April 19, 2026
WhatsApp Image 2024-07-02 at 12.11.13 PM

ಮಣಿಪಾಲ: ವ್ಯಕ್ತಿಯೊಬ್ಬರ ಖಾತೆಯಿಂದ ಮತ್ತೊಂದು ಖಾತೆಗೆ 2,08,004 ರೂ. ಹಣ ವರ್ಗಾವಣೆಗೊಂಡಿರುವ ಘಟನೆ ನಡೆದಿದೆ.

ಕಾರ್ಕಳ ಪಳ್ಳಿ ನಿವಾಸಿ ಡಾ| ಗೋಪಿ ನಾಥ್‌ ಅವರ ಬ್ಯಾಂಕ್ ಖಾತೆಯಿಂದ ಜನವರಿ 27ರಿಂದ ಜೂನ್ 20ರ ವರೆಗೆ ಸುಮಾರು 2,08,004ರೂ. ವರ್ಗಾವಣೆಗೊಂಡಿದೆ. ಸುಮಾರು 177 ಬಾರಿ ಬೇರೆ ಬೇರೆ ಕಂತು ಗಳಲ್ಲಿ ಹಣ ವರ್ಗಾವಣೆಯಾಗಿರುವುದು ತಿಳಿದುಬಂದಿದೆ.

ಈ ಬಗ್ಗೆ ಸಂಬಂಧ ಪಟ್ಟ ಬ್ಯಾಂಕ್‌ಗೆ ಹೋಗಿ ಅಧಿಕಾರಿಗಳನ್ನು ವಿಚಾರಿಸಿದಾಗ ಒಟಿಪಿ-ಡೆಬಿಟ್‌ ಕಾರ್ಡ್‌ ಮೂಲಕ ಹಣ ವರ್ಗಾ ವಣೆಯಾಗಿದೆ ಎಂದಿದ್ದಾರೆ. ಬಳಿಕ ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವ ಅವರು, ನನಗೆ ಹಣ ವರ್ಗಾವಣೆಗೆ ಸಂಬಂಧಪಟ್ಟ ಯಾವುದೇ ಒಟಿಪಿ ಅಥವಾ ಸಂದೇಶಗಳು ಬಂದಿಲ್ಲ. ಯಾರೋ ಅಪರಿಚಿತ ವ್ಯಕ್ತಿ ನನ್ನ ಗಮನಕ್ಕೆ ಬಾರದಂತೆ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾಯಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

About The Author

Leave a Reply

Your email address will not be published. Required fields are marked *

You cannot copy content of this page.