March 6, 2026
images

ಪುತ್ತೂರು: KSRTC ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಅರ್ಚಕ ಸುಬ್ರಹ್ಮಣ್ಯ ಭಟ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಕಬಕದ ಮುರ ಗ್ರಾಮದ ಬಳಿ ಗುರುವಾರ ಕನ್ಯಾನ ಸಮೀಪದ ಯುವತಿಯೊಬ್ಬಳು ಉಪ್ಪಳ-ಪುತ್ತೂರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ತನ್ನ ತಾಯಿಯೊಂದಿಗೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪುತ್ತೂರಿಗೆ ಪ್ರಯಾಣಿಸುತ್ತಿದ್ದಳು. ಈ ವೇಳೆ ಯುವತಿಯ ಹಿಂದೆ ಕುಳಿತಿದ್ದ ಅರ್ಚಕ ಸುಬ್ರಹ್ಮಣ್ಯ ಭಟ್ ತನ್ನನ್ನು ಮುಟ್ಟಿದ್ದಾಗಿ ಯುವತಿ ದೂರು ನೀಡಿದ್ದಾಳೆ.

ಅರ್ಚಕ ತನ್ನ ಕೈಗಳನ್ನು ಸೀಟುಗಳ ನಡುವೆ ಇಟ್ಟು ಯುವತಿಯ ಸೊಂಟದ ಕೆಳಗೆ ಮುಟ್ಟಿದ್ದಾನೆ. ಯುವತಿ ಬೊಬ್ಬೆ ಹಾಕಿದಾಗ ಆತ ಪುತ್ತೂರಿನ ಬೊಳ್ವಾರ್ ಬಳಿ ಬಸ್ ನಿಂದ ಇಳಿದು ಹೋಗಿದ್ದ.

ನಂತರ ಸಂಜೆ 5.30ರ ಸುಮಾರಿಗೆ ಮಹಿಳೆ ಮಹಿಳಾ ಪೊಲೀಸ್ ಠಾಣೆಗೆ ಬಂದು ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಪೊಲೀಸರು ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗೆ ನ್ಯಾಯಾಲಯ ಜಾಮೀನು ನೀಡಿರುವುದಾಗಿ ತಿಳಿದು ಬಂದಿದೆ.

About The Author

Leave a Reply

Your email address will not be published. Required fields are marked *

You cannot copy content of this page.