March 9, 2026
WhatsApp Image 2026-03-09 at 3.15.02 PM

ಕಾರ್ಕಳ : ನ್ಯಾಯಾಲಯದಲ್ಲಿ ಪತಿ ಸಾಕ್ಷಿ ಹೇಳಿದ ಕಾರಣಕ್ಕೆ ಪತ್ನಿಯ ಮೇಲೆ ಹಲ್ಲೆಗೆ ಯತ್ನಿಸಿ, ಪತಿ ಪತ್ನಿ ಇಬ್ಬರನ್ನೂ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುವ ಘಟನೆ ಕಾರ್ಕಳದ ಬೈಲೂರಿನಲ್ಲಿ ಮಾ.6 ರಂದು ನಡೆದಿದೆ.

ಗಣೇಶ್ ಪೂಜಾರಿ ಎಂಬಾತ ಮಾ.6 ರಂದು ಕಾರಿನಲ್ಲಿ ಬಂದು ಬೈಲೂರು ಪಂಚಾಯತ್ ಮುಂಭಾಗದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿರುವ ಪುಷ್ಪಲತಾ ಎಂಬವರಿಗೆ ತಲವಾರಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದು, ಪುಷ್ಪಲತಾ ಮತ್ತು ಅವರ ಪತಿ ರಾಜೇಂದ್ರ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ತನ್ನ ವಿರುದ್ಧ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿದರೆ ಇಬ್ಬರನ್ನೂ ತಲವಾರಿನಿಂದ ಕೊಚ್ಚಿ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.

ರಾಜೇಂದ್ರ ಅವರು ಗಣೇಶ್ ಪೂಜಾರಿ ವಿರುದ್ಧ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸಾಕ್ಷಿ ಹೇಳಿರುವುದರಿಂದ ಹಲ್ಲೆಗೆ ಯತ್ನಿಸಿ ಬೆದರಿಕೆ ಹಾಕಿದ್ದಾರೆ ಎಂದು ಪುಷ್ಪಲತಾ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

You cannot copy content of this page.