15 ದಿನಗಳ ಅಂತರದಲ್ಲಿ ಮಕ್ಕಳು ಸೇರಿ 18 ಮಂದಿ ನಿಗೂಢ ಕಾಯಿಲೆಗೆ ಬಲಿ- ವೈದ್ಯರಲ್ಲಿ ಆತಂಕ

ಪಾಕಿಸ್ತಾನ: ಕರಾಚಿಯ ಕೆಮಾರಿ ಪ್ರದೇಶದಲ್ಲಿ ನಿಗೂಢ ಕಾಯಿಲೆಗೆ 15 ದಿನಗಳ ಅಂತರದಲ್ಲಿ ಮಕ್ಕಳು ಸೇರಿ 18 ಮಂದಿ ನಿಗೂಢವಾಗಿ‌ ಮೃತಪಟ್ಟಿದ್ದಾರೆ.

ಜನವರಿ 10ರಿಂದ 25ರವರೆಗೆ ಕೆಮಾರಿಯ ಮವಾಚ್ಗೋಥ್ ಪ್ರದೇಶದಲ್ಲಿ ನಿಗೂಢ ಕಾಯಿಲೆಯಿಂದ 14 ಮಕ್ಕಳ ಸಹಿತ 18 ಮಂದಿ ಮೃತಪಟ್ಟಿದ್ದಾರೆ.ಮೃತರಲ್ಲಿ ಒಂದೇ ಕುಟುಂಬದ 6 ಮಂದಿ ಸೇರಿದ್ದಾರೆ.

ಸಾವಿಗರ ಕಾರಣ ನಿಗೂಢವಾಗಿದೆ.ಮವಾಚ್ಗೋಥ್ ಪ್ರದೇಶವು ಕರಾವಳಿ ತೀರಕ್ಕೆ ಸಮೀಪದಲ್ಲಿರುವುದರಿಂದ ಇದು ಸಮುದ್ರ ಅಥವಾ ನೀರಿಗೆ ಸಂಬಂಧಿಸಿದ ಕಾಯಿಲೆಯಾಗಿರಬಹುದೆಂದು ಅಂದಾಜಿಸಲಾಗಿದೆ ಎಂದವರು ಹೇಳಿದ್ದಾರೆ.

ಮೃತಪಟ್ಟವರು ತೀವ್ರ ಜ್ವರ,ಗಂಟಲಿನಲ್ಲಿ ಊತ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು ಮೃತರ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.

Check Also

ಹತ್ರಸ್ ಸತ್ಸಂಗ ಕಾಲ್ತುಳಿತ ದುರಂತ: ಮೃತದೇಹಗಳನ್ನು ಕಂಡು ಪೊಲೀಸ್ ಪೇದೆಗೆ ಹೃದಯಾಘಾತ

ದೆಹಲಿ : ಉತ್ತರ ಪ್ರದೇಶದ ಹತ್ರಾಸ್ ಸತ್ಸಂಗದ ವೇಳೆ ನೂಕುನುಗ್ಗಲು ಉಂಟಾಗಿ ಸ್ಥಳದಲ್ಲಿ ಬಿದ್ದಿದ್ದ 100ಕ್ಕೂ ಹೆಚ್ಚು ಮೃತ ದೇಹಗಳನ್ನು …

Leave a Reply

Your email address will not be published. Required fields are marked *

You cannot copy content of this page.