ತಾಜಾ ಸುದ್ದಿ

ಉಡುಪಿ: ವಿಡಿಯೋ ಪ್ರಕರಣ-ಮೊದಲ ಹಂತದ ಸಿಐಡಿ ತನಿಖೆ ಪೂರ್ಣ

ಉಡುಪಿ: ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಉಡುಪಿ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ರೆಕಾರ್ಡ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ತನಿಖಾ ಇಲಾಖೆ(ಸಿಐಡಿ) ತನ್ನ ಮೊದಲ ಹಂತದ ತನಿಖೆಯನ್ನು ಪೂರ್ಣಗೊಳಿಸಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ತನಿಖಾಧಿಕಾರಿ(ಐಒ) ಸಿಐಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ನೇತೃತ್ವದ ತನಿಖಾ ತಂಡ, ಈಗಾಗಲೇ ಉಡುಪಿಯ ನೇತ್ರ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್‌ನಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ ಮತ್ತು ಸಂತ್ರಸ್ತೆ, ಆರೋಪಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಯ ಪ್ರತಿನಿಧಿಗಳ ಹೇಳಿಕೆ ದಾಖಲಿಸಿದೆ ಎಂದು ಅವರು ಹೇಳಿದ್ದಾರೆ. ಘಟನೆಯ ಬಗ್ಗೆ ಸಂತ್ರಸ್ತೆ ಅಧಿಕೃತವಾಗಿ …

Read More »

ಗೃಹ ಜ್ಯೋತಿ ಯೋಜನೆ ನೋಂದಣಿಗೆ ಆ.22 ಕೊನೆದಿನ

ಬೆಂಗಳೂರು: ಗೃಹ ಜ್ಯೋತಿ ಯೋಜನೆ ಜಾರಿಯಾಗಿದ್ದು, ರಾಜ್ಯದ ಬಹುತೇಕ ಜನರು ಈ ತಿಂಗಳು ಶೂನ್ಯ ಬಿಲ್ ಪಡೆದುಕೊಂಡಿದ್ದಾರೆ. ಹಾಗೆಯೇ, ಅರ್ಜಿ ಸಲ್ಲಿಸದೇ ಇದ್ದವರು ಈ ತಿಂಗಳ 22ರೊಳಗೆ ಅರ್ಜಿ ಸಲ್ಲಿಸಿ. ಆ. 25ರೊಳಗೆ ಗೃಹ ಜ್ಯೋತಿ ಯೋಜನೆಗೆ ನೋಂದಣಿ ಮಾಡಿಸಿದರೆ ಮುಂದಿನ ತಿಂಗಳ ಶೂನ್ಯ ಬಿಲ್ ಬರಲಿದೆ. ಇಲ್ಲದಿದ್ದರೆ, ಸಂಪೂರ್ಣ ಬಿಲ್ ಕಟ್ಟಬೇಕಾಗುತ್ತದೆ. ಅರ್ಜಿ ಸಲ್ಲಿಸುವವರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಆಧಾರ್ ಕಾರ್ಡ್ ನಂಬರ್, ಆ‌ಆರ್ ನಂಬರ್ ನಮೂದಿಸಿ ಅರ್ಜಿ ಸಲ್ಲಿಸಿ.

Read More »

ಉಳ್ಳಾಲ: ಸಮುದ್ರಕ್ಕೆ ಹಾರಿ ಪುತ್ರ ಆತ್ಮಹತ್ಯೆ ; ಪುತ್ರ ಶೋಕದಲ್ಲಿ ತಂದೆಯೂ ಸಮುದ್ರಕ್ಕೆ ಹಾರಿ ಆತ್ಮಹತ್ಯೆ !

ಮಂಗಳೂರು : ಮಗ ಆತ್ಮಹತ್ಯೆ ಮಾಡಿಕೊಂಡ 32 ದಿನಗಳ ಬಳಿಕ ತಂದೆಯೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ. ಮೃತರನ್ನು ಆತ್ಮಹತ್ಯೆ ಮಾಡಿಕೊಂಡ ಕೇರಳ ಕುಂಬಳೆ ಬಳಿಯ ಬಂಬ್ರಾಣ ಕಲ್ಕುಲ ನಿವಾಸಿ ಕಲ್ಲಿನ ಮೇಸ್ತ್ರಿ ಕೆಲಸ ಮಾಡುತ್ತಿದ್ದ ಲೋಕೇಶ್ (52) ಎಂದು ಗುರುತಿಸಲಾಗಿದ್ದು ಅವರ ಮೃತದೇಹ ಸೋಮವಾರ ಬೆಳಿಗ್ಗೆ ಉಳ್ಳಾಲ ಕಡಲ ಕಿನಾರೆಯಲ್ಲಿ ಪತ್ತೆಯಾಗಿದೆ. ಪುತ್ರ ರಾಜೇಶ್ (26) ಕಳೆದ ಜುಲೈ 10 ರಂದು ನಾಪತ್ತೆಯಾಗಿದ್ದ, ಎರಡು ದಿನಗಳ ಬಳಿಕ ರಾಜೇಶ್ ನ ಮೃತದೇಹ ಮಂಗಳೂರು ಬೆಂಗರೆ ನೇತ್ರಾವತಿ ನದಿ ತೀರದಲ್ಲಿ ಪತ್ತೆಯಾಗಿತ್ತು. ಮಗನ …

Read More »

ಎದೆಹಾಲು ಕುಡಿಸಿ ಮಲಗಿಸಿದ ಮಗು ಸಾವು; ಮೂರು ತಿಂಗಳ ಕಂದಮ್ಮನಿಗೆ ಆಗಿದ್ದೇನು?

ಎದೆಹಾಲು ಕುಡಿಯುವಾಗ ಉಸಿರುಕಟ್ಟಿ ಮೂರು ತಿಂಗಳ ಮಗು ದಾರುಣವಾಗಿ ಸಾವು ಕಂಡಿರುವ ಘಟನೆ ಕೇರಳ ತಿರುನವಂತಪುರದ ಪಲ್ಲಿಚಾಲ್‌ನಲ್ಲಿ ನಡೆದಿದೆ. ಇಲ್ಲಿನ ಜಯಕೃಷ್ಣನ್‌ ಹಾಗೂ ಜಾನಿಮೋಳ್‌ ದಂಪತಿಯ ಪುತ್ರನಾಗಿದ್ದ ಜಿತೇಶ್‌ ಮೃತ ಪುಟ್ಟ ಶಿಶು.ಜಯಕೃಷ್ಣನ್‌ ಹಾಗೂ ಜಾನಿಮೋಳ್‌ ದಂಪತಿಗೆ ಜಿತೇಶ್‌ ಮೊದಲ ಮಗುವಾಗಿತ್ತು. ಭಾನುವಾರ ಸಂಜೆ ಜಾನಿಮೋಳ್‌ ಮಗುವಿಗೆ ಎದೆಹಾಲು ಕುಡಿಸಿ ಆತನನ್ನು ಮಲಗಿಸಿದ್ದರು. ಸೋಮವಾರ ಬೆಳಗ್ಗೆಯಾದರೂ ಮಗು ಎದ್ದಿಲ್ಲ. ಸಂಶಯಗೊಂಡು ತಕ್ಷಣವೇ ದಂಪತಿಗಳು ಮಗುವನ್ನು ಬಲರಾಮಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಈ ಹಂತದಲ್ಲಿ ಮಗುವಿನ ಪಲ್ಸ್‌ ಬಹಳ ಕಡಿಮೆ ಇತ್ತು ಎಂದು ವೈದ್ಯರು …

Read More »

ಮದುವೆಯಾದರೂ ಲೈಂಗಿಕ ಸಂಬಂಧ ಬೆಳೆಸದ ಪತಿ: ಮೊಬೈಲ್ ಪರಿಶೀಲಿಸಿದ ಪತ್ನಿಗೆ ಬಿಗ್ ಶಾಕ್

ಬೆಂಗಳೂರು: ಮದುವೆಯಾದರೂ ಲೈಂಗಿಕ ಸಂಬಂಧ ಬೆಳೆಸದ ಗಂಡನ ವಿರುದ್ಧ ಟೆಕ್ಕಿಯಾಗಿರುವ ಮಹಿಳೆ ದೂರು ನೀಡಿದ್ದಾರೆ. ಪತಿ ಸಲಿಂಗಿಯಾಗಿದ್ದು, ಆತನ ವರ್ತನೆಯಿಂದ ಬೇಸತ್ತು ಜ್ಞಾನ ಭಾರತಿ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ. ಮದುವೆಯಾದಾಗಿನಿಂದಲೂ ಪತಿ ಲೈಂಗಿಕ ಸಂಪರ್ಕ ಮುಂದೂಡುತ್ತಿದ್ದ. ಆತನ ಬಗ್ಗೆ ಅನುಮಾನಗೊಂಡು ವಾಟ್ಸಾಪ್, ಮೆಸೇಂಜರ್ ಪರಿಶೀಲಿಸಿದಾಗ ಗಂಡನ ಅಸಲಿ ವಿಚಾರ ಬಯಲಾಗಿದೆ. ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಮಗನ ವಿಚಾರ ಗೊತ್ತಿದ್ದರೂ ಪೋಷಕರು ಮದುವೆ ಮಾಡಿಸಿದ್ದಾರೆ. ಮದುವೆಯ ಸಂದರ್ಭದಲ್ಲಿ 160 ಗ್ರಾಂ ಚಿನ್ನಾಭರಣ, ನಗದು ನೀಡಲಾಗಿತ್ತು. ಮಗ ಸಲಿಂಗಿ ಎನ್ನುವ ವಿಚಾರವನ್ನು ಪೋಷಕರು ಮುಚ್ಚಿಟ್ಟಿದ್ದರು. …

Read More »

ಕಡಬ: ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಕಾರು ಚಾಲಕ

ಕಡಬ : ಕಾರೊಂದು ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯ ಆತೂರಿನಲ್ಲಿ ನಡೆದಿದ್ದು, ಬೈಕ್ ಸವಾರ ಗಾಯಗೊಂಡಿದ್ದು ಆಸ್ಪತ್ರಗೆ ದಾಖಲಿಸಲಾಗಿದೆ. ಗಾಯಗೊಂಡ ವ್ಯಕ್ತಿಯನ್ನು ಆಲಂಕಾರು ಗ್ರಾಮದ ಕಕ್ವೆ ನಿವಾಸಿ ಸುಧಾಕರ ಎಂದು ಗುರುತಿಸಲಾಗಿದೆ. ಸುಧಾಕರ ಅವರು ಮನೆಯಿಂದ ಉಪ್ಪಿನಂಗಡಿಗೆ ಉಪ್ಪಿನಂಗಡಿ-ಕಡಬ ರಾಜ್ಯ ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಆತೂರು ಅಶ್ವಿನಿ ಆಸ್ಪತ್ರೆ ಮುಂಭಾಗ ತಲುಪುತ್ತಿದ್ದಂತೆ ಹಿಂದಿನಿಂದ ಬಂದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಬೈಕ್‌ ಗೆ ಢಿಕ್ಕಿಯಾಗಿದೆ.ಘಟನೆಯಲ್ಲಿ ಬೈಕ್ ಪಲ್ಟಿಯಾಗಿ ಸವಾರ ಸುಧಾಕರ ಅವರು ಕೆಳಕ್ಕೆ ಎಸೆಯಲ್ಪಟ್ಟು ಗಾಯಗೊಂಡಿದ್ದರು. …

Read More »

ಸ್ವಾತಂತ್ರ್ಯ ದಿನದಂದೇ ಭಾರತದ ಪೌರತ್ವವನ್ನು ಮರಳಿ ಪಡೆದ ಅಕ್ಷಯ್‌ ಕುಮಾರ್

ಮುಂಬಯಿ: ಬಾಲಿವುಡ್‌ ನಟ ಅಕ್ಷಯ್‌ ಕುಮಾರ್ ಕೆನಡಾ ಪೌರತ್ವವನ್ನು ತ್ಯಜಿಸಿ ಭಾರತೀಯ ಪೌರತ್ವ ಹಾಗೂ ಪಾಸ್‌ ಪೋರ್ಟ್‌ನ್ನು ಮರಳಿ ಪಡೆದುಕೊಂಡಿದ್ದಾರೆ. ಕೆನಡಾ ಪೌರತ್ವ ಸಲ್ಲಿಸಿದ್ದು ಯಾಕೆ?: ಬಾಲಿವುಡ್‌ ನಲ್ಲಿ ನಟಿಸಿ, ಭಾರತೀಯರ ಅಪಾರ ಅಭಿಮಾನವನ್ನು ಗಳಿಸಿರುವ ನಟ ಅಕ್ಷಯ್‌ ಕುಮಾರ್‌ ಕೆನಡಾ ದೇಶದ ಪೌರತ್ವವನ್ನು ಹೊಂದಿದ್ದರು. 90 ದಶಕದಲ್ಲಿ ಅವರ ಸಾಲು ಸಾಲ ಸಿನಿಮಾಗಳು ಸೋಲುತ್ತಿದ್ದವು. ಇದರಿಂದ ಮನನೊಂದಿದ್ದ ಅವರು ಬೇರೆ ಏನಾದರೂ ಕೆಲಸ ಮಾಡುವ ನಿಟ್ಟಿನಲ್ಲಿ ಅವರ ಸ್ನೇಹಿತರೊಬ್ಬರ ಸಲಹೆಯಂತೆ ಕೆನಡಾಕ್ಕೆ ತೆರಳಿದ್ದರು. ಆ ಬಳಿಕ ಅಲ್ಲಿನ ಪೌರತ್ವಕೆ ಅರ್ಜಿ ಸಲ್ಲಿಸಿದ್ದರು. ಇದಾದ ಬಳಿಕ …

Read More »

ಸ್ವಾತಂತ್ರ್ಯೋತ್ಸವದಲ್ಲಿ ಧ್ವಜವಂದನೆಗೈದ ಕಟೀಲು ದೇವಾಲಯದ ಮಹಾಲಕ್ಷ್ಮಿ ಆನೆ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಕ್ಷೇತ್ರದ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸುಮಾರು ಎರಡೂವರೆ ಸಾವಿರ ವಿದ್ಯಾರ್ಥಿಗಳಿಂದ ದೇವಳದ ಮುಂಭಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ನಿವೃತ್ತ ಸೈನಿಕರಾದ ಲಕ್ಷ್ಮೀನಾರಾಯಣ ರಾವ್ ಧ್ವಜಾರೋಹಣಗೈದರು. ನಿವೃತ್ತ ಸೈನಿಕರಾದ ನವಾನಂದ ಎಕ್ಕಾರು ದಿಕ್ಸೂಚಿ ಮಾತುಗಳನ್ನಾಡಿದರು. ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರು, ಅರ್ಚಕರು, ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಇನ್ನು ಈ ಹಿಂದೆ ಪುಟ್ ಬಾಲ್ ಆಡಿ, ಕ್ರಿಕೇಟ್ ಆಡಿ, ತಾನೇ ನೀರಿನ ಪೈಪ್ ಹಿಡಿದು ಸ್ಥಾನ ಮಾಡಿದ ದೇವಳದ ಆನೆ ಮಹಾಲಕ್ಷೀ ರಾಷ್ಟ್ರ ಧ್ವಜವನ್ನು ಹಿಡಿದು ಭಾಗವಹಿಸಿದ್ದು …

Read More »

ಬಿಜೆಪಿ ಶಾಸಕರ ಧರಣಿಗೆ ಮಣಿದ ಸರಕಾರ – ಮೂಡಬಿದಿರೆಯ ಅಧಿಕಾರಿಗಳ ಅಮಾನತು ಆದೇಶ ವಾಪಾಸ್

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಅಧಿಕಾರಿಗಳು ತಮ್ಮ ಮಾತನ್ನು ಕೇಳುತ್ತಿಲ್ಲ ಎಂದು ಆರೋಪಿಸಿ ಹಾಗೂ ಮೂಡಬಿದಿರೆ ಕ್ಷೇತ್ರದ ಅಧಿಕಾರಿಗಳ ಅಮಾನತು ಆದೇಶ ವಾಪಾಸ್ ಗೆ ಆಗ್ರಹಿಸಿ ದಕ್ಷಿಣಕನ್ನಡ ಜಿಲ್ಲೆಯ ಶಾಸಕರು ನಡೆಸಿದ ಧರಣಿಗೆ ಸರಕಾರ ಮಣಿದಿದ್ದು, ಅಧಿಕಾರಿಗಳ ಅಮಾನತು ಆದೇಶವನ್ನು ಅಧಿಕೃತವಾಗಿ ವಾಪಾಸ್ ಪಡೆದಿದೆ. ದ.ಕ ಜಿಲ್ಲೆಯ ಮೂಡಬಿದ್ರೆ ತಾ.ಪಂ ಕಾರ್ಯನಿರ್ವಾಹಣಾಧಿಕಾರಿ ಅಮಾನತು ಆದೇಶವನ್ನು ಸರ್ಕಾರ ವಾಪಾಸ್ ಪಡೆದಿದೆ. ಮೂಡಬಿದ್ರೆ ತಾಲೂಕು ಪಂಚಾಯತ್ ಇಓ ದಯಾವತಿಯವರನ್ನು ಶಿಷ್ಟಾಚಾರ ಪಾಲಿಸದ ಹಿನ್ನೆಲೆ ದ‌‌.ಕ ಜಿ.ಪಂ ಸಿಇಓ ಅಮಾನತು ಮಾಡಿದ್ದರು. ಇರುವೈಲ್ ಗ್ರಾ.ಪಂ ಕಟ್ಟಡ ಉದ್ಘಾಟನೆ ಆಮಂತ್ರಣದಲ್ಲಿ ಶಿಷ್ಟಾಚಾರ …

Read More »

ಶೌಚಾಲಯದಲ್ಲಿ ವೀಡಿಯೋ ಶೂಟಿಂಗ್‌ : ಇನ್ನೊಂದು ಪ್ರಕರಣ ಬೆಳಕಿಗೆ

ಲಖನೌ: ಉಡುಪಿಯ ನೇತ್ರಜ್ಯೋತಿ ಪ್ಯಾರಾ ಮೆಡಿಕಲ್‌ ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಂದು ಹುಡುಗಿಯರು ಶೌಚಾಲಯದಲ್ಲಿರುವಾಗ ವೀಡಿಯೋ ಶೂಟಿಂಗ್‌ ಪ್ರಕರಣ ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವಾಗಲೇ ಇದೇ ಮಾದರಿಯ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ.ಉತ್ತರ ಪ್ರದೇಶ ಗಾಜೀಪುರದಲ್ಲಿ ಈ ಘಟನೆ ನಡೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದೆ.ಗಾಜೀಪುರ ಸರ್ಕಾರಿ ಹೋಮಿಯೋಪಥಿ ಕಾಲೇಜಿನ ವಿದ್ಯಾರ್ಥಿನಿ ಮಂತಾಶಾ ಕಝ್ಮಿ ಎಂಬಾಕೆ ಹಾಸ್ಟೆಲ್‌ನಲ್ಲಿ ತನ್ನ ಸಹಪಾಠಿಗಳ ಖಾಸಗಿ ಫೋಟೊ,ವೀಡಿಯೋ ಸೆರೆಹಿಡಿದು ಸೀನಿಯರ್‌ ಅಮೀರ್‌ ಎಂಬಾತನಿಗೆ ಕಳುಹಿಸಿಕೊಡುತ್ತಿದ್ದಳು. ಅಮೀರ್‌ ಈ ಫೋಟೊ ಮತ್ತು ವೀಡಿಯೋ ಬಳಸಿ ಸಂತ್ರಸ್ತೆಯರನ್ನು ಬ್ಲಾಕ್‌ಮೇಲ್‌ ಮಾಡುತ್ತಿದ್ದ.ಈ …

Read More »

You cannot copy content of this page.