ಕಾರ್ಕಳ: ಕಾರ್ಕಳದ ಹಿಂದೂ ಯುವತಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಬ್ಲಡ್ ಟೆಸ್ಟ್ ರಿಪೋರ್ಟ್ ಮಾಹಿತಿ ಲಭ್ಯವಾಗಿದ್ದು, ಸಂತ್ರಸ್ತೆಯ ರಕ್ತದಲ್ಲಿ ಮಾದಕ ವಸ್ತು ಇರುವ ಬಗ್ಗೆ ಪಾಸಿಟಿವ್ ವರದಿ ಬಂದಿದೆ. 1ನೇ ಆರೋಪಿ ಅಲ್ತಾಫ್ ಬ್ಲಡ್ ಟೆಸ್ಟ್ ವರದಿ ಮತ್ತು ಬಿಯರ್ ಬಾಟಲ್ ತಂದುಕೊಟ್ಟ 2ನೇ ಆರೋಪಿ ರಿಚರ್ಡ್ ಬ್ಲಡ್ ರಿಪೋರ್ಟ್ ನೆಗೆಟಿವ್ ಬಂದಿದೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ. ಆರೋಪಿ ಅಲ್ತಾಫ್ ವಿಚಾರಣೆ ವೇಳೆ ಕಾರಿನಲ್ಲಿದ್ದ ಒಂದು ಪುಡಿಯನ್ನು ತೋರಿಸಿದ್ದ. ಇದನ್ನೇ ಸಂತ್ರಸ್ತ ಯುವತಿ ತೆಗೆದುಕೊಂಡಿದ್ದಾಗಿ ಹೇಳಿಕೆ ನೀಡಿದ್ದಾನೆ. ಸದ್ಯ ಪುಡಿಯನ್ನು ನಾವು ಎಫ್ಎಸ್ಎಲ್ ಗೆ ಕಳಿಸಿದ್ದು, ಯಾವ ಡ್ರಗ್ಸ್ ಎಂದು ವೆರಿಫೈ ಮಾಡಲಾಗುತ್ತಿದೆ. ಇದೇ ಡ್ರಗ್ಸ್ ಸಂತ್ರಸ್ತೆ ತೆಗೆದುಕೊಂಡಿರುವ ಬಗ್ಗೆ ತುಲನೆ ಮಾಡಲಾಗುವುದು. ಇದರ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಒಂದು ಪ್ರಕರಣ ದಾಖಲು ಮಾಡಿದ್ದೇವೆ. ಈ ಡ್ರಗ್ ಅನ್ನು ಎಲ್ಲಿಂದ ಬಂದಿದೆ ಎನ್ನುವ ಕುರಿತು ತನಿಖೆ ನಡೆಸುತ್ತೇವೆ. ಸಂತ್ರಸ್ತೆಯು ಜಡ್ಜ್ ಮುಂದೆ ಹೇಳಿಕೆ ಕೊಡಬೇಕಿದ್ದು, ಮೆಡಿಕಲಿ ಫಿಟ್ ಆದ ನಂತರ ಈ ಪ್ರಕ್ರಿಯೆ ನಡೆಯಲಿದೆ. ಆದಷ್ಟು ಬೇಗನೆ ಈ ಅತ್ಯಾಚಾರ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ಮಾಹಿತಿ ನೀಡಿದ್ದಾರೆ.
Check Also
ಉಡುಪಿ: ಮೂರೂವರೆ ವರ್ಷದ ಕಂದಮ್ಮನಿಗೆ ಮನಸೋಇಚ್ಚೆ ಹಲ್ಲೆ- ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗು
ಉಡುಪಿ: ಮೂರೂವರೆ ವರ್ಷದ ಮಗುವಿನ ಮೇಲೆ ತೀವ್ರ ತರಹದ ಹಲ್ಲೆ ನಡೆದಿದ್ದು, ಸದ್ಯ ಪ್ರಜ್ಞಾಹೀನ ಸ್ಥಿತಿಯಲ್ಲಿರುವ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ …