October 16, 2024
WhatsApp Image 2023-01-07 at 4.52.41 PM

ಉಡುಪಿ: ಕಾಂತಾರ ಸಿನಿಮಾ ಎಲ್ಲರನ್ನೂ ನಿಬ್ಬೆರಗುಗೊಳಿಸಿದ್ದು ಮಾತ್ರವಲ್ಲದೆ, ಕರ್ನಾಟಕದ ಕರಾವಳಿಯ ಸಂಸ್ಕೃತಿಯನ್ನು ದೇಶ ವಿದೇಶಗಳಲ್ಲಿ ಪಸರಿಸುವಂತೆ ಮಾಡಿದ್ದು ಸುಳ್ಳಲ್ಲ. ಇದರಲ್ಲಿ ಕಂಡು ಬಂದ ಅದೆಷ್ಟೋ ದೃಶ್ಯಗಳು ನೈಜತೆಗೆ ಹಿಡಿದ ಕೈಗನ್ನಡಿ ಎನ್ನಬಹುದು.

ದೈವ-ದೇವರ ಮೇಲಿನ ನಂಬಿಕೆ ಇಲ್ಲಿನ ಜನರನ್ನು ಯಾವ ರೀತಿ ಕಾಪಾಡಿಕೊಂಡು ಬಂದಿದೆ ಎಂಬುದನ್ನು ಸಿನಿಮಾದಲ್ಲಿ ಅಚ್ಚುಕಟ್ಟಾಗಿ ಬಿಂಬಿಸಲಾಗಿದೆ ಎನ್ನಲಾಗಿದೆ.

ಇದೀಗ ಕಾಂತಾರ ಸಿನಿಮಾದಲ್ಲಿ ಕಂಡುಬಂದ ದೃಶ್ಯವೊಂದು ನಿಜವಾಗಿದ್ದು, ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಕಾಂತಾರ ಸಿನಿಮಾದಲ್ಲಿ ಅನಾವರಣಗೊಂಡ ದೈವ ಮತ್ತು ಕೋರ್ಟ್ ನ ಸನ್ನಿವೇಶದ ಕಥೆ ಉಡುಪಿಯಲ್ಲಿ ಸಂಭವಿಸಿದೆ. ದೈವದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ವ್ಯಕ್ತಿ ಆಕಸ್ಮಿಕವಾಗಿ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

About The Author

Leave a Reply

Your email address will not be published. Required fields are marked *

You cannot copy content of this page.