆ. ಎಸ್​ಐ ಹರಿಪ್ರಿಯಾ ಅವರ ಮದುವೆ ಇತ್ತೀಚೆಗಷ್ಟೇ ಆಗಿದೆ. ಆದರೂ ಮೊದಲಿನಿಂದಲೂ ಪರಿಚಯವಿದ್ದ ಸಿಐ ವೆಂಕಟೇಶ್ವರಲು ಜೊತೆ ತಮ್ಮ ರೊಮ್ಯಾನ್ಸ್​ …

Read More »

ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜಿಸಿದ ಕುಡುಕ : ಮುಂದೇನಾಯ್ತು ನೋಡಿ…

ನವದೆಹಲಿ : ಅಮೆರಿಕ-ದೆಹಲಿ ಏರ್‌ ಇಂಡಿಯಾ ವಿಮಾನದ ಬಿಸಿನೆಸ್‌ ಕ್ಲಾಸ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆ ಸಂಬಂಧ ಏರ್ ಇಂಡಿಯಾ ಕ್ರಮ ಕೈಗೊಂಡಿದೆ. ಆಂತರಿಕ ಸಮಿತಿಯ ನಿರ್ಧಾರದವರೆಗೆ ತಪ್ಪಿತಸ್ಥ ಪ್ರಯಾಣಿಕನಿಗೆ ಏರ್‌ ಇಂಡಿಯಾದಲ್ಲಿ ಪ್ರಯಾಣಿಸುವುದನ್ನು ನಿಷೇಧಿಸಲಾಗಿದೆ. ತಪ್ಪಿತಸ್ಥರೆಂದು ಕಂಡುಬಂದರೆ, ನಿಯಂತ್ರಣ ಮಾರ್ಗಸೂಚಿಗಳ ಪ್ರಕಾರ ಅಶಿಸ್ತಿನ ಪ್ರಯಾಣಿಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ. ನವೆಂಬರ್ 26 ರಂದು ನ್ಯೂಯಾರ್ಕ್‌ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್‌ನಲ್ಲಿ 70 ವರ್ಷದ ಮಹಿಳೆ ಮೇಲೆ ಕುಡಿದಿದ್ದ …

Read More »

ಹೊಟೇಲ್ ನಿಂದ ತರಿಸಿ ‘ಅಲ್ ಫಹಮ್’ ತಿಂದ ನರ್ಸ್ ಸಾವು..!ಕಾರಣ..?

ಕೊಟ್ಟಾಯಂನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ನರ್ಸ್‌ಯೊಬ್ಬರು ಚಿಕನ್ ಡಿಶ್ ‘ಅಲ್ ಫಹಮ್’ ನ್ನು ಸೇವಿಸಿದ ಬಳಿಕ‌ ಗಂಭೀರವಾಗಿ ಬಳಿಕ ಮೃತಪಟ್ಡಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಕೇರಳದ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಂಗಳವಾರ 40 ಹೋಟೆಲ್‌ಗಳನ್ನು ಬಂದ್ ಮಾಡಿ, 62 ಮಂದಿಗೆ ದಂಡ ವಿಧಿಸಿದ್ದಾರೆ. ರಾಜ್ಯಾದ್ಯಂತ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ 28 ಮಂದಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 33 ವರ್ಷದ ನರ್ಸ್ ರೇಶ್ಮಿ ರಾಜ್ ಅರೇಬಿಯನ್ ಚಿಕನ್ ಡಿಶ್ ‘ಅಲ್ ಫಹಮ್’ನ್ನು …

Read More »

ಉತ್ತರಪ್ರದೇಶ: ಮದರಸಾ ಶಿಕ್ಷಣದಲ್ಲಿ ಮಹತ್ವದ ಬದಲಾವಣೆ…!

ಉತ್ತರಪ್ರದೇಶ: ಮುಂದಿನ ಶೈಕ್ಷಣಿಕ ಅವಧಿಯಲ್ಲಿ ಮದರಸಾಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಅಳವಡಿಕೆ ಮಾಡುವುದಾಗಿ ಮದರಸಾ ಶಿಕ್ಷಣ ಮಂಡಳಿಯ ಅಧ್ಯಕ್ಷರಾದ ಇಫ್ತೀಕರ್‌ ಅಹ್ಮದ್‌ ಜಾವೇದ್‌ ಅವರು ಹೇಳಿದ್ದಾರೆ. ಉತ್ತರಪ್ರದೇಶದಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಆಧುನಿಕ ಶಿಕ್ಷಣವನ್ನೂ ಒದಗಿಸಲಾಗುವುದು ಎಂದು ಹೇಳಿದ ಅವರು ಈಗ ಮದರಸಾ ಮಕ್ಕಳು ಕೂಡ ಕಂಪ್ಯೂಟರ್‌, ಗಣಿತ, ವಿಜ್ಞಾನ ಶಿಕ್ಷಣ ಪಡೆಯಬಹುದು ಎಂದು ಹೇಳಿದ್ದಾರೆ. ಇದಕ್ಕೆ ಮೊದಲು ಉತ್ತರಾಖಂಡ ರಾಜ್ಯದಲ್ಲಿ ವಕ್ಫ್‌ ಮಂಡಳಿಯು 103 ಮದರಸಾಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯಕ್ರಮ ಪರಿಚಯಿಸಿತ್ತು.

Read More »

ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ನೋಂದಾಯಿಸಿಕೊಳ್ಳಲು ಈಗಲೂ ಇದೆ ಅವಕಾಶ!

ಪ್ರಧಾನಮಂತ್ರಿ ಕಿಸಾನ್-ಸಮ್ಮಾನ ನಿಧಿ ಯೋಜನೆಯಡಿ ರೈತರು ಹೊಸದಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ. ಪ್ರಧಾನಮಂತ್ರಿ ಕಿಸಾನ್-ಸಮ್ಮಾನ ನಿಧಿ ಯೋಜನೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಈ ಯೋಜನೆಯಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕೃಷಿಕರು ಆರ್ಥಿಕ ಪ್ರೋತ್ಸಾಹಧನ ಪಡೆಯಬಹುದಾಗಿದೆ. ಸದ್ಯ ಪ್ರಧಾನಮಂತ್ರಿ ಕಿಸಾನ್-ಸಮ್ಮಾನ ನಿಧಿ ಯೋಜನೆಯಡಿ ರೈತರು ಹೊಸದಾಗಿ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ ಯೋಜನೆಯಡಿ ನೋಂದಣಿಯಾಗದ ಜಂಟಿ ಖಾತೆದಾರರು, ದಿನಾಂಕ 1-2-2019ರ ನಂತರ ಪೌತಿ ವರ್ಗಾವಣೆ …

Read More »

ಮಾನವನ ಶವವನ್ನು ಗೊಬ್ಬರ ಮಾಡುವ ಪ್ರಕ್ರಿಯೆಗೆ ಒಪ್ಪಿಗೆ ನೀಡಿದ ನ್ಯೂಯಾರ್ಕ್

ನ್ಯೂಯಾರ್ಕ್‌: ಮಾನವ ದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸುವ ‘ಹಸಿರು ಅಂತ್ಯಕ್ರಿಯೆ’ಗೆ ಅಮೆರಿಕ ನ್ಯೂಯಾರ್ಕ್‌ ರಾಜ್ಯ ಒಪ್ಪಿಗೆ ನೀಡಿದೆ. ಆ ಮೂಲಕ ಮಾನವನ ದೇಹವನ್ನು ಗೊಬ್ಬರವನ್ನಾಗಿ ಪರಿವರ್ತಿಸಲು ಅವಕಾಶ ಕಲ್ಪಿಸಿಕೊಟ್ಟ ಅಮೆರಿಕ ಆರನೇ ರಾಜ್ಯ ಎನಿಸಿಕೊಂಡಿದೆ. ಈ ಕ್ರಿಯೆಯನ್ನು ‘ಹ್ಯೂಮನ್‌ ಕಾಂಪೋಸ್ಟಿಂಗ್‌’ ಎನ್ನಲಾಗುತ್ತದೆ. ಒಬ್ಬ ವ್ಯಕ್ತಿ ಮೃತಪಟ್ಟ ಬಳಿಕ ಅವರ ದೇಹವನ್ನು ವೈಜ್ಞಾನಿಕ ಪ್ರಕ್ರಿಯೆಗಳ ಮೂಲಕ ಗೊಬ್ಬರವನ್ನಾಗಿ ಪರಿವರ್ತಿಸುವ ಕ್ರಿಯೆಗೆ ಹ್ಯೂಮನ್ ಕಾಂಪೋಸ್ಟಿಂಗ್‌ ಎನ್ನಲಾಗುತ್ತದೆ. ಬಳಿಕ ಆ ಮಣ್ಣನ್ನು ಸಸಿಗಳಿಗೆ ಗೊಬ್ಬರವನ್ನಾಗಿ ಬಳಕೆ ಮಾಡಲಾಗುತ್ತದೆ. ಇದು ಪ್ರಕೃತಿ ಸ್ನೇಹಿ ಪ್ರಕ್ರಿಯೆ. 2019ರಲ್ಲಿ ವಾಷಿಂಗ್ಟನ್‌ ಈ ‘ಹಸಿರು ಸಂಸ್ಕಾರ’ಕ್ಕೆ ಅನುಮತಿ …

Read More »

You cannot copy content of this page.