ಮಂಗಳೂರು: ಪುತ್ತಿಲ ಅವರನ್ನು ಮತ್ತೆ ಬಿಜೆಪಿಗೆ ಕರೆಸಿಕೊಳ್ಳಲು ಪಕ್ಷ ಎಲ್ಲಾ ರೀತಿ ಪ್ರಯತ್ನಪಟ್ಟಿದೆ – ನಳಿನ್ ಪ್ರತಿಕ್ರಿಯೆ

ಮಂಗಳೂರು: ಪುತ್ತಿಲ ಪರಿವಾರದ ಅರುಣ್ ಕುಮಾರ್ ಪುತ್ತಿಲ ಅವರು ಬಂಡಾಯ ಅಭ್ಯರ್ಥಿಯಾಗಿ ದ.ಕ.ಜಿಲ್ಲೆಯಿಂದ ಕಣಕ್ಕಿಳಿಯಲಿದ್ದಾರೆ ಎಂಬ ನಿರ್ಧಾರ ಪ್ರಕಟವಾಗಿದೆ. ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ದ.ಕ.ಜಿಲ್ಲಾ ಸಂಸದ ನಳಿನ್ ಕುಮಾರ್ ಪ್ರತಿಕ್ರಿಯಿಸಿ, ಪುತ್ತಿಲ ಪರಿವಾರ ಸ್ವತಂತ್ರ ಸಂಘಟನೆ. ತಮ್ಮ ಅಭಿಪ್ರಾಯ, ತೀರ್ಮಾನ ಕೈಗೊಳ್ಳಲು ಸ್ವತಂತ್ರರಿದ್ದಾರೆ. ಅವರನ್ನು ಮತ್ತೆ ಬಿಜೆಪಿಗೆ ಕರೆಸಿಕೊಳ್ಳಲು ಪಕ್ಷ ಎಕ್ಲಾ ರೀತಿಯ ಪ್ರಯತ್ನಪಟ್ಟಿದೆ. ಬಿಜೆಪಿ ದೇಶದ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಅನ್ನು ಎದುರಿಸಿ ಬಿಜೆಪಿ ಅತೀ ಹೆಚ್ಚು ಶಾಸಕರು, ಸಂಸದರನ್ನು, ತಾಲೂಕು ಪಂಚಾಯತ್ ಸದಸ್ಯರನ್ನು ಪಡೆದಿದೆ. ಆದ್ದರಿಂದ ಸಹಜವಾಗಿ ಬಿಜೆಪಿಗೆ ಎದುರಾಳಿಗಳ ಸಮಸ್ಯೆಯಿಲ್ಲ‌. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗೆ ನಿಲ್ಲುವ ಹಕ್ಕು ಎಲ್ಲರಿಗೂ ಇದೆ. ಚುನಾವಣೆ ಬಂದಾಗ ಇಂತಹ ಸಮಸ್ಯೆಗಳು, ಸವಾಲುಗಳು ಉದ್ಭವವಾಗುತ್ತಿರುತ್ತದೆ‌. ಇವೆಲ್ಲದರ ಮಧ್ಯೆಯೂ ಬಿಜೆಪಿ ಗೆಲುವು ಸಾಧಿಸಲಿದೆ. ಲೋಕಸಭೆ ಚುನಾವಣೆಗೂ ವಿಧಾನಸಭೆ ಚುನಾವಣೆಗೂ ಅಜಗಜಾಂತರ ವ್ಯತ್ಯಾಸಗಳಿದೆ. ಆಗಿರುವ ಸಮಸ್ಯೆಗಳೇ ಬೇರೆ, ಈಗ ಆಗುತ್ತಿರುವ ವಿಚಾರಗಳೇ ಬೇರೆ‌. ಈ ಬಾರಿಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವನ್ನು ಬಿಜೆಪಿ ಸಾಧಿಸಲಿದೆ. ರಾಷ್ಟ್ರೀಯ ನಾಯಕರು ಯಾರಿಗೆ ಈ ಬಾರಿ ದ.ಕ.ಜಿಲ್ಲೆಯಲ್ಲಿ ಟಿಕೆಟ್ ನೀಡುತ್ತಾರೋ, ಅದಕ್ಕೆ ಎಲ್ಲದಕ್ಕೂ ಕಾರ್ಯಕರ್ತನಾಗಿ ನಮ್ಮ ಜವಾಬ್ದಾರಿ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು.

Check Also

ಉಡುಪಿ: ಮೂರೂವರೆ ವರ್ಷದ ಕಂದಮ್ಮನಿಗೆ ಮನಸೋಇಚ್ಚೆ ಹಲ್ಲೆ- ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗು

ಉಡುಪಿ: ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ ನಡೆದಿದ್ದು, ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ …

Leave a Reply

Your email address will not be published. Required fields are marked *

You cannot copy content of this page.