ನವದೆಹಲಿ: ಮಾಡೆಲ್ ಕಂ ನಟಿ ರಾವಿಶ್ರೀ ಅವರ ಬೆತ್ತಲೆ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಾವಿಶ್ರೀ ಕೇವಲ ಮಾಡೆಲ್, ನಟಿ ಮಾತ್ರವಲ್ಲ, ಡಿಜೆ ಮತ್ತು ಮಾಜಿ ಉಪನ್ಯಾಸಕಿಯೂ ಹೌದು.
ಫೋಟೋಗ್ರಾಫರ್ ಜಿ ವೆಂಕಟ ರಾಮ್ ನಡೆಸಿದ ಬೆತ್ತಲೆ ಫೋಟೋಶೂಟ್ನಲ್ಲಿ ರಾವಿಶ್ರೀ ಸಂಪೂರ್ಣ ಬೆತ್ತಲಾಗಿದ್ದಾರೆ. ಫೋಟೋಗ್ರಾಫರ್ ಕೂಡ ದೃಶ್ಯ ಕಲಾವಿದರಾಗಿದ್ದು, ಜಾಹೀರಾತಿನಲ್ಲಿ ತೊಡಗಿಸಿಕೊಂಡಿದ್ದಾರೆ.
ಸೌಂದರ್ಯದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಫೋಟೋಗ್ರಾಫರ್ ‘ನಗ್ನ ನೋಟ’, ‘ನಗ್ನ ಮೇಕಪ್’, ‘ಬೆತ್ತಲೆ’ ಮತ್ತು ‘ದೇಹದ ಧನಾತ್ಮಕತೆ’ ಎಂಬಿತ್ಯಾದಿ ಹ್ಯಾಶ್‌ಟ್ಯಾಗ್‌ಗಳನ್ನು ಜಾಲತಾಣದಲ್ಲಿ ಬಳಸಿದ್ದಾರೆ.
ಸದ್ಯ ವೈರಲ್ ಆಗಿರುವ ಚಿತ್ರಗಳು ರಾವಿಶ್ರೀ ಕುರಿತಾದ ಸರಣಿ ಚಿತ್ರಗಳ ಒಂದು ಭಾಗವಾಗಿದೆ. ಇದು ದೇಹದ ಸಕಾರಾತ್ಮಕತೆಯನ್ನು ಸಮರ್ಥಿಸುತ್ತದೆ. ಸಮಾಜ ಮತ್ತು ಜನಪ್ರಿಯ ಸಂಸ್ಕೃತಿಯನ್ನು ಲೆಕ್ಕಿಸದೆ ಎಲ್ಲಾ ಜನರು ಸಕಾರಾತ್ಮಕ ದೇಹ ಚಿತ್ರಣವನ್ನು ಹೊಂದಲು ಅರ್ಹರು ಎಂಬುದನ್ನು ಈ ಚಿತ್ರ ಪ್ರತಿಪಾದಿಸುತ್ತದೆ.
ವೆಂಕಟ್ ರಾಮ್ ಈ ಹಿಂದೆಯು ಸಹ ಫ್ಯಾಶನ್ ಮಾಡೆಲ್ ಮರಿಯಾ ಮೆಲೊ ಅವರ ಮೇಲೆ ಇದೇ ರೀತಿಯ ನ್ಯೂಡ್ ಫೋಟೋಶೂಟ್ ಮಾಡಿದ್ದರು. ಹಲವಾರು ಜಾಹೀರಾತು ಪ್ರಚಾರಗಳಲ್ಲಿ ವೆಂಕಟ್ ರಾಮ್ ಕೆಲಸ ಮಾಡಿದ್ದಾರೆ.
ಇಳಯ ದಳಪತಿ ವಿಜಯ್ ಅಭಿನಯದ ‘ವಾರಿಸು’, ವೆಬ್ ಸರಣಿ ‘ವಧಂಧಿ, ದಿ ಫೇಬಲ್ ಆಫ್ ವೆಲೋನಿ’ ನಲ್ಲಿಯೂ ಫೋಟೋಗ್ರಾಫರ್ ಆಗಿ ವೆಂಕಟ್ ರಾಮ್ ಕೆಲಸ ಮಾಡಿದ್ದಾರೆ.