ಉಡುಪಿ: ಪ್ರಮುಖ ವೃತ್ತಗಳಿಗೆ ನಾಮಕರಣಕ್ಕೆ ರಾಜ್ಯ ಸರಕಾರದ ಗ್ರೀನ್ ಸಿಗ್ನಲ್

ಉಡುಪಿ: ಉಡುಪಿ ನಗರಸಭೆ ವ್ಯಾಪ್ತಿಯ ಪ್ರಮುಖ ವೃತ್ತಗಳಿಗೆ ಮಹಾಪುರುಷರ, ಗಣ್ಯವ್ಯಕ್ತಿಗಳ ಹೆಸರಿಡುವ ಪ್ರಸ್ತಾವನೆಗೆ ರಾಜ್ಯ ಸರಕಾರ ಅನುಮತಿ ನೀಡಿದೆ.

ಸಾರ್ವಜನಿಕರು, ಸಂಘ ಸಂಸ್ಥೆಗಳು ಸಲ್ಲಿಸಿದ ಮನವಿ ಯಂತೆ ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ, ನಿರ್ಣಯ ಕೈಗೊಂಡು ಸಾರ್ವಜನಿಕರ ಆಕ್ಷೇಪಣೆ, ಶಾಂತಿ ಸುವ್ಯವಸ್ಥೆ ಬಗ್ಗೆ ಪೊಲೀಸ್ ಅಧೀಕ್ಷಕರ ವರದಿಯನ್ನೂ ಕೇಳಲಾಗಿತ್ತು. ಎಲ್ಲಾ ವೃತ್ತ/ಜಂಕ್ಷನ್‌ಗಳಿಗೆ ನಗರಸಭೆ ನಿರ್ಣಯಕ್ಕೆ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆಯಿಲ್ಲದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದ್ದರು.

ಯಾವ ವೃತ್ತ/ಜಂಕ್ಷನಿಗೆ ಯಾರ ಹೆಸರು? ಬನ್ನಂಜೆ ವೃತ್ತ : ನಾರಾಯಣಗುರು ವೃತ್ತ ,ಕಲ್ಸಂಕ ವೃತ್ತ:ಮಧ್ವಾಚಾರ್ಯ ವೃತ್ತ ,ಡಯಾನಾ ಸರ್ಕಲ್: ವಾದಿರಾಜ ವೃತ್ತ , ಸಂತೆಕಟ್ಟೆ ಕಲ್ಯಾಣಪುರ ರಸ್ತೆ ಜಂಕ್ಷನ್: ಕೋಟಿ ಚೆನ್ನಯ ವೃತ್ತ , ಬ್ರಹ್ಮಗಿರಿ ದೊಡ್ಡ ಸರ್ಕಲ್: ಆಸ್ಕರ್ ಫರ್ನಾಂಡಿಸ್ ವೃತ್ತ , ಪರ್ಕಳದಿಂದ ಕೋಡಂಗೆ, ಕೋಡಂಗೆ ಯಿಂದ ಸರಳೇಬೆಟ್ಟು ನಡುವಿನ ವೃತ್ತ: ಶ್ರೀರಾಮ ವೃತ್ತ.

Check Also

ಮಂಗಳೂರು: ಇಲಿ ಜ್ವರಕ್ಕೆ ಕಾಲೇಜು ವಿದ್ಯಾರ್ಥಿನಿ ಬಲಿ..!!

ಇಲಿ ಜ್ವರಕ್ಕೆ ಯುವತಿ ಸಾವನ್ನಪ್ಪಿದ ಘಟನೆ  ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವರದಿಯಾಗಿದ್ದು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಸಂಕ್ಲಾಪುರ ಗ್ರಾಮದಲ್ಲಿ …

Leave a Reply

Your email address will not be published. Required fields are marked *

You cannot copy content of this page.