ಬೆಂಗಳೂರು: ನಗರದಲ್ಲಿ ನಾಯಿ ಕೊಡಗಳಂತೆ ದಿನೇ ದಿನೇ ಶಾಲೆಗಳ ತಲೆ ಎತ್ತುತ್ತಿವೆ. ಇವುಗಳಲ್ಲಿ ಅಧಿಕೃತ ಯಾವು, ಅನಧಿಕೃತ ಶಾಲೆಗಳು ಯಾವುವು ಎನ್ನುವುದನ್ನು ತಿಳಿಯದೇ ಪೋಷಕರು ಮಾತ್ರ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳೆಂದು ಲಕ್ಷ ಲಕ್ಷ ಫೀಸ್ ನೀಡಿ ಸೇರಿಸುತ್ತಿರುತ್ತಾರೆ.
ಇದೀಗ ಆರ್ಕಿಡ್ ಶಾಲೆಯ ಅನುಧಿಕೃತತೇ ಬೆಳಕಿಗೆ ಬರುತ್ತಿದ್ದಂತೇ, ಮತ್ತಷ್ಟು ಖಾಸಗಿ ಶಾಲೆಗಳ ಡ್ರಾಮಾ ಬಟಾ ಬಯಲಾಗಿದೆ. ಹೀಗಾಗಿ ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಬಿ ಕೇರ್ ಪುಲ್. ಪ್ರತಿಷ್ಠಿತ ಶಾಲೆ ಎಂದು ದಾಖಲಾತಿ ಮಾಡೋ ಮುನ್ನ ಸುದ್ದಿ ಮುಂದೆ ಓದಿ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಿಬಿಎಸ್ಸಿ, ಐಸಿಎಸ್ಸಿ ಶಾಲೆ ಎಂಬುದಾಗಿ ಹೇಳಿಕೊಂಡು ಮಕ್ಕಳ ಪೋಷಕರಿಂದ ಲಕ್ಷ ಲಕ್ಷ ದಾಖಲಾತಿ ಶುಲ್ಕ ವಸೂಲಿ ಮಾಡಿದಂತ ಆರ್ಕಿಡ್ ಶಾಲೆಯೇ ಅನಧಿಕೃತವಾಗಿ ಸಿಬಿಎಸ್ಸಿ, ಐಸಿಎಸ್ಸಿ ತರಗತಿ ನಡೆಸುತ್ತಿರೋದು ಬೆಳಕಿಗೆ ಬಂದಿತ್ತು. ಇದೇ ಕಾರಣದಿಂದಾಗಿ ಈ ಶಾಲೆಯ ವಿರುದ್ಧ ಕ್ರಮ ಕೈಗೊಂಡು, ತಮ್ಮ ಮಕ್ಕಳ ಮುಂದಿನ ಶಿಕ್ಷಣಕ್ಕೆ ಸೂಕ್ತ ಭದ್ರತೆ ನೀಡುವಂತೆ ಪೋಷಕರು ಪ್ರತಿಭಟನೆ ಕೂಡ ನಡೆಸಿದ್ದರು.
ಇದೀಗ ಆರ್ಕಿಡ್ ಶಾಲೆಯ ಅಕ್ರಮ ಹೊರ ಬೀಳುತ್ತಿದ್ದಂತೇ ಬೆಂಗಳೂರು ದಕ್ಷಿಣ ವ್ಯಾಪ್ತಿಯಲ್ಲಿ 127 ಶಾಲೆಗಳು ಸಿಬಿಎಸ್ಸಿ, ಐಸಿಎಸ್ಸಿ ಹೆಸರಿನಲ್ಲಿ ಅನಧಿಕೃತವಾಗಿ ಶಾಲೆಗಳನ್ನು ನಡೆಸುತ್ತಿರೋದು ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ. ಲಕ್ಷ ಲಕ್ಷ ಶುಲ್ಕವನ್ನು ವಸೂಲಿ ಮಾಡಿ, ಪೋಷಕರಿಗೆ, ಶಿಕ್ಷಣ ಇಲಾಖೆಗೆ ವಂಚಿಸುತ್ತಿವೆ ಎನ್ನಲಾಗುತ್ತಿದೆ.
ಇನ್ನೂ ಆರ್ಕಿಡ್ ಶಾಲೆಯ ಡ್ರಾಮಾ ಬಯಲಾಗುತ್ತಿದ್ದಂತೇ ನಗರದಲ್ಲಿನ ಅನಧಿಕೃತ ಶಾಲೆಗಳ ಬಗ್ಗೆ ಪರಿಶೀಲನೆ ಮಾಡೋದಕ್ಕೆ ಶಿಕ್ಷಣ ಇಲಾಖೆ ಮುಂದಾಗಿ ಎನ್ನಲಾಗಿದೆ. ರಾಜ್ಯ ಪಠ್ಯಕ್ರಮದ ಮಾನ್ಯತೆಯನ್ನು ಪಡೆದು, ಐಸಿಎಸ್ಸಿ, ಸಿಬಿಎಸ್ಸಿ ಶಾಲೆಗಳೆಂದು ಅನಧಿಕೃತವಾಗಿ ನಡೆಸುತ್ತಿರೋ ಶಾಲೆಗಳಿಗೆ ಬಿಗ್ ಶಾಕ್ ನೀಡೋದಕ್ಕೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಮಕ್ಕಳ ಪೋಷಕರು ಎಚ್ಚರಿಕೆಯನ್ನು ವಹಿಸೋದು ಮರೆಯಬೇಡಿ.