ಮತ್ತೊಂದು ಬೆತ್ತಲೆ ಫೋಟೋ ಶೂಟ್ ವೈರಲ್…!

ಬಾಲಿವುಡ್ ನಟ ರಣವೀರ್ ಸಿಂಗ್ ಬಟ್ಟೆ ಇಲ್ಲದೆ ನ್ಯೂಡ್‌ ಫೋಟೋಶೂಟ್ ಮಾಡಿ ಸಾಕಷ್ಟು ಟ್ರೋಲ್ ಆಗಿರುವ ಬೆನ್ನಲ್ಲೇ ಇನ್ನೊಬ್ಬರು ಅದೇ ಧೈರ್ಯ ಮಾಡಿದ್ದಾರೆ. ಈ ಬಾರಿ ಪಾಕಿಸ್ತಾನಿ ಮಾಡೆಲ್ ಒಬ್ಬರು ನ್ಯೂಡ್ ಫೋಟೋಶೂಟ್ ಮಾಡುವ ಮೂಲಕ ಸಂಚಲನ ಮೂಡಿಸಿದ್ದು, ಪಾಕ್ ನಲ್ಲಿ ಭಾರೀ ಟೀಕೆಗೆ ಕಾರಣವಾಗಿದೆ.

ಪಾಕಿಸ್ತಾನಿ ಮಾಡೆಲ್ ಹೆಸರು ಅಜ್ಮಲ್ ಖಾನ್. ರಣವೀರ್ ಸಿಂಗ್ ಅವರಂತೆ ಬಟ್ಟೆ ಇಲ್ಲದೆ ಫೋಟೋಶೂಟ್ ಮಾಡಿ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದ್ದಾರೆ. ಪಾಕಿಸ್ತಾನಿ ಮಾಡೆಲ್ ಅಜ್ಮಲ್ ಖಾನ್ ಅವರ ಈ ಬೋಲ್ಡ್‌ ಫೋಟೋಗಳನ್ನು ಲಕ್ಸ್ ಸ್ಟೈಲ್ ಪ್ರಶಸ್ತಿ ವಿಜೇತ ಛಾಯಾಗ್ರಾಹಕ ಆಶ್ನಾ ಖಾನ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಫೋಟೋಗಳಲ್ಲಿ, ಅಜ್ಮಲ್ ಖಾನ್ ಅವರು ಕುರ್ಚಿ ಮೇಲೆ ಕುಳಿತಿದ್ದಾರೆ ಮತ್ತು ಅವರ ದೇಹದ ಮೇಲೆ ಯಾವುದೇ ಬಟ್ಟೆಯಿಲ್ಲದೆ ಫೋಟೋಶೂಟ್‌ಗೆ ಪೋಸ್ ನೀಡಿದ್ದಾರೆ. ವಿವಿಧ ಕೋನಗಳಿಂದ ಅವರ ಕಪ್ಪು ಮತ್ತು ಬಿಳಿ ಫೋಟೋಗಳನ್ನು ತೆಗೆದಿದ್ದಾರೆ.

ಪಾಕಿಸ್ತಾನಿ ಮಾಡೆಲ್‌ ಫೋಟೋಗಳಲ್ಲ್ಲಿ ರಣವೀರ್ ಸಿಂಗ್‌ಗಿಂತ ಕಡಿಮೆ ಕಾಣುತ್ತಿಲ್ಲ. ಡ್ಯಾಶಿಂಗ್ ಲುಕ್ ಹೊಂದಿರುವ ಮಾಡೆಲ್ ಫೋಟೋವನ್ನು ನೋಡಿದ ಮತಾಂಧರು ಕೋಪಗೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗುತ್ತಿದೆ.

Check Also

ಮೆದುಳು ತಿನ್ನೋ ಅಮೀಬಾ ಸೋಂಕಿಗೆ 14 ವರ್ಷದ ಬಾಲಕ ಮೃತ್ಯು; 3ನೇ ಪ್ರಕರಣ

ಕೋಝೀಕೋಡ್(ಕೇರಳ): ಕೇರಳದ ಖಾಸಗಿ ಆಸ್ಪತ್ರೆಯೊಂದರಲ್ಲಿ 14 ವರ್ಷದ ಬಾಲಕನೊಬ್ಬ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌(ಮಿದುಳು ತಿನ್ನುವ ಅಮೀಬಾ) ಎಂಬ ಅಪರೂಪದ ಮಿದುಳು ಸೋಂಕಿನಿಂದ ಕೊನೆಯುಸಿರೆಳೆದಿರುವುದಾಗಿ …

Leave a Reply

Your email address will not be published. Required fields are marked *

You cannot copy content of this page.