October 18, 2024
WhatsApp Image 2023-01-08 at 11.19.29 AM

ಲ್ವಾ ಎಂದರೆ ಬಾಯಲ್ಲಿ ನೀರು ಬರುತ್ತದೆಯೇ.? ಹಾಗಾದ್ರೆ ಇಲ್ಲಿದೆ ನೋಡಿ ಒಂದು ರುಚಿಕರವಾದ ಕೊಕೊನಟ್ ಹಲ್ವಾ ಮಾಡುವ ವಿಧಾನ. ಮಕ್ಕಳಿಗಂತೂ ಇದು ತುಂಬ ಇಷ್ಟವಾಗುತ್ತೆ.ಬೇಕಾಗುವ ಸಾಮಗ್ರಿಗಳು:

1 ¼ ಕಪ್ – ತೆಂಗಿನಕಾಯಿ ಹಾಲು, 2/3 ಕಪ್ – ಹಾಲು, 2/3 ಕಪ್ – ಸಕ್ಕರೆ, ¼ ಕಪ್ – ತೆಂಗಿನಕಾಯಿ ತುರಿ, 2 ಟೇಬಲ್ ಸ್ಪೂನ್ – ಬೆಣ್ಣೆ, 2 ಟೇಬಲ್ ಸ್ಪೂನ್ – ಬಾದಾಮಿ, 2 ಟೇಬಲ್ ಸ್ಪೂನ್ – ಪಿಸ್ತಾ.

 

ಮಾಡುವ ವಿಧಾನ:

ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಹಾಲು ಹಾಕಿ ಹದ ಉರಿಯಲ್ಲಿ ಕುದಿಸಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಹಾಗೂ ತೆಂಗಿನಕಾಯಿ ತುರಿ ಸೇರಿಸಿ ಈ ಮಿಶ್ರಣ ದಪ್ಪಗಾಗುವವರೆಗೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಬೆಣ್ಣೆ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ.

ಒಂದು ಪ್ಲೇಟ್ ಗೆ ತುಸು ತುಪ್ಪ ಸವರಿ ಈ ಮಿಶ್ರಣವನ್ನು ಹಾಕಿ ಇದರ ಮೇಲೆ ಬಾದಾಮಿ ಹಾಗೂ ಪಿಸ್ತಾ ಚೂರುಗಳನ್ನು ಹಾಕಿ ಸಮತಟ್ಟು ಮಾಡಿಕೊಳ್ಳಿ. ಇದು ತುಸು ಬಿಸಿ ಇರುವಾಗಲೇ ನಿಮಗೆ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಿ.

About The Author

Leave a Reply

Your email address will not be published. Required fields are marked *

You cannot copy content of this page.