March 4, 2026
maha kumbhamela

ಪ್ರಯಾಗ್‌ರಾಜ್: ಜ.13 ರಂದು ಪ್ರಾರಂಭವಾದ ಮಹಾ ಕುಂಭಮೇಳಕ್ಕೆ ನಾಳೆ ಶಿವರಾತ್ರಿಯಂದು ತೆರೆಬೀಳಲಿದೆ. ಈವರೆಗೂ ಸುಮಾರು 63 ಕೋಟಿ ಜನರು ತ್ರಿವೇಣಿ ಸಂಗಮದಲ್ಲಿ ಅಮೃತಸ್ನಾನ ಮಾಡಿದ್ದಾರೆ. ನಾಳೆ ಶಿವರಾತ್ರಿ ಹಿನ್ನೆಲೆ ಕೊನೆಯ ಪುಣ್ಯಸ್ನಾನಕ್ಕೆ ಸ್ಥಳೀಯ ಆಡಳಿತ ತಯಾರಿ ನಡೆಸುತ್ತಿದೆ.

ಮಹಾಕುಂಭ ಮೇಳಕ್ಕೆ ಶಿವರಾತ್ರಿಯಂದು 1 ಕೋಟಿಗೂ ಅಧಿಕ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದೆ. ಕೊನೆಯ ಪುಣ್ಯಸ್ನಾನವಾದ್ದರಿಂದ ತ್ರಿವೇಣಿ ಸಂಗಮವನ್ನು ನೋ ವೆಹಿಕಲ್ ಝೋನ್ ಎಂದು ಘೋಷಿಸಲಾಗಿದೆ. ಇಂದು ಮತ್ತು ನಾಳೆ ಖಾಸಗಿ ವಾಹನಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಸ್ಥಳೀಯ ಆಡಳಿತ ಮತ್ತು ವೈದ್ಯಕೀಯ ತುರ್ತು ಸೇವೆಗಳ ವಾಹನಗಳಿಗೆ ಮಾತ್ರ ಪ್ರವೇಶವಿರುವುದು ಎಂದು ಸ್ಥಳೀಯ ಆಡಳಿತ ತಿಳಿಸಿದೆ.
ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ವಿಶ್ವದಾದ್ಯಂತ ಕೋಟ್ಯಂತರ ಭಕ್ತರು ಭೇಟಿ ನೀಡಿದ್ದಾರೆ. ವಿಶ್ವವಿಖ್ಯಾತ ಮಹಾ ಕುಂಭಮೇಳ ಫೆ.26 ರಂದು ಅಂತ್ಯಗೊಳ್ಳಲಿದೆ.

About The Author

Leave a Reply

Your email address will not be published. Required fields are marked *

You cannot copy content of this page.