ಹನಿಮೂನ್​ ವೇಳೆ ಗಂಡನಿಗೆ ಮತ್ತು ಬರುವ ಔಷಧಿ ನೀಡಿ ಪ್ರಿಯಕರನ ಜೊತೆ ಓಡಿ ಹೋದ ಹೆಂಡ್ತಿ.!

ವದೆಹಲಿ: ವಿವಾಹವು ಎರಡು ಆತ್ಮಗಳನ್ನು ಒಂದುಗೂಡಿಸುವ ಪವಿತ್ರ ಬಂಧವಾಗಿದೆ. ಮದುವೆ ನಂತರ ಬರುವ ಮಧುಚಂದ್ರವು ನವವಿವಾಹಿತ ದಂಪತಿಗಳಿಗೆ ಖಾಸಗಿತನಕ್ಕೆ ಉದಾಹರಣೆಯಾಗಿದೆ. ಅಂದ ಹಾಗೇ ವರನಿಗೆ ಮತ್ತು ಬರುವ ಔಷಧಿ ನೀಡಿ ತನ್ನ ಲವರ್​ ಜೊತೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.

 

ಸತ್ಯಂ ಎಂದು ಗುರುತಿಸಲಾದ ವರನನ್ನು ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿಗಢದ ಗುರುದ್ವಾರ ರಸ್ತೆಯ ನಿವಾಸಿ ನವೆಂಬರ್ನಲ್ಲಿ ಆಗ್ರಾ ಕ್ಯಾಂಟ್ ನಿವಾಸಿ ದೀಪಾಸಿ ಅವರನ್ನು ವಿವಾಹವಾದರು. ಡಿಸೆಂಬರ್ 8, 2022 ರಂದು ಮಧುಚಂದ್ರಕ್ಕಾಗಿ ಉತ್ತರಾಖಂಡಕ್ಕೆ ತಮ್ಮ ಹೆಂಡತಿಯೊಂದಿಗೆ ತೆರಳಿದ್ದರು. ನವವಿವಾಹಿತ ದಂಪತಿಗಳು ಡಿಸೆಂಬರ್ 9 ರಂದು ಹೃಷಿಕೇಶಕ್ಕೆ ಹೋಗಿ ಬಸ್ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರು. ಈ ನಡುವೆ ಹೋಟೆಲ್ ನಲ್ಲಿ ಚಹಕುಡಿದ ಬಳಿಕ ಸತ್ಯಂ ಪ್ರಜ್ಞೆ ಕಳೆದುಕೊಂಡ ಎನ್ನಲಾಗಿದೆ. ಈ ನಡುವೆ ನಂತರ, ದೀಪಾಸಿ ತನ್ನ ಸಾಮಾನು ಸರಂಜಾಮುಗಳನ್ನು ಪ್ಯಾಕ್ ಮಾಡಿ ತನ್ನ ಬ್ಯಾಗ್ ಮತ್ತು ಹಣದೊಂದಿಗೆ ಹೋಟೆಲ್ ನಿಂದ ಗೆಳೆಯನ ಜೊತೆಗೆ ಓಡಿ ಹೋಗಿದ್ದಾಳೆ ಎನ್ನಲಾಗಿದೆ. ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಸತ್ಯಂಗೆ ಪ್ರಜ್ಞೆ ಮರಳಿದಾಗ, ಹೋಟೆಲ್ ಸಿಬ್ಬಂದಿಯಿಂದ ತನ್ನ ಹೆಂಡತಿಯ ಬಗ್ಗೆ ವಿಚಾರಿಸಿದಾಗ, ಅವಳು ಸಂಜೆ 7 ಗಂಟೆ ಸುಮಾರಿಗೆ ಹೋಟೆಲ್ನಿಂದ ಹೊರಗೆ ಹೋಗಿದ್ದಾಳೆ ಎನ್ನುವುದನ್ನು ಕಂಡು ಕೊಂಡಿದ್ದಾಳೆ.

ತಕ್ಷಣವೇ, ಅವರು ಈ ವಿಷಯದ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ತನಿಖೆಯ ನಂತರ, ದೀಪಾಸಿ ಬಸ್ಸಿನಲ್ಲಿ ದೆಹಲಿಗೆ ತೆರಳಿದ್ದಳೆ ಎಂದು ತಿಳಿದುಬಂದಿದೆ. ಸತ್ಯಂ ಈ ಘಟನೆಯ ಬಗ್ಗೆ ಅಲಿಗಢದಲ್ಲಿರುವ ತನ್ನ ಕುಟುಂಬಕ್ಕೆ ಮತ್ತು ಆಗ್ರಾದಲ್ಲಿರುವ ತನ್ನ ಅತ್ತೆ-ಮಾವಂದಿರಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಆಕೆಯ ಕುಟುಂಬವು ಗ್ಯಾಂಗ್​ಸ್ಟರ್​ ಅನ್ಶು ಯಾದವ್ ಎಂಬ ಮತ್ತೊಬ್ಬ ಯುವಕನ ಜೊತೆ ದಿಪಾಸಿಗೆ ಸಂಬಂಧ ಇದೆ. ಆಕೆಯನ್ನು ಮರೆತುಬಿಡುವಂತೆ ಸತ್ಯಂಗೆ ಹೇಳಿದ್ದಾರೆ ಎನ್ನಲಾಗಿದೆ.

Check Also

ಉಡುಪಿ: ಯಕ್ಷಗಾನ ವೇಷ ಧರಿಸಿ ಐಎಎಸ್,‌ ಐಪಿಎಸ್,‌ ಕೆಎಎಸ್ ಅಧಿಕಾರಿಗಳಿಂದ ಮತದಾನ ಜಾಗೃತಿ

ಉಡುಪಿ : ಉಡುಪಿ ಜಿಲ್ಲಾಡಳಿತ ವ್ಯಾಪಕವಾಗಿ ಮುಂಬರುವ ಲೋಕಸಭೆ ಚುನಾವಣೆಗಾಗಿ ಮತದಾನ ಜಾಗೃತಿಯಲ್ಲಿ ತೊಡಗಿದೆ. ಮತಜಾಗೃತಿಗಾಗಿ‌ ಸ್ವೀಪ್ ಸಮಿತಿ ವಿವಿಧ …

Leave a Reply

Your email address will not be published. Required fields are marked *

You cannot copy content of this page.