ಉಡುಪಿ: ವಿದೇಶಿಯರು ತಂಗಲು ಈ ಮಾಹಿತಿ ನೋಂದಣಿ ಕಡ್ಡಾಯ: ಪೊಲೀಸ್ ಇಲಾಖೆ ಖಡಕ್ ಸೂಚನೆ

ಉಡುಪಿ: ವಿದೇಶೀಯರ ಕಾಯ್ದೆ 1946ರ ಕಲಂ 7ರಂತೆ ಹೊಟೇಲ್ /ಗೆಸ್ಟ್ ಹೌಸ್/ಧರ್ಮಶಾಲಾ/ ಪ್ರತ್ಯೇಕ ಮನೆ/ಯುನಿವರ್ಸಿಟಿ/ವಿದ್ಯಾಸಂಸ್ಥೆ/ಇತರೆ ಸ್ಥಳಗಳಲ್ಲಿ ವಿದೇಶಿಯರು ತಂಗಿದ ಬಗ್ಗೆ ಮಾಹಿತಿಯನ್ನು ಫಾರ್ಮ್ ‘ಸಿ’ಯನ್ನು ಸಂಬಂಧಪಟ್ಟ ಮಾಲಕರು ನೋಂದಣಿ ಅಧಿಕಾರಿಗಳಿಗೆ(ಸಂಬಂಧ ಪಟ್ಟ ಜಿಲ್ಲೆಯ ಪೊಲೀಸ್ ಅಧೀಕ್ಷಕರು) 24 ಗಂಟೆಯೊಳಗೆ ಕಡ್ಡಾಯವಾಗಿ ನೀಡಬೇಕು ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.

https://indianfrra.gov.in/frro/FormC ಲಿಂಕ್ ಮೂಲಕ ಆನ್ಲೈನ್ ನಲ್ಲಿ ನೋಂದಣಿ ಮಾಡಬಹುದಾಗಿದೆ. ಫಾರ್ಮ್ ಸಿ ಭರ್ತಿಗೊಳಿಸು ವುದು ಹೊಟೇಲ್/ಗೆಸ್ಟ್ ಹೌಸ್/ಧರ್ಮಶಾಲಾ/ಪ್ರತ್ಯೇಕ ಮನೆ/ಯುನಿ ವರ್ಸಿಟಿ/ವಿದ್ಯಾಸಂಸ್ಥೆ/ಇತರೆ ಸ್ಥಳಗಳಲ್ಲಿ ಮಾಲಕರ ಜವಾಬ್ದಾರಿಯಾಗಿದೆ. ವಿದೇಶಿಯರಿಗೆ ಫಾರ್ಮ್ ಭರ್ತಿಗೊಳಿಸುವ ಅವಕಾಶವಿರುವುದಿಲ್ಲ.

ಪ್ರತ್ಯೇಕ ಮನೆಯ ಮಾಲಕರಿಗೆ ಓ.ಟಿ.ಪಿ ಮೂಲಕ ಸ್ವಯಂ ನೋಂದಣಿಗೆ ಅವಕಾಶವಿರುತ್ತದೆ. ಫಾಮ್ ಆಕ್ಷನ್ ನಲ್ಲಿ ಭರ್ತಿಗೊಳಿಸುವ ಸಂಬಂಧ ತಾಂತ್ರಿಕ ಕಾರಣಗಳಿಗೆ ಮೋಜಿಲ್ಲಾ ಪೈರ್ಫಾಕ್ಸ್ ಉಪಯೋಗಿಸಬಹುದು. ಈ ನಿಬಂಧನೆ ಉಲ್ಲಂಘನೆ ಮಾಡಿದಲ್ಲಿ ಸಂಬಂಧಪಟ್ಟವರ ವಿರುದ್ಧ ಕಲಂ 14 ವಿದೇಶಿಯರ ಕಾಯ್ದೆ 1946ರಂತೆ ಕ್ರಮ ಜರುಗಿಸಲಾಗುತ್ತದೆ. ಈ ಪ್ರಕರಣದಲ್ಲಿ 5 ವರ್ಷ ಜೈಲುಶಿಕ್ಷೆ ಮತ್ತು ದಂಡಕ್ಕೆ ಅರ್ಹರಾಗಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ, ಮುಂಗಡವಾಗಿ ಹಣ ಪಡೆದು ವಿದೇಶಕ್ಕೆ ತೆರಳಿದ ನಂತರ ಸರಿಯಾದ ಕೆಲಸವಿಲ್ಲದೆ ಹಣ ಹಾಗೂ, ಕೆಲಸವನ್ನು ಕಳೆದುಕೊಂಡು ವಂಚನೆಗೊಳಗಾದ ಉದಾಹರಣೆಗಳು ಕಂಡುಬರುತ್ತಿವೆ. ಆದುದರಿಂದ ನಾಗರಿಕರು ಜಾಗರೋಕತೆಯಿಂದ ಅನಧಿಕೃತ ಏಜೆಂಟರನ್ನು ಸಂಪರ್ಕಿಸದೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯದೊಂದಿಗೆ ನೋಂದಾಯಿತ ಏಜೆಂಟರುಗಳನ್ನು ಸಂಪರ್ಕಿಸಿ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಬಹುದಾಗಿದೆ. ಜಿಲ್ಲೆಯಲ್ಲಿ ಅಧಿಕೃತವಾಗಿ ನೋಂದಾಯಿತರ ಮಾಹಿತಿಯನ್ನು ಪಡೆದು ಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ. ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿಯ ಪ್ರಕಟಣೆಯಂತೆ ಯಾವುದೇ ಅಧಿಕೃತ ನೋಂದಾಯಿತ ಏಜೆಂಟ್ ಗಳು ಇರುವುದಿಲ್ಲ. ಇತ್ತೀಚಿನ ದಿನಗಳಲ್ಲಿ ನಕಲಿ ಪಾಸ್ಪೋರ್ಟ್ ಪಡೆದ ಪ್ರಕರಣಗಳು ಬೆಳಕಿಗೆ ಬಂದಿದ್ದು, ಇನ್ನು ಮುಂದೆ ನಕಲಿ ಪಾಸ್ ಪೋರ್ಟ್ ಪಡೆಯಲು ಸಹಕರಿಸುವ ಏಜೆಂಟ್ ಹಾಗೂ ಅರ್ಜಿದಾರರು ಪತ್ತೆಯಾದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರಗಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಪ್ರಕಟಣೆ ತಿಳಿಸಿದೆ.

Check Also

ಮಂಗಳೂರು: ಪಿಎಂ ಇಜಿಪಿ, ಮುದ್ರಾಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನಿಸಿ – ಸಂಸದ ಬ್ರಿಜೇಶ್ ಚೌಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪಿಎಂ ಇಜಿಪಿ ಹಾಗೂ ಮುದ್ರಾ ಯೋಜನೆಯಡಿ ಗ್ರಾಮೀಣ ಭಾಗದವರಿಗೆ ವಿಶೇಷವಾಗಿ ಮಹಿಳೆಯರು …

Leave a Reply

Your email address will not be published. Required fields are marked *

You cannot copy content of this page.