32 ವಾರದ ಗರ್ಭಿಣಿಯ ಗರ್ಭಪಾತಕ್ಕೆ ಕೋರ್ಟ್ ಅಸ್ತು

ಮುಂಬೈತನ್ನ ಗರ್ಭ​ವನ್ನು ಮುಂದು​ವ​ರೆ​ಸ​ಬೇಕೆ, ಬೇಡವೇ ಎಂಬು​ದ​ನ್ನು ನಿರ್ಧ​ರಿ​ಸುವ ಹಕ್ಕು ಮಹಿ​ಳೆ​ಗಿದೆ ಎಂದು ಬಾಂಬೆ ಹೈಕೋರ್ಟ್‌ ಹೇಳಿದೆ. ಭ್ರೂಣಕ್ಕೆ ತೀವ್ರ​ವಾದ ಸ​ಮ​ಸ್ಯೆ​ಗ​ಳು ಇರು​ವು​ದ​ರಿಂದ ವಿವಾ​ಹಿತ ಮಹಿ​ಳೆಗೆ 32ನೇ ವಾರದಲ್ಲಿ ಗರ್ಭ​ಪಾತ ಮಾಡಿ​ಕೊ​ಳ್ಳಲು ಕೋರ್ಟ್‌ ಅನು​ಮತಿ ನೀಡಿದೆ.

ಗರ್ಭ​ದ​ಲ್ಲಿ​ರುವ ಮಗು​ವಿಗೆ ಆರೋಗ್ಯ ಸಮ​ಸ್ಯೆ​ಗ​ಳಿ​ರು​ವು​ದ​ರಿಂದ ಗರ್ಭ​ಪಾ​ತಕ್ಕೆ ಅವ​ಕಾಶ ನೀಡ​ಬೇಕು ಎಂದು ಕೋರಿ ಮಹಿಳೆಯೊ​ಬ್ಬರು ಬಾಂಬೆ ಹೈಕೋರ್ಟ್‌ ಮೆಟ್ಟಿ​ಲೇ​ರಿ​ದ್ದರು. ಈ ಅರ್ಜಿಯ ವಿಚಾ​ರಣೆ ನಡೆ​ಸಿದ ನ್ಯಾಯಮೂರ್ತಿ ಗೌತಮ್‌ ಪಟೇಲ್‌ ಮತ್ತು ನ್ಯಾಯಮೂರ್ತಿ ಎ​ಸ್‌.​ಜಿ.​ ದಿಗೆ ಅವ​ರಿದ್ದ ಪೀಠ, ಭ್ರೂಣಕ್ಕೆ ತೀವ್ರ ಆರೋಗ್ಯ ಸಮ​ಸ್ಯೆ​ಗ​ಳಿ​ದ್ದಾಗ ಗರ್ಭ​ಪಾ​ತಕ್ಕೆ ನಿಗದಿಪಡಿ​ಸಿ​ರುವ ಅವ​ಧಿ​ಯನ್ನು ಪರಿ​ಗ​ಣಿ​ಸ​ಬಾ​ರದು ಎಂದು ಹೇಳಿತು.

‘ಗರ್ಭ​ಪಾತ ಮಾಡಿ​ಸಿ​ಕೊ​ಳ್ಳ​ಬೇಕು ಎಂಬುದು ಮಹಿ​ಳೆ ತಾನಾ​ಗಿಯೇ ತೆಗೆ​ದು​ಕೊಂಡಿ​ರುವ ನಿರ್ಧಾರ. ಗರ್ಭ​ಪಾ​ತಕ್ಕೆ ಸಂಬಂಧಿ​ಸಿ​ದಂತೆ ನಿರ್ಧ​ರಿ​ಸುವ ಹಕ್ಕು ಮಹಿ​ಳೆ​ಗಿ​ದೆಯೇ ಹೊರತು ವೈದ್ಯ​ಕೀಯ ಸಂಸ್ಥೆ​ಗಲ್ಲ. ಆರೋಗ್ಯ ಸಮ​ಸ್ಯೆ ಇರುವ ಮಕ್ಕ​ಳನ್ನು ಬೆಳೆ​ಸು​ವುದು ತಾಯಿಗೆ ಜೀವನ ಪೂರ್ತಿ ಕಷ್ಟ​ವಾ​ಗು​ತ್ತದೆ. ಹಾಗಾಗಿ ಈ ಗರ್ಭ​ಪಾ​ತಕ್ಕೆ ಅನು​ಮತಿ ನೀಡ​ಲಾ​ಗಿದೆ’ ಎಂದು ಕೋರ್ಟ್‌ ಅಭಿ​ಪ್ರಾಯ ವ್ಯಕ್ತ​ಪ​ಡಿ​ಸಿತು. ಸರ್ಕಾರದ ನಿಯಮದ ಪ್ರಕಾರ 20 ವಾರದೊಳಗೆ ಗರ್ಭಪಾತ ಮಾಡಿಸಿಕೊಳ್ಳಬೇಕು. ಆದರೆ, ವಿಶೇಷ ಕೆಟಗರಿಗೆ 24 ವಾರದ ಮಿತಿ ಹಾಕಲಾಗಿದೆ ಎಂದಿದೆ.

ಜಸ್ಟೀಸ್‌ ಗೌತಮ್ ಪಟೇಲ್ ಮತ್ತು ಎಸ್.ಜಿ. ದಿಗೆ ಅವರ ವಿಭಾಗೀಯ ಪೀಠ, ಜನವರಿ 20 ರಂದು ಈ ತೀರ್ಪು ನೀಡಿತ್ತು. ಅದರ ಪ್ರತಿಯನ್ನು ಸೋಮವಾರ ಲಭ್ಯವಾಗಿದ್ದು, ಭ್ರೂಣವು ಗಂಭೀರ ಅಸಹಜತೆಗಳನ್ನು ಹೊಂದಿದ್ದರೂ ಸಹ ಅದನ್ನು ಕೊನೆಗೊಳಿಸಬಾರದು ಎಂಬ ವೈದ್ಯಕೀಯ ಮಂಡಳಿಯ ಅಭಿಪ್ರಾಯವನ್ನು ಒಪ್ಪಿಕೊಳ್ಳಲು ಕೋರ್ಟ್‌ ನಿರಾಕರಿಸಿದೆ. ಗರ್ಭಾವಸ್ಥೆಯು ಬಹುತೇಕ ಅದರ ಕೊನೆಯ ಹಂತದಲ್ಲಿದೆ ಎಂಬ ಕಾರಣ ನೀಡಿ ವೈದ್ಯಕೀಯ ಮಂಡಳಿ ಈ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಭ್ರೂಣವು ತೀವ್ರವಾದ ಅಸಹಜತೆಗಳನ್ನು ಹೊಂದಿದೆ ಮತ್ತು ದೈಹಿಕ ಹಾಗೂ ಮಾನಸಿಕ ವಿಕಲಾಂಗತೆಯೊಂದಿಗೆ ಮಗು ಜನಿಸುತ್ತದೆ ಎಂದು ಸೋನೋಗ್ರಫಿ ಬಹಿರಂಗಪಡಿಸಿದ ನಂತರ ಮಹಿಳೆ ತನ್ನ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಲು ಕೋರಿ ಹೈಕೋರ್ಟ್‌ ಅನ್ನು ಸಂಪರ್ಕಿಸಿದ್ದರು. “ತೀವ್ರವಾದ ಭ್ರೂಣದ ಅಸಹಜತೆಯಿಂದಾಗಿ, ಗರ್ಭಾವಸ್ಥೆಯ ಅವಧಿಯು ಅಪ್ರಸ್ತುತವಾಗುತ್ತದೆ. ಅರ್ಜಿದಾರರು ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಂಡಿದ್ದಾರೆ. ಇದು ಸುಲಭವಾದ ನಿರ್ಧಾರವಲ್ಲ. ಆದರೆ ಆ ನಿರ್ಧಾರವು ಅವರದು, ಮತ್ತು ಅವರು ಮಾತ್ರ ತೆಗೆದುಕೊಳ್ಳುವುದು. ಆಯ್ಕೆ ಮಾಡುವ ಹಕ್ಕು ಅರ್ಜಿದಾರರದ್ದು. ಇದು ವೈದ್ಯಕೀಯ ಮಂಡಳಿಯ ಹಕ್ಕಲ್ಲ”’ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

Check Also

ಮಣಿಪಾಲ: ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಲಕ್ಷಾಂತರ ರೂ. ಹಣ ವರ್ಗಾವಣೆ

ಮಣಿಪಾಲ: ವ್ಯಕ್ತಿಯೊಬ್ಬರ ಖಾತೆಯಿಂದ ಮತ್ತೊಂದು ಖಾತೆಗೆ 2,08,004 ರೂ. ಹಣ ವರ್ಗಾವಣೆಗೊಂಡಿರುವ ಘಟನೆ ನಡೆದಿದೆ. ಕಾರ್ಕಳ ಪಳ್ಳಿ ನಿವಾಸಿ ಡಾ| ಗೋಪಿ ನಾಥ್‌ …

Leave a Reply

Your email address will not be published. Required fields are marked *

You cannot copy content of this page.