ಮಣಿಪಾಲ: ಬಸ್ ಮಾಲಕನೇ ಗ್ಯಾರೇಜ್ ಒಂದರಲ್ಲಿ ಬಸ್ ನ ಅಡಿಗೆ ಬಿದ್ದು ಮೃತಪಟ್ಟ ಘಟನೆ ಮಣಿಪಾಲದ ಬಡಗಬೆಟ್ಟುವಿನಲ್ಲಿ ಸಂಭವಿಸಿದೆ. ಅವಘಡದಲ್ಲಿ ಮೃತಪಟ್ಟವರನ್ನು ಉಡುಪಿ ಮಾಂಡವಿ ಬಸ್‌ನ ಮಾಲಕ ದಯಾನಂದ ಶೆಟ್ಟಿ (65) ಎಂದು ತಿಳಿದುಬಂದಿದೆ.ಇವರು ತಮ್ಮ ಬಸ್‌ನ್ನು 80 ಬಡಗಬೆಟ್ಟು ಬಳಿಯ ಗ್ಯಾರೇಜ್‌ನಲ್ಲಿ ರಿಪೇರಿಗೆ ನೀಡಿದ್ದರು. ಇದನ್ನು ನೋಡಲು ಬಂದಿದ್ದ ಈ ಸಂದರ್ಭದಲ್ಲಿ ಮೆಕ್ಯಾನಿಕ್ ಬಸ್‌ನ್ನು ಒಮ್ಮಿಂದೊಮ್ಮಲೆ ಚಲಾಯಿಸಿದ್ದರು. ಆಗ ಬಸ್‌ನ ಎದುರು ಇದ್ದ ದಯಾನಂದ ಅವರು ಬಸ್ ನ ಎದುರಿನ ಚಕ್ರಕ್ಕೆ ಸಿಲುಕಿದ್ದರು ಎನ್ನಲಾಗಿದೆ. ಅವಘಡದಲ್ಲಿ ದಯಾನಂದ ಗಂಭೀರ ಗಾಯಗೊಂಡಿದ್ದ ಅವರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Check Also
ಗಣಪತಿ ಮೆರವಣಿಗೆಯಲ್ಲಿ ಘರ್ಷಣೆ, ಅಂಗಡಿಗಳಿಗೆ ಬೆಂಕಿ ಹಚ್ಚಿದ ಅನ್ಯಕೋಮಿನ ಯುವಕರು- 144 ಸೆಕ್ಷನ್ ಜಾರಿ..!
ಮಂಡ್ಯ: ನಾಗಮಂಗಲ ಪಟ್ಟಣದಲ್ಲಿ ಗಣಪತಿ ಮೂರ್ತಿ ವಿಸರ್ಜನ ಮೆರವಣಿಗೆ ವೇಳೆ ಬುಧವಾರ ರಾತ್ರಿ ಘರ್ಷಣೆ ನಡೆದಿದೆ. ಘಟನೆಯ ನಂತರ ಕೆಲವು …