March 6, 2026
WhatsApp Image 2023-06-23 at 1.03.32 PM

ಚಿಕ್ಕಮಗಳೂರು : ಕಾಫಿ ತೋಟದ ಮಧ್ಯೆ 10 ಅಡಿ ಅಗಲ ಹಾಗೂ ಸುಮಾರು 15 ಅಡಿಯಷ್ಟು ಆಳದ ಬೃಹತ್ ಗುಂಡಿ ತೋಡಿ ನಿಧಿಗಾಗಿ ಶೋಧ ನಡೆಸಿರುವ ಘಟನೆ ತಾಲೂಕಿನ ಆಣೂರು ಸಮೀಪದ ಕೆಸರಿಕೆ ಗ್ರಾಮದಲ್ಲಿ ನಡೆದಿದೆ. ಉಡುಪಿ ನೋಂದಣಿ ಹೊಂದಿರುವ ಎರಡು ಕಾರುಗಳಲ್ಲಿ ಬಂದಿದ್ದ 15ಕ್ಕೂ ಹೆಚ್ಚು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ನಿಧಿಗಾಗಿ ಶೋಧ ನಡೆಸಿದ ಜಾಗದಲ್ಲಿ ಅರಿಶಿನ-ಕುಂಕುಮ, ಬಾಳೆಹಣ್ಣು, ತೆಂಗಿನಕಾಯಿ, ಕುಂಬಳಕಾಯಿ, ಊದುಬತ್ತಿ, ಕರ್ಪೂರ, ಮೂರು ತರದ ದಾರ, ಕೋಳಿ ಸೇರಿದಂತೆ ವಿವಿಧ ವಸ್ತುಗಳು ಪತ್ತೆಯಾಗಿವೆ. ಕಳೆದೊಂದು ವಾರದಿಂದ ರಸ್ತೆ ಬದಿ ಎರಡು ಮೂರು ಗಾಡಿಗಳು ನಿಲ್ಲುತ್ತಿದ್ದವು.‌ ಸ್ಥಳೀಯರಿಗೆ ಅನುಮಾನ ಕೂಡ ಮೂಡಿತ್ತು. ಕಳೆದ ರಾತ್ರಿ ತೋಟಕ್ಕೆ ನೀರಾಯಿಸಲು ಹೋಗುವಾಗಲೂ ರಸ್ತೆ ಬದಿ ಎರಡು ಕಾರುಗಳು ನಿಂತಿದ್ದವು. ತೋಟಕ್ಕೆ ನೀರಿನ ಮೋಟಾರ್ ಆನ್ ಮಾಡಿ ಬರುವಾಗ ತೋಟದ ಮಧ್ಯೆ ಗಲಾಟೆ ಹಾಗೂ ಬೆಳಕು ಕಾಣುತ್ತಿತ್ತು. ಇದನ್ನ ಗಮನಿಸಿದ ಸ್ಥಳೀಯರು ಊರಿಗೆ ಬಂದು ನಾಲ್ಕೈದು ಜನ ಸ್ಥಳಕ್ಕೆ ಹೋಗಿ ಟಾರ್ಚ್ ಆನ್ ಮಾಡಿ ಯಾರೆಂದು ಕೇಳಿದಾಗ ಎಲ್ಲರೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ಥಳದಲ್ಲಿದ್ದ ಗುಂಡಿಯನ್ನು ಕಂಡು ಸ್ಥಳೀಯರು ಆತಂಕಗೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.