ದುಬೈ ನಲ್ಲಿ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಮಂಗಳೂರು ಮೂಲದ ಮೂವರು ಯುವಕರು ಸೇರಿ ಒಟ್ಟು ನಾಲ್ವರು ಮೃತಪಟ್ಟ ಘಟನೆ ನಿನ್ನೆ ರಾತ್ರಿ ನಡೆದಿದೆ.
ವೇಗವಾಗಿ ತೆರಳುತ್ತಿದ್ದ ಕಾರಿಗೆ ಒಂಟೆಯೊಂದು ಡಿಕ್ಕಿ ಹೊಡೆದಿದ್ದು, ಪರಿಣಾಮ ಕಾರು ಪಲ್ಟಿಯಾಗಿದೆ.
ಇದರಿಂದ ಗಂಭೀರವಾಗಿ ಗಾಯಗೊಂಡು ಹಳೆಯಂಗಡಿ ಕದಿಕೆಯ ರಿಝ್ವಾನ್, ಕೃಷ್ಣಾಪುರದ ಅಕೀಲ್, ನಾಸಿರ್, ಶಿಹಾಬ್ ಮೃತಪಟ್ಟಿದ್ದಾರೆ.
ಸೌದಿ ಅರೇಬಿಯಾದ ರಿಯಾದ್ ಪ್ರಾಂತ್ಯದ ಅಲ್ ಹಸ ಖುರೇಸ್ ರಸ್ತೆಯಲ್ಲಿ ಹೋಗುತ್ತಿದ್ದಂತೆ ಒಂಟೆಯೊಂದು ಕಾರಿಗೆ ಅಡ್ಡ ಬಂದಿದೆ. ಕಾರು ಪಲ್ಟಿಯಾಗಿ ಒಟ್ಟು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಓರ್ವ ಬಾಂಗ್ಲಾದೇಶದ ಯುವಕ ಎನ್ನಲಾಗಿದೆ.