ಅಂಥದ್ದೇ ಒಂದು ಕಿಲಾಡಿ ಬಾಲಕಿಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಎಂಟು ವರ್ಷದ ಕಿಲಾಡಿ ಬಾಲಕಿಯೊಬ್ಬಳು ಅಪ್ಪ-ಅಮ್ಮನಿಗೆ ತೊಂದರೆ ಕೊಡುತ್ತಾಳೆ ಎಂದು ಅವಳು ಹೇಳಿದಂತೆ ಆಕೆಗೆ ವಿಮಾನದಲ್ಲಿ ಓಡಾಡಲು ಅವಕಾಶ ಮಾಡಿಕೊಟ್ಟಿದ್ದರು ಅವರು. ಆದರೆ ಆಕೆ ಮಾಡಿದ ಕಿಲಾಡಿ ಹಲವರಿಗೆ ಕೋಪವನ್ನೂ ತರಿಸಿದ್ದು, ಹಲವರು ಪಾಲಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ ಅಪ್ಪ-ಅಮ್ಮ ಮಗಳನ್ನು ನಿಯಂತ್ರಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ.
ಅಮೆರಿಕದ ವಿಮಾನವೊಂದರಲ್ಲಿ ನಡೆದಿರುವ ಈ ಘಟನೆಯನ್ನು ರೆಡ್ಡಿಟ್ನಲ್ಲಿ ಶೇರ್ ಮಾಡಲಾಗಿದೆ. ಯಾವ ವಿಮಾನಯಾನ ಸಂಸ್ಥೆ ಅಥವಾ ಯಾವ ವಿಮಾನದಲ್ಲಿ ಘಟನೆ ಸಂಭವಿಸಿದೆ ಎಂಬುದು ಈ ವಿಡಿಯೋದಲ್ಲಿ ದೃಢಪಟ್ಟಿಲ್ಲವಾದರೂ, ಬಾಲಕಿಯ ಕಿಲಾಡಿಯನ್ನು ವಿಡಿಯೋದಲ್ಲಿ ನೋಡಬಹುದು.
“8 ಗಂಟೆಗಳ ಹಾರಾಟದ ಸಮಯದಲ್ಲಿ ಮಕ್ಕಳನ್ನು ಕಾಡಲು ಬಿಡುವುದು” ಎಂಬ ಶೀರ್ಷಿಕೆ ನೀಡಲಾಗಿದ್ದು, ಇದರಲ್ಲಿ ಬಾಲಕಿ ಏನೆಲ್ಲಾ ಮಾಡುತ್ತಿದ್ದಾಳೆ ಎನ್ನುವುದನ್ನು ನೋಡಿ.
Letting children run wild during an 8 hour flight from PublicFreakout