ಮಂಗಳೂರು: ಡಿಸೆಂಬರ್ 1ರಿಂದ ಸುರತ್ಕಲ್ ಟೋಲ್ ಗೇಟ್‌ನಲ್ಲಿ‌ ಸುಂಕ ವಸೂಲಾತಿ ಇಲ್ಲ-ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್

ಮಂಗಳೂರು: ರದ್ದುಗೊಂಡಿರುವ ಸುರತ್ಕಲ್ ಟೋಲ್ ಗೇಟ್ ನಲ್ಲಿ ಡಿಸೆಂಬರ್ 1ರಿಂದ ವಾಹನಗಳಿಂದ ಟೋಲ್ ಸಂಗ್ರಹಿಸಲಾಗುವುದಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಂ.ಆರ್ ರವಿಕುಮಾರ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

ಈಗಾಗಲೇ ಸುರತ್ಕಲ್ ಟೋಲ್ ಗೇಟ್‌ಅನ್ನು ಹೆಜಮಾಡಿಯಲ್ಲಿ ಹೆಚ್ಚುವರಿ ಶುಲ್ಕದೊಂದಿಗೆ ವಿಲೀನಗೊಳಿಸಿಗಿದೆ. ಈ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಜಿಲ್ಲಾಧಿಕಾರಿ ಅವರು ನವೆಂಬರ್ 24ರಂದು ಹೊರಡಿಸಿರುವ ಆದೇಶ ಇಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.‌ ಅದರಂತೆ ಡಿಸೆಂಬರ್ 1ರಿಂದ ಸುರತ್ಕಲ್‌ನಲ್ಲಿ ಟೋಲ್ ಸಂಗ್ರಹ ಇರುವುದಿಲ್ಲ ಎಂದು ಅಧಿಕೃತವಾಗಿ ತಿಳಿಸಲಾಗಿದೆ.

Check Also

ಭಾಷೆ..ಗಡಿ ದಾಟಿದ ಯಕ್ಷಗಾನ: ಉಡುಪಿಯಲ್ಲಿ ಮೋದಿ ಊರಿನ ಕುವರರಿಗೆ ತರಬೇತಿ

ಉಡುಪಿ: ಭಾಷೆಯ ಗಡಿಗಳನ್ನು ದಾಟಿ ಯಕ್ಷಗಾನ ಬೆಳೆಯುತ್ತಿದೆ. ಪ್ರಧಾನಿ ಮೋದಿ ಪ್ರತಿನಿಧಿಸುವ ವಾರಣಾಸಿ ಕ್ಷೇತ್ರದ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳು, …

Leave a Reply

Your email address will not be published. Required fields are marked *

You cannot copy content of this page.