October 16, 2024
WhatsApp Image 2022-12-30 at 5.50.50 PM

ಉತ್ತರಾಖಂಡ : ಉತ್ತರಾಖಾಂಡ್ ನಲಿ ಆಘಾತಕಾರಿ ಘಟನೆಯೊಂದು ಬಳಕಿಗೆ ಬಂದಿದೆ. ಮದುವೆಯಾದ ಮೊದಲ ರಾತ್ರಿಯೇ ತನ್ನ ಪತ್ನಿ ಟ್ರಾನ್ಸ್‌ಜೆಂಡರ್ ಎಂದು ತಿಳಿದ ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.

ಉತ್ತರಾಖಂಡ ಯುವಕ, ಹರಿಯಾಣದ ಹಿಸಾರ್ ನಲ್ಲಿ ವಾಸುಸುತ್ತಿದ್ದ ಹುಡುಗಿಯನ್ನು ಮದುವೆಯಾಗಿದ್ದನು.

ಇಬ್ಬರದ್ದೂ ಪ್ರೇಮ ವಿವಾಹವಾಗಿತ್ತು. ಆದರೆ ಮದುವೆಯಾದ ಮೊದಲ ರಾತ್ರಿಯೇ ವರನಿಗೆ ಪತ್ನಿ ಟ್ರಾನ್ಸ್‌ಜೆಂಡರ್ ಎಂಬ ವಿಚಾರ ತಿಳಿದು, ತನಗೆ ಮೋಸವಾಗಿದೆ ಎಂದು ಆರೋಪಿಸಿದ್ದಾನೆ.

ಮಾಧ್ಯಮ ವರದಿಗಳ ಪ್ರಕಾರ, ಘಟನೆ ಸಂಬಂಧ ಸಂತ್ರಸ್ತ ಯುವಕ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಈ ವಿಷಯವನ್ನು ಲಕ್ಸರದ ದರ್ಗಾಪುರ ಗ್ರಾಮದಲ್ಲಿ ಹೇಳಲಾಗುತ್ತಿದೆ. ಇಲ್ಲಿ ನೆಲೆಸಿರುವಯುವಕನಿಗೆ ಸೋಷಿಯಲ್ ಮೀಡಿಯಾದಲ್ಲಿ ಯುವತಿಯ ಪರಿಚಯವಾಗಿದ್ದು, ನಂತರ ಇಬ್ಬರ ನಡುವೆ ಪರಸ್ಪರ ಪ್ರಿತಿ ಬೆಳೆದು ಇಬ್ಬರು ಒಪ್ಪಿ ವಿಹಾವಾಗಿದ್ದರು. ಯುವಕ ಯಾವುದೇ ವರದಕ್ಷಿಣೆಯನ್ನು ಪಡೆಯದೆ ವಿವಾಹವಾಗಿದ್ದನು ಎಂದು ತಿಳಿದು ಬಂದಿದೆ.

ಇದೀಗ ಪತ್ನಿಯ ಬಗ್ಗೆ ವಿಚಾರ ತಿಳಿದ ಬಳಿಕ ಸಂತ್ರಸ್ತ ಯುವಕ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ವಿಚ್ಛೇದನ ನೀಡುವ ಬದಲು ಭಾರಿ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಅಪರಿಚಿತ ವ್ಯಕ್ತಿಯಿಂದ ಆತನ ಟ್ರಾನ್ಸ್ಜೆಂಡರ್ ಬಗ್ಗೆ ನನಗೆ ತಿಳಿಯಿತು. ನಾನು ನನ್ನ ಹೆಂಡತಿಯನ್ನು ಕೇಳಿದಾಗ ಅವಳು ಉತ್ತರಿಸದೆ ತನ್ನ ತಾಯಿಯ ಮನೆಗೆ ಹೋದಳು ಎಂದು ಯುವಕ ದೂರಿದ್ದಾನೆ.

ಈ ಕುರಿತು ಯುವಕನ ದೂರಿನ ಮೇರೆಗೆ ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.