ಉಡುಪಿ: ಸಮುದ್ರದ ದಂಡೆಯಲ್ಲಿ ಡಾಲ್ಫಿನ್ ಜಾತಿಯ ಸತ್ತ ಮೀನು ಪತ್ತೆ

ಉಡುಪಿ: ಜಿಲ್ಲೆ ಬ್ರಹ್ಮಾವರ ತಾಲೂಕು ಕೋಡಿ ಗ್ರಾಮದ ಬೆಂಗ್ರೆ ಎಂಬಲ್ಲಿ ಡಾಲ್ಫಿನ್ ಜಾತಿಯ ಮೀನು ಸತ್ತು ಸಮುದ್ರದ ದಂಡೆಯಲ್ಲಿ ಬಿದ್ದಿರುವುದು ಶುಕ್ರವಾರ ಪತ್ತೆಯಾಗಿದೆ.

ಉಡುಪಿ ವಲಯದ ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ರವರ ಮಾರ್ಗ ದರ್ಶನದಂತೆ Reefwatch    NGO ಮತ್ತು ಅರಣ್ಯ ಇಲಾಖೆಯ ಜಂಟಿ ಕಾರ್ಯಾಚರಣೆಯಿಂದ ಸತ್ತು ಬಿದ್ದಿರುವ ಡಾಲ್ಫಿನ್ ಮೀನನ್ನು ಮರಣೋತ್ತರ ಪರೀಕ್ಷೆ ನಡೆಸಿ ಜಮೀನಿನಲ್ಲಿ ಹೂಳಲಾಯಿತು.

ಕಾರ್ಯಾಚರಣೆಯಲ್ಲಿ ಉಡುಪಿ ಕೇಂದ್ರ ಸ್ಥಾನದ ಉಪವಲಯ ಅರಣ್ಯಾಧಿಕಾರಿ ಗುರುರಾಜ, ಕೆ. ಅರಣ್ಯ ರಕ್ಷಕರಾದ ಕೇಶವ್ ಪೂಜಾರಿ, ವಾಹನ ಚಾಲಕ ಜೋಯ್ ಹಾಗೂ ರಿಫ್ ವಾಚ್ ಎನ್ ಜಿ ಒ ಸಂಸ್ಥೆಯ ಡಾ.ತೇಜಸ್ವಿನಿ ಶೆಟ್ಟಿಗಾರ್ ಮತ್ತು   ವಿರಿಲ್ಲ್  ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Check Also

ಮುತ್ತೂರು: ಕೊಳವೂರು ಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ …

Leave a Reply

Your email address will not be published. Required fields are marked *

You cannot copy content of this page.