ಕ್ಯಾಮೆರಾ ಮುಂದೆ ಬೆತ್ತಲಾದ ಮಾಡೆಲ್​- ನಟಿ ರಾವಿಶ್ರೀ! ಉಪನ್ಯಾಸಕಿಯ ಹಾಟ್​ ಅವತಾರ ವೈರಲ್

ನವದೆಹಲಿ: ಮಾಡೆಲ್​ ಕಂ ನಟಿ ರಾವಿಶ್ರೀ ಅವರ ಬೆತ್ತಲೆ ಫೋಟೋಶೂಟ್​ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ರಾವಿಶ್ರೀ ಕೇವಲ ಮಾಡೆಲ್​, ನಟಿ ಮಾತ್ರವಲ್ಲ, ಡಿಜೆ ಮತ್ತು ಮಾಜಿ ಉಪನ್ಯಾಸಕಿಯೂ ಹೌದು.

ಫೋಟೋಗ್ರಾಫರ್​ ಜಿ ವೆಂಕಟ ರಾಮ್​ ನಡೆಸಿದ ಬೆತ್ತಲೆ ಫೋಟೋಶೂಟ್​ನಲ್ಲಿ ರಾವಿಶ್ರೀ ಸಂಪೂರ್ಣ ಬೆತ್ತಲಾಗಿದ್ದಾರೆ. ಫೋಟೋಗ್ರಾಫರ್​ ಕೂಡ ದೃಶ್ಯ ಕಲಾವಿದರಾಗಿದ್ದು, ಜಾಹೀರಾತಿನಲ್ಲಿ ತೊಡಗಿಸಿಕೊಂಡಿದ್ದಾರೆ.

ಸೌಂದರ್ಯದ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಫೋಟೋಗ್ರಾಫರ್​ ‘ನಗ್ನ ನೋಟ’, ‘ನಗ್ನ ಮೇಕಪ್’, ‘ಬೆತ್ತಲೆ’ ಮತ್ತು ‘ದೇಹದ ಧನಾತ್ಮಕತೆ’ ಎಂಬಿತ್ಯಾದಿ ಹ್ಯಾಶ್‌ಟ್ಯಾಗ್‌ಗಳನ್ನು ಜಾಲತಾಣದಲ್ಲಿ ಬಳಸಿದ್ದಾರೆ.

ಸದ್ಯ ವೈರಲ್​ ಆಗಿರುವ ಚಿತ್ರಗಳು ರಾವಿಶ್ರೀ ಕುರಿತಾದ ಸರಣಿ ಚಿತ್ರಗಳ ಒಂದು ಭಾಗವಾಗಿದೆ. ಇದು ದೇಹದ ಸಕಾರಾತ್ಮಕತೆಯನ್ನು ಸಮರ್ಥಿಸುತ್ತದೆ. ಸಮಾಜ ಮತ್ತು ಜನಪ್ರಿಯ ಸಂಸ್ಕೃತಿಯನ್ನು ಲೆಕ್ಕಿಸದೆ ಎಲ್ಲಾ ಜನರು ಸಕಾರಾತ್ಮಕ ದೇಹ ಚಿತ್ರಣವನ್ನು ಹೊಂದಲು ಅರ್ಹರು ಎಂಬುದನ್ನು ಈ ಚಿತ್ರ ಪ್ರತಿಪಾದಿಸುತ್ತದೆ.

ವೆಂಕಟ್ ರಾಮ್ ಈ ಹಿಂದೆಯು ಸಹ ಫ್ಯಾಶನ್ ಮಾಡೆಲ್ ಮರಿಯಾ ಮೆಲೊ ಅವರ ಮೇಲೆ ಇದೇ ರೀತಿಯ ನ್ಯೂಡ್ ಫೋಟೋಶೂಟ್ ಮಾಡಿದ್ದರು. ಹಲವಾರು ಜಾಹೀರಾತು ಪ್ರಚಾರಗಳಲ್ಲಿ ವೆಂಕಟ್​ ರಾಮ್​ ಕೆಲಸ ಮಾಡಿದ್ದಾರೆ.

ಇಳಯ ದಳಪತಿ ವಿಜಯ್ ಅಭಿನಯದ ‘ವಾರಿಸು’, ವೆಬ್ ಸರಣಿ ‘ವಧಂಧಿ, ದಿ ಫೇಬಲ್ ಆಫ್ ವೆಲೋನಿ’ ನಲ್ಲಿಯೂ ಫೋಟೋಗ್ರಾಫರ್​ ಆಗಿ ವೆಂಕಟ್​ ರಾಮ್​ ಕೆಲಸ ಮಾಡಿದ್ದಾರೆ.

Check Also

ಮಂಗಳೂರು: ಪಿಎಂ ಇಜಿಪಿ, ಮುದ್ರಾಯೋಜನೆ ಫಲಾನುಭವಿಗಳ ಸಂಖ್ಯೆ ಹೆಚ್ಚಳಕ್ಕೆ ಪ್ರಯತ್ನಿಸಿ – ಸಂಸದ ಬ್ರಿಜೇಶ್ ಚೌಟ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪಿಎಂ ಇಜಿಪಿ ಹಾಗೂ ಮುದ್ರಾ ಯೋಜನೆಯಡಿ ಗ್ರಾಮೀಣ ಭಾಗದವರಿಗೆ ವಿಶೇಷವಾಗಿ ಮಹಿಳೆಯರು …

Leave a Reply

Your email address will not be published. Required fields are marked *

You cannot copy content of this page.