ಪುತ್ತೂರು: ಹಿಂದೂ ಯುವತಿ ಹಾಗೂ ಮುಸ್ಲಿಂ ಯುವತಿ ಮತ್ತು ಯುವಕರು ಜೊತೆಗಿದ್ದ ಘಟನೆ ಪೆರ್ನೆ ಬಿಳಿಯೂರು ಡ್ಯಾಮ್ ಬಳಿ ಫೆ.3 ರಂದು ರಾತ್ರಿ ವೇಳೆ ನಡೆದಿದೆ.
ಓರ್ವ ಹಿಂದೂ ಯುವತಿ ಹಾಗೂ ಓರ್ವ ಮುಸ್ಲಿಂ ಯುವತಿ ಮತ್ತು ಮೂವರು ಮುಸ್ಲಿಂ ಯುವಕರು ಬಿಳಿಯೂರು ಡ್ಯಾಮ್ ಬಳಿ ಮೋಜು-ಮಸ್ತಿ ಮಾಡುತ್ತಿದ್ದು, ಈ ಬಗ್ಗೆ ತಿಳಿದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ದಾಳಿ ನಡೆಸಿ, ಯುವಕರು ಮತ್ತು ಯುವತಿಯರನ್ನು ಉಪ್ಪಿನಂಗಡಿ ಪೊಲೀಸರಿಗೊಪ್ಪಿಸಿದ್ದಾರೆ ಎಂದು ವರದಿಯಾಗಿದೆ.
ಸಿಕ್ಕಿಬಿದ್ದ ಯುವತಿಯರು ಮತ್ತು ಯುವಕರ ಬ್ಯಾಗ್ ನಲ್ಲಿ ಮಾದಕ ವಸ್ತುಗಳು ಪತ್ತೆಯಾಗಿದ್ದು, ಮಾದಕ ವ್ಯಸನಿಗಳಾಗಿದ್ದರು ಎನ್ನಲಾಗಿದೆ.
ಇಬ್ಬರು ಮುಸ್ಲಿಂ ಯುವಕರನ್ನು ಮಂಗಳೂರು ಮೂಲದವರು ಹಾಗೂ ಇನ್ನೋರ್ವ ಯುವಕ ಪೆರ್ನೆ ಮೂಲದವನು ಎನ್ನಲಾಗಿದೆ.