ಮುಲ್ಕಿ: ಮಂಗಳೂರಿನಲ್ಲಿ ಸ್ಫೋಟಗೊಂಡ ಕುಕ್ಕರ್ ಬಾಂಬ್ ಇದೀಗ ಯಕ್ಷಗಾನದಲ್ಲೂ ಹಾಸ್ಯ ರೂಪದಲ್ಲಿ ಸುದ್ದಿಯಾಗುತ್ತಿರುವುದು ಮಾತ್ರವಲ್ಲದೆ ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಪ್ಪನಾಡು ಮೇಳದ ಭಂಡಾರ ಚಾವಡಿ ಪ್ರಸಂಗದಲ್ಲಿ ಕೊಡಪದವು ದಿನೇಶ್ ಮತ್ತು ನಂದಿಕೂರು ರಾಮ ಕೃಷ್ಣ ಅವರ ಸಂಭಾಷಣೆಯಲ್ಲಿ ಕೊಡಪದವು ತನ್ನ ಚೀಲದಿಂದ ಒಂದೊಂದೇ ವಸ್ತುಗಳನ್ನು ತೆಗೆದು ನಂತರ ಕುಕ್ಕರ್ ತೆಗೆಯುವಾಗ ನಂದಿಕೂರು ರಾಮಕೃಷ್ಣ ಹೆದರಿ ಒಡುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೊಡಪದವು ದಿನೇಶ್ ಖ್ಯಾತ ಹಾಸ್ಯಗಾರರಲ್ಲಿ ಒಬ್ಬರಾಗಿದ್ದು, ಪ್ರತೀ ವರ್ಷ ಬಪ್ಪನಾಡು ಯಕ್ಷಗಾನ ಮೇಳದಲ್ಲಿ ವಿಭಿನ್ನ ಹಾಸ್ಯಗಳಲ್ಲಿ ಕಾಣಿಸಿಕೊಂಡು ರಾಜ್ಯದ ಗಮನ ಸೆಳೆಯುತ್ತಿದ್ದಾರೆ.