April 27, 2026
WhatsApp Image 2026-04-25 at 9.54.29 AM

ಕಾರ್ಕಳ : ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿ ವಿವಿಧ ಸಬೂಬುಗಳನ್ನು ಹೇಳಿ ಕಾರ್ಕಳದ ವ್ಯಕ್ತಿಯೊಬ್ಬರಿಂದ ₹25.66 ಲಕ್ಷ ಹಣ ಪಡೆದು ವಂಚಿಸಿರುವ ಘಟನೆ ನಡೆದಿದೆ. ಈ ಸಂಬಂಧ ನಲ್ಲೂರು ಗ್ರಾಮದ ಗಣೇಶ ಆಚಾರ್ಯ (34) ಅವರು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರುದಾರ ಗಣೇಶ ಆಚಾರ್ಯ ಅವರಿಗೆ 2024ರ ಜುಲೈನಲ್ಲಿ ಇನ್‌ಸ್ಟಾಗ್ರಾಂ ಮೂಲಕ ಸುಜನ್ ಶೆಟ್ಟಿ ಸಿದ್ದಾಪುರ ಎಂಬಾತನ ಪರಿಚಯವಾಗಿತ್ತು. ಆರಂಭದಲ್ಲಿ ಕಾಲೇಜಿಗೆ ಹೋಗಲು ₹200 ಬೇಕೆಂದು ಕೇಳಿ ಗೂಗಲ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದ ಆರೋಪಿ, ನಂತರ ಹಂತಹಂತವಾಗಿ ತನ್ನ ಬಲೆ ಬೀಸಿದ್ದಾನೆ. ಕಾಲೇಜು ಫೀಸ್, ಅನಾರೋಗ್ಯದ ನೆಪ, ಲ್ಯಾಪ್‌ಟಾಪ್ ರಿಪೇರಿ ಹಾಗೂ ಕೃಷಿ ಸಾಲ ತೀರಿಸುವ ಉದ್ದೇಶಗಳಿಗಾಗಿ ಹಣ ಬೇಕೆಂದು ನಂಬಿಸಿ ಗಣೇಶ್ ಅವರಿಂದ ಲಕ್ಷಾಂತರ ರೂಪಾಯಿ ಪಡೆದಿದ್ದಾನೆ.

ಪಡೆದ ಹಣವನ್ನು ವಾಪಸ್ ನೀಡಲು ತನ್ನ ಬ್ಯಾಂಕ್ ಖಾತೆ ಸರಿಪಡಿಸಬೇಕಿದೆ ಎಂದು ಮತ್ತೆ ಹಣ ಪೀಕಿದ್ದ ಆರೋಪಿ, 2024ರ ಜುಲೈನಿಂದ 2026ರ ಏಪ್ರಿಲ್‌ವರೆಗೆ ಒಟ್ಟು ₹25,66,000 ಹಣವನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಆದರೆ ಹಣ ವಾಪಸ್ ನೀಡದೆ ವಂಚಿಸಿರುವುದರಿಂದ ಗಣೇಶ್ ಪೊಲೀಸರ ಮೊರೆ ಹೋಗಿದ್ದಾರೆ. ಆರೋಪಿಯ ವಿರುದ್ಧ ಬಿಎನ್‌ಎಸ್ (BNS) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

About The Author

Leave a Reply

Your email address will not be published. Required fields are marked *

You cannot copy content of this page.