ಮಂಗಳೂರು : ಕನ್ನಡ ಸಿನಿಮಾ ‘ಮೆಹಬೂಬ’ದಲ್ಲಿ ಹಿಂದುತ್ವ ಜಿಹಾದ್ ಪ್ರೇರೇಪಣೆ ಆರೋಪ

ಮಂಗಳೂರು : ನಾಳೆ ರಿಲೀಸ್ ಆಗಲಿರುವ ಮೆಹಬೂಬ ಕನ್ನಡ ಸಿನಿಮಾದಲ್ಲಿ ಹಿಂದುತ್ವ ಜಿಹಾದ್ ಪ್ರೇರೇಪಣೆ ಆರೋಪ ಕೇಳಿ ಬಂದಿದೆ. ಇದೀಗ ಮೆಹಬೂಬ ಸಿನಿಮಾ ಬಿಡುಗಡೆಗೆ ಮುಸ್ಲಿಂ ಸಮುದಾಯದ ವಿರೋಧ‌ ವ್ಯಕ್ತವಾಗಿದೆ. ಬಿಗ್ ಬಾಸ್ ವಿನ್ನರ್ ಶಶಿಕುಮಾರ್ ಅಭಿನಯದ ಈ ಸಿನಿಮಾ ಕರಾವಳಿಯ ನೈಜ ಘಟನೆಯೊಂದನ್ನು ಆಧರಿಸಿ ನಿರ್ಮಾಣಗೊಂಡಿದೆ ಎನ್ನಲಾಗಿದೆ. ಈ ಸಿನಿಮಾ ಬಿಡುಗಡೆಗೆ ಮುಸ್ಲಿಂ ಸಮುದಾಯ ಹಾಗೂ ವಿದ್ಯಾರ್ಥಿ ಸಂಘದಿಂದ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾದ ವಿರುದ್ಧ ಆಕ್ರೋಶ‌ ಕೇಳಿ ಬರುತ್ತಿದೆ. ಈ ಸಿನಿಮಾವನ್ನು ನಾಳೆ ಬಿಡುಗಡೆ ಮಾಡಬಾರದೆಂದು ಸಿಎಂಗೆ All college students association ಟ್ವೀಟ್ ಮಾಡಿದೆ. ನಾಳೆ ಈ ಸಿನಿಮಾ ರಿಲೀಸ್ ಆದಲ್ಲಿ ಸಿನಿಮಾ ತಂಡಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಲಾಗಿದೆ. ರಾಜ್ಯಾದ್ಯಂತ ಚಿತ್ರಮಂದಿರಗಳಿಗೆ ಹೋಗಿ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದೆ.

Check Also

ಮಂಗಳೂರು: ಮತಗಟ್ಟೆಗಳಲ್ಲಿ ವರ್ಣ ಚಿತ್ತಾರ

ಎಲ್ಲೆಡೆ ಚುನಾವಣೆ ಕಾವು ಹೆಚ್ಚಾಗುತ್ತಾ ಇದೆ. ಇತ್ತ ಮತದಾನದ ಪ್ರಮಾಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ ಮಂಗಳೂರು ತಾಲೂಕು …

Leave a Reply

Your email address will not be published. Required fields are marked *

You cannot copy content of this page.