

ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡವರ ತನಕ ಕೈಯಲ್ಲಿ ಫೋನ್ ಇರುತ್ತೆ. ಅದರಲ್ಲೂ ಪ್ರೀತಿಯಲ್ಲಿದ್ದ ಯುವಕ ಯುವತಿಯರಿಗೆ ಫೋನ್ ಎಂದರೆ ಅಚ್ಚುಮೆಚ್ಚು. ಕೆಲ ಪ್ರೇಮಿಗಳ ಬಳಿ ಫೋನ್ ಇಲ್ಲ ಅಂದ್ರೆ ಜೀವ ಹೋದಂತೆ ಫೀಲ್ ಆಗುತ್ತೆ. ಹೀಗೆ ಇಲ್ಲೊಬ್ಬ ಹುಡುಗಿ ತನ್ನ ದಿನಕ್ಕೆ 100 ತನ್ನ ಬಾಯ್‌ಫ್ರೆಂಡ್ ಜೊತೆ ಮಾತಾಡಿ ಆಸ್ಪತ್ರೆ ಸೇರಿರೋ ಘಟನೆ ಚೀನಾದಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡವರ ತನಕ ಕೈಯಲ್ಲಿ ಫೋನ್ ಇರುತ್ತೆ. ಅದರಲ್ಲೂ ಪ್ರೀತಿಯಲ್ಲಿದ್ದ ಯುವಕ ಯುವತಿಯರಿಗೆ ಫೋನ್ ಎಂದರೆ ಅಚ್ಚುಮೆಚ್ಚು. ಕೆಲ ಪ್ರೇಮಿಗಳ ಬಳಿ ಫೋನ್ ಇಲ್ಲ ಅಂದ್ರೆ ಜೀವ ಹೋದಂತೆ ಫೀಲ್ ಆಗುತ್ತೆ. ಹೀಗೆ ಇಲ್ಲೊಬ್ಬ ಹುಡುಗಿ ತನ್ನ ದಿನಕ್ಕೆ 100 ತನ್ನ ಬಾಯ್‌ಫ್ರೆಂಡ್ ಜೊತೆ ಮಾತಾಡಿ ಆಸ್ಪತ್ರೆ ಸೇರಿರೋ ಘಟನೆ ಚೀನಾದಲ್ಲಿ ನಡೆದಿದೆ.ಕ್ಸಿಯಾಯು ನೈಋತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ನಿವಾಸಿ. ಈಕೆಯು ತನ್ನ ಗೆಳೆಯನ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಳು. ಬಳಿಕ ಆತನ ನಂಬಿಕೊಂಡಿದ್ದಳು. ಆಕೆಗೆ ತನಗೆ ತಾನೇ ಯಾವಾಗಲೂ ಬಾಯ್‌ಫ್ರೆಂಡ್ ನನ್ನ ಜೊತೆಯೇ ಇರಬೇಕು ಅಂತಾ ಅಂದುಕೊಂಡಿದ್ದಳು. ಎಷ್ಟರ ಮಟ್ಟಿಗೆ ಅಂದ್ರೆ ಆತ ಎಲ್ಲಿಗೆ ಹೋಗುತ್ತಾನೆ, ಏನು ಮಾಡುತ್ತಾನೆ ಅನ್ನೋದನ್ನು ತನಗೆ ತಿಳಿಸಬೇಕು ಎಂದು ಆಕೆ ತಿಳಿದುಕೊಳ್ಳಲು ಪ್ರಾರಂಭಿಸಿದ್ದಳು. ಹಗಲು, ರಾತ್ರಿ ಎನ್ನದೇ ಪ್ರತಿ ಕ್ಷಣ ಆಕೆ ಮೆಸೇಜ್ ಕಳುಹಿಸಿದ್ದರೆ ಕೂಡಲೇ ಬಾಯ್‌ಫ್ರೆಂಡ್ ರಿಪ್ಲೈ ನೀಡಲೇಬೇಕಿತ್ತು. ಹೀಗಾಗಿ ಯುವತಿಯ ವರ್ತನೆಯಿಂದ ಬಾಯ್‌ಫ್ರೆಂಡ್‌ಗೆ ನೆಮ್ಮದಿಯೇ ನೆಮ್ಮದಿ ಇಲ್ಲದಂತೆ ಆಗುತ್ತಿತ್ತಂತೆ. ದಿನಕ್ಕೆ 100ಕ್ಕೂ ಹೆಚ್ಚು ಬಾರಿ ಫೋನ್ನಲ್ಲಿ ಮಾತಾಡುವಂತೆ ಒತ್ತಾಯಿಸುತ್ತಿದ್ದಳಂತೆ, ಜೊತೆಗೆ ವಿಡಿಯೋ ಕಾಲ್ ಮಾಡುವಂತೆ ಹಿಂಸೆ ನೀಡುತ್ತಿದ್ದಳಂತೆ. ಹೀಗಾಗಿ ಇದಕ್ಕೆ ಬೇಸತ್ತ ಬಾಯ್‌ಫ್ರೆಂಡ್ ಆಕೆಯ ಮೆಸೇಜ್ ಅನ್ನು ಅವೈಡ್ ಮಾಡಲು ಶುರು ಮಾಡಿದನಂತೆ.ಇದರಿಂದ ಮನನೊಂದ ಯುವತಿ ಮನೆಯಲ್ಲಿದ್ದ ವಸ್ತುಗಳನ್ನು ಒಡೆದು ಹಾಕುತ್ತಿದ್ದಳಂತೆ. ಬಳಿಕ ಇದನ್ನು ನೋಡಲಾರದೇ ಬಾಯ್‌ಫ್ರೆಂಡ್ ಪೊಲೀಸರಿಗೆ ಕರೆ ಮಾಡಿ ಈ ವಿಚಾರ ತಿಳಿಸಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇದಾದ ಬಳಿಕ ಈಕೆ ಲವ್ ಬ್ರೇನ್ ಕಾಯಿಲೆಗೆ ತುತ್ತಾಗಿದ್ದಾಳೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ. ಈ ಲವ್ ಬ್ರೇನ್ ಒಂದು ರೀತಿಯ ಮಾನಸಿಕ ಕಾಯಿಲೆಯಾಗಿದ್ದು, ಲವ್ ಬ್ರೇನ್ಗೆ ತುತ್ತಾದವರು ಸುಖಾ ಸುಮ್ಮನೆ ಆತಂಕ ಪಡುತ್ತಿರುತ್ತಾರೆ. ಇಲ್ಲವಾದರೇ ಖಿನ್ನತೆಗೆ ಒಳಗಾಗುತ್ತಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿದಿದ್ದಾರೆ.