ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ನಿವಾಸಿ ಪ್ರಮೋದ್ ವಿ. ಭಿಡೆ ಎಂಬವರ ಮನೆಯಲ್ಲಿಟ್ಟಿದ್ದ ಚಿನ್ನಾಭರಣ ಕಳವು ಆದ ಬಗ್ಗೆ ಸೆ.12 ರಂದು ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಮೋದ್ ವಿ ಭಿಡೆ ಜು.5. ರಂದು ಮನೆಯ ಸಾರಣೆ ಹಾಗೂ ಪೈಂಟಿಗ್ ಕೆಲಸವನ್ನು ಪ್ರಾರಂಭಿಸಿದ್ದು, ಕೆಲಸ ಪ್ರಾರಂಭ ಮಾಡುವ ಮುಂಚಿತವಾಗಿ ಜು.03ರಂದು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಅವರ ಪತ್ನಿ ಮನೆಯ ನೆಲಮಾಳಿಗೆಯಲ್ಲಿ ಇಟ್ಟಿದ್ದರು. ನೆಲಮಾಳಿಗೆಯಲ್ಲಿಟ್ಟಿದ್ದ ಚಿನ್ನಾಭರಣಗಳ ಕೋಣೆಗೆ ಬೀಗ ಹಾಕದೆ ಇದ್ದು ಮನೆಯ ಕೆಲಸಕ್ಕೆ ಸುಮಾರು 10 ರಿಂದ 13 ಜನ ಕೆಲಸಕ್ಕೆಂದು ಬಂದಿದ್ದು, ಕೆಲಸ ಮುಗಿಸಿ ಜು.19 ರಂದು ತೆರಳಿರುತ್ತಾರೆ. ಸೆ. 12ರಂದು ಬೆಳಗ್ಗೆ ಪ್ರಮೋದ್ ವಿ ಭಿಡೆ ಹಾಗೂ ಅವರ ಪತ್ನಿ ಕಾರ್ಯಕ್ರಮಕ್ಕಾಗಿ ಆಭರಣ ಧರಿಸಿಕೊಳ್ಳಲು ಆಭರಣ ಇಟ್ಟಿದ್ದ ಸ್ಥಳಕ್ಕೆ ಹೋಗಿ ನೋಡಿದಾಗ, ಅಲ್ಲಿ ಇಡಲಾಗಿದ್ದ ಒಟ್ಟು 122 ಗ್ರಾಂ ಚಿನ್ನಾಭರಣಗಳು ಕಳವಾಗಿರುವುದು ಕಂಡು ಬಂದಿದ್ದು, ಕಳವಾದ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 5 ಲಕ್ಷ ರೂಪಾಯಿಯಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Check Also
ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ : ಧರೆಗುರುಳಿದ 7 ವಿದ್ಯುತ್ ಕಂಬಗಳು
ಬಜಪೆ : ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸುಮಾರು 7 ವಿದ್ಯುತ್ ಕಂಬಗಳು ಧರೆಗೆ ಉರುಳಿ ಬಿದ್ದ …