ನೆದರ್ಲೆಂಡ್ ಕನ್ಯೆಯನ್ನು ಮದುವೆಯಾದ ಮಂಗಳೂರು ಮುಸ್ಲಿಂ ಯುವಕ

ಮಂಗಳೂರು : ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ, ಭಾಷೆ ಬೇಕಿಲ್ಲ ಪ್ರೀತಿಸುವ ಮನಸ್ಸುಗಳಿದ್ದರೆ ಸಾಕು, ಯಾರಿಗೆ, ಯಾವಾಗ, ಯಾರಮೇಲಾದರೂ ಪ್ರೀತಿ ಹುಟ್ಟಬಹುದು. ಇದಕ್ಕೆ ನೆದರ್ಲೆಂಡ್  ಯುವತಿ ಮಂಗಳೂರಿನ ಯುವಕ ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಘಟನೆ ಸಾಕ್ಷಿಯಾಗಿದೆ.

ಯುವಕ ಮೂಲತಃ ಮಂಗಳೂರಿನವನಾಗಿದ್ದು ನೆದರ್ಲೆಂಡ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಪ್ರೀತಿಯಾಗಿದ್ದು , ಇಬ್ಬರೂ ಪರಸ್ಪರ ಒಪ್ಪಿಕೊಂಡು ಮದುವೆಯಾಗಿದ್ದಾರೆ. ನೆದರ್‌ಲೆಂಡ್ ಯುವತಿ ಮುಸ್ಲಿಂ ಸಂಪ್ರದಾಯದಂತೆಯೇ ಇಲ್ಲಿನ ಸುರತ್ಕಲ್ ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ. ಯುವತಿ ಕುಟುಂಬಸ್ಥರೂ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಈ ಸಂಭ್ರಮದ ವೀಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಮದುವೆ ಬಳಿಕ ಭಾಷೆ ತಿಳಿಯದ ಹುಡುಗನ ಹಿರಿಯಜ್ಜಿ ವಿದೇಶಿಗರ ಜೊತೆ ಮಾತನಾಡಲು ಪ್ರಯತ್ನಿಸಿದ್ದಾರೆ, ಈ ತಮಾಷೆಯ ವೀಡಿಯೋ ತುಣುಕು ನೆಟ್ಟಿಗರಲ್ಲಿ ಹಾಸ್ಯ ತರಿಸಿದೆ

ಕಳೆದ ವರ್ಷ ಬೆಲ್ಜಿಯಂ ಕನ್ಯೆಯೊಬ್ಬಳು, ಹಂಪಿಯ ಆಟೋಚಾಲಕ ಯುವಕನನ್ನ ಪ್ರೀತಿಸಿ ಮದುವೆ ಆಗಿದ್ದರು. ಈ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿತ್ತು.

Check Also

ನಾಳೆ (ಜು.20) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ …

Leave a Reply

Your email address will not be published. Required fields are marked *

You cannot copy content of this page.