ಸವಾಲನ್ನು ಸ್ವೀಕರಿಸಿ ಬಿ.ಸಿ.ರೋಡ್ ಗೆ ಎಂಟ್ರಿ ಕೊಟ್ಟ ಶರಣ್ ಪಂಪ್‌ವೆಲ್‌‌‌

ಜಿಹಾದಿಗಳ ಸವಾಲನ್ನು ಸ್ವೀಕರಿಸಿ ಬಿ.ಸಿ.ರೋಡ್ ಗೆ ಶರಣ್ ಪಂಪ್‌ವೆಲ್‌‌‌ ಆಗಮಿಸಿದ್ದಾರೆ ಮಂಡ್ಯ ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಈದ್ ಮಿಲಾದ್ ಮೆರವಣಿಗೆ ವೇಳೆ ಹಿಂದೂಗಳೆಲ್ಲಾ ಒಟ್ಟಾಗಿ ದಾಳಿ ಮಾಡಿದರೆ ಏನಾಗಬಹುದು ಎಂದು ಶರಣ್ ಪಂಪ್‌ ವೆಲ್ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್‌ ಹಾಗೂ ಪುರಸಭೆಯ ಸದಸ್ಯ ಹಸೈನಾ‌ರ್ ಅವಾಚ್ಯ ಶಬ್ದದಿಂದ ಬೈದು ಸೋಮವಾರದಂದು ಈದ್‌ಮಿಲಾದ್ ಪ್ರಯುಕ್ತ ಬಿ.ಸಿ ರೋಡ್‌ನ ಕೈಕಂಬದಿಂದ ಪರ್ಲಿಯ, ತಾಳಿಪಡ್ಡು, ಕೈಕಂಬ ಪೊಳಲಿ ದ್ವಾರದ ಬಳಿ ಕೈಕಂಬ ಮಸೀದಿಗೆ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆ ವೇಳೆ ಶರಣ್ ಪಂಪ್‌ವೆಲ್ ಮತ್ತು ಬಜರಂಗದಳದ ಕಾರ್ಯಕರ್ತರ ಬಂದು ನಿಲ್ಲಬೇಕು ಎಂದು ಧಮ್ಕಿ ಹಾಕಿದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ವಿ.ಹಿ.ಪ.ಬಜರಂಗದಳ ಇಂದು ಬೆಳಿಗ್ಗೆ ಬಿ.ಸಿ.ರೋಡ್‌ ಚಲೋ ಕರೆ ನೀಡಿದ್ದು, ಬಿ.ಸಿ.ರೋಡ್‌ ನಲ್ಲಿ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ. ಬೆಳಿಗ್ಗೆ 7 ಗಂಟೆಗೆ ಬಿ.ಸಿ.ರೋಡ್‌ಗೆ ಸವಾಲು ಸ್ವೀಕರಿಸಲು ಆಗಮಿಸಿದ ಶರಣ್‌ ಪಂಪ್‌ವೆಲ್‌ ಅವರು ಹಿಂದುತ್ವದ ಭದ್ರಕೋಟೆಯಾಗಿರುವ ದಕ್ಷಿಣ ಕನ್ನಡದಲ್ಲಿ ಜಿಹಾದಿಗಳ ಯಾವುದೇ ಷಡ್ಯಂತ್ರ ನಡೆಯುವುದಿಲ್ಲ, ದ.ಕ. ಹಿಂದುತ್ವದ ತವರೂರು ಎಂದು ಹೇಳಿದರು ಎಸ್ಪಿ ಯತೀಶ್ ನೇತೃತ್ವದಲ್ಲಿ ಬಿ.ಸಿ.ರೋಡ್ ನಲ್ಲಿ ಪೊಲೀಸ್ ಸರ್ಪಗಾವಲು ಇದೆ

Check Also

ಕಾರ್ಕಳ : ಶಾಲೆಯಲ್ಲಿ ಈದ್‌ ಮಿಲಾದ್‌ ಆಚಣೆ- ಪೋಷಕರಿಂದ ಆಕ್ರೋಶ

ಉಡುಪಿ ಕಾರ್ಕಳ ಸಚ್ಚರಿಪೇಟೆಯ ಖಾಸಗಿ ಶಾಲೆಯಲ್ಲಿ ಈದ್‌ ಮಿಲಾದ್‌ ಆಚರಣೆ ಮಾಡಿರುವುದಕ್ಕೆ ಹಿಂದೂ ಮಕ್ಕಳ ಪೋಷಕರಿಂದ ಆಕ್ಷೇಪ ವ್ಯಕ್ತವಾಗಿದೆ. ಸಚ್ಚರಿಷೇಟೆಯ …

Leave a Reply

Your email address will not be published. Required fields are marked *

You cannot copy content of this page.