ಕಾಪು : ನಿಂತಿದ್ದ ಲಾರಿಗೆ ಕಾರು ಡಿಕ್ಕಿ -ಚಾಲಕ ಸಾವು

ಉಡುಪಿ: ಕೆಟ್ಟು ನಿಂತಿದ್ದ ಲಾರಿಗೆ ಕಾರೊಂದು ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಚಾಲಕ ಸಾವನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾಪು ಸಮೀಪದ ಪಾಂಗಾಳ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಜೆ ಸಂಭವಿಸಿದೆ.
ಮೃತಪಟ್ಟ ಕಾರು ಚಾಲಕ ನಾಗೇಶ್ (70) ಎಂದು ಗುರುತಿಸಲಾಗಿದೆ.

ಕಾಪುವಿನ ಮೆಸ್ಕಾಂ ಕಚೇರಿಗೆ ಗುತ್ತಿಗೆ ಆಧಾರಿತ ಕಾರನ್ನು ಚಲಾಯಿಸುತ್ತಿದ್ದ ಅವರು, ಸಂಜೆ ಪಾಂಗಾಳದಿಂದ ಕಾಪು ಕಡೆಗೆ ತೆರಳುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Check Also

ರುಚಿಕರವಾದ ಮಟನ್​ ಬಿರಿಯಾನಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿ : ಮಟನ್​​ 500 ಗ್ರಾಂ, 2 ಕಪ್​ ಅಕ್ಕಿ, 2 ಲವಂಗ, 2 ದಾಲ್ಚಿನ್ನಿ ಎಲೆ, ಹಸಿ …

Leave a Reply

Your email address will not be published. Required fields are marked *

You cannot copy content of this page.