April 1, 2026
WhatsApp Image 2026-03-31 at 6.34.03 PM

ಮಂಗಳೂರು : ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿ, ಯುವ ಉದ್ಯಮಿ ಸುದೀಪ್ ರೈ ಮದುವೆಯಾದ ಒಂದೇ ತಿಂಗಳಿಗೆ ಕಾರ್ಕಳದಲ್ಲಿರುವ ಪತ್ನಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿರುವು ಪಡದುಕೊಂಡಿದೆ.

ಪತ್ನಿ ಸೌಮ್ಯಾ ಶೆಟ್ಟಿಯೇ ಸುದೀಪ್ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಮದುವೆಯಾಗಿ ಕೆಲವೇ ದಿನಗಳಲ್ಲಿ ಪತ್ನಿ ಈ ಮೊದಲು ಕೆಲವು ಮದುವೆಯಾಗಿರುವುದು ಬಯಲಾಗಿದೆ. ಹೀಗಾಗಿ ಮದುವೆಯಾದ ಒಂದು ತಿಂಗಳ ಬಳಿಕ ತನ್ನ ತಂದೆ-ತಾಯಿ ಮನೆಗೆ ಬಂದಿದ್ದ ಸುದೀಪ್​​ ಪತ್ನಿ ಹಣ ಒಡವೆ ಕಿತ್ತುಕೊಂಡಿದ್ದಾಳೆ, ತುಂಬಾ ಟಾರ್ಚರ್ ಕೊಡುತ್ತಿದ್ದಾಳೆ ಎಂದು ಅಲವತ್ತುಕೊಂಡಿದ್ದರು ಎಂದು ಸಂದೀಪ್‌ ರೈಯ ತಂದೆ ಮತ್ತು ತಾಯಿ ಮಾಧ್ಯಮದ ಎದುರು ಆರೋಪಿಸಿದ್ದಾರೆ.

ಸುದೀಪ್​​ ತನ್ನ ತಂದೆ-ತಾಯಿ ಬಳಿ ಬಂದಿರುವ ವಿಷಯ ತಿಳಿದ ಸೌಮ್ಯಾ ಸ್ಕೂಟಿಯಲ್ಲೇ ನೂರು ಕಿಲೋಮೀಟರ್ ಪ್ರಯಾಣ ಮಾಡಿ ಬಂದಿದ್ದಳು. ನೆಲ್ಯಾಡಿಯಲ್ಲಿ ತಾಯಿ ಜೊತೆ ಕಾರಿನಲ್ಲಿ ತೆರಳುತ್ತಿದ್ದ ಸುದೀಪ್​​ರನ್ನು ಅಡ್ಡಗಟ್ಟಿ, ಗ್ರಾಮಸ್ಥರ ಎದುರು ಗಲಾಟೆ ಮಾಡಿದ್ದಳು ಬಳಿಕ ಪತಿ ಕಾರು ಹತ್ತಿದ್ದ ಈಕೆ ಅರ್ಧ ದಾರಿಯಲ್ಲೇ ತಾಯಿಯನ್ನು ಇಳಿಸುವಂತೆ ಹಿಂಸಿಸಿದ್ದಳು. ಆಕೆಯ ಕಾಟ ತಾಳಲಾರದೆ ಸುದೀಪ್​​ ರಾತ್ರಿ ವೇಳೆ ತಾಯಿಯನ್ನು ರಸ್ತೆಯಲ್ಲಿ ಇಳಿಸಿ ಪತ್ನಿ ಮನೆಗೆ ತೆರಳಿದ್ದರು. ಈ ವಿಚಾರವಾಗಿ ಅವರು ಬಹಳ ನೊಂದಿದ್ದರು ಎಂಬ ವಿಚಾರವೀಗ ಬಯಲಾಗಿದೆ.

ಸಾಮಾಜಿಕ ಜಾಲತಾಣದ ಮೂಲಕ ಸುದೀಪ್​​ಗೆ ಸೌಮ್ಯಾ ಪರಿಚಯ ಆಗಿತ್ತು. ಇವರಿಬ್ಬರೂ ಮದುವೆಯ ಬಗ್ಗೆ ನಿರ್ಧರಿಸಿದಾಗ ಅವಸರ ಮಾಡಬೇಡ. ತಾಳ್ಮೆಯಿಂದಿರು, ಎಲ್ಲ ವಿಚಾರಿಸಿ ಮದುವೆ ಮಾಡುತ್ತೇವೆ ಎಂದು ಪೋಷಕರು ಹೇಳಿದ್ದರು. ಹೀಗಿದ್ದರೂ ಆತುರಕ್ಕೆ ಬಿದ್ದ ಸುದೀಪ್​​ ಪೋಷಕರಿಗೆ ತಿಳಿಸದೆ ಫೆ.16ರಂದು ದೇವಸ್ಥಾನದಲ್ಲಿ ಮದುವೆಯಾಗಿ ಫೆ.17ರಂದು ರಿಜಿಸ್ಟ್ರರ್ ಮ್ಯಾರೇಜ್ ಆಗಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಸುದೀಪ್​​ ಪೋಷಕರು, ಆಕೆಗೆ ಇದು ಮೂರನೇ ಮದುವೆ ಎಂದು ನಮಗೆ ಗೊತ್ತಿರಲಿಲ್ಲ ಎಂದಿದ್ದಾರೆ.

ಮಾ.16ಕ್ಕೆ ಮಗ ಮನೆಗೆ ಬಂದು ಆಕೆಯ ಟಾರ್ಚರ್ ಬಗ್ಗೆ ಹೇಳಿಕೊಂಡಿದ್ದ. ಮಾ.17ಕ್ಕೆ ನೆಲ್ಯಾಡಿಯಲ್ಲಿ ಬಂದು ಗಲಾಟೆ ಮಾಡಿ ಸುದೀಪ್​​ನ ಆಕೆ ಕರೆದುಕೊಂಡು ಹೋಗಿದ್ದಳು. ಬಳಿಕ ಅಲ್ಲಿ ಏನಾಯ್ತು ಗೊತ್ತಿಲ್ಲ. ಮಾ.22ಕ್ಕೆ ಆತ ಆಸ್ಪತ್ರೆಯಲ್ಲಿರುವುದು ನಮಗೆ ತಿಳಿಯಿತು. ಆಸ್ಪತ್ರೆಗೆ ಹೋಗಿ ಕೇಳಿದಾಗ ಫುಡ್ ಪಾಯಿಸನ್, ಜಾಂಡೀಸ್ ಎಂದು ಕತೆ ಹೇಳಿದರು. ಇದರಲ್ಲಿ ಕೊಲೆ ಸಂಶಯ ಇರುವುದರಿಂದ ಉನ್ನತ ಮಟ್ಟದ ತನಿಖೆ ಆಗಬೇಕು ಎಂದವರು ಕಣ್ಣೀರು ಹಾಕಿದ್ದಾರೆ.

ಸೌಮ್ಯ ಶೆಟ್ಟಿಯ ಸಹವಾಸಕ್ಕೆ ಸಿಲುಕಿ ಹೈರಾಣಾಗಿ ಹೊರಬಂದಿದ್ದ ಕಲಾವಿದ, ದೈವದ ಆರಾಧಕ ವೇಣು ಶೆಟ್ಟಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆಕೆಯಿಂದ ಬಹಳ ಟಾರ್ಚರ್ ಅನುಭವಿಸಿ ಊರು ಬಿಟ್ಟು ಹೋಗಿದ್ದೆ. ಆಕೆಯ ಜೊತೆಗಿನ ಮದುವೆ ಕ್ಯಾನ್ಸಲ್ ಮಾಡಿರುವುದರಿಂದ ಇನ್ನಿಲ್ಲದ ರೀತಿಯಲ್ಲಿ ಕಿರುಕುಳ ಅನುಭವಿಸಿದ್ದು, ಜೀವನದಲ್ಲಿ ಮದುವೆಯೇ ಬೇಡ ಎಂದು ನಿರ್ಧರಿಸಿದ್ದೇನೆ. ಸೈಕಾಲಜಿ ಓದಿದ್ದರೂ ಆಕೆಯ ಕಾಟಕ್ಕೆ ಮಾನಸಿಕವಾಗಿ ಕುಗ್ಗಿದ್ದೆ ಎಂದು ಮಂಗಳೂರಿನಲ್ಲಿ ಸುದ್ದಿಗೋಷ್ಠಿ ಕರೆದು ಹೇಳಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.