![](https://thrishulnews.com/wp-content/uploads/2024/03/WhatsApp-Image-2024-03-12-at-11.54.26-AM.jpeg)
ರಾತ್ರಿ ಅಂತ್ಯಸಂಸ್ಕಾರ ಮಾಡಿದ್ದ ಒಂದೂವರೆ ವರ್ಷದ ಮಗುವಿನ ಮೃತದೇಹ ಬೆಳಗ್ಗೆ ಎನ್ನುವಷ್ಟರಲ್ಲಿ ಉಯ್ಯಾಲೆಯಲ್ಲಿ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರು, ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.
ಮಂಠಾಳ ಗ್ರಾಮದ ನಿವಾಸಿ ಅಂಬಯ್ಯಸ್ವಾಮಿ ಎಂಬುವರ ಒಂದೂವರೆ ವರ್ಷದ ದೀಪ್ತಿ ಅನಾರೋಗ್ಯದಿಂದ ಜೂನ್ 29ರ ಸಂಜೆ ಸಾವನ್ನಪ್ಪಿದ್ದಳು. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಡರಾತ್ರಿ ಮಗುವಿನ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಿದ್ದರು. ಆದರೆ ಮರುದಿನ ಅಂದರೆ ಜೂನ್ 30ರ ಬೆಳಗ್ಗೆ ಮರಕ್ಕೆ ಕಟ್ಟಿದ್ದ ಉಯ್ಯಾಲೆ (ಜೋಕಾಲಿ) ಯಲ್ಲಿ ಮಗುವಿನ ಮೃತದೇಹ ಪ್ರತ್ಯಕ್ಷವಾಗಿದೆ. ಇದರಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.
![](https://thrishulnews.com/wp-content/uploads/2024/07/WhatsApp-Image-2024-07-02-at-9.07.28-AM.jpeg)
ಮಗುವಿನ ಮೃತದೇಹವನ್ನು ಕುಟುಂಬಸ್ಥರು ಜೂನ್ 30 ರಂದು ಮತ್ತೆ ಅಂತ್ಯಸಂಸ್ಕಾರ ಮಾಡಿದ್ದಾರೆ. ಮಗುವಿನ ಕಾಲುಗಳಲ್ಲಿದ್ದ ಚೈನ್ಗಳ ಆಸೆಗಾಗಿ ಮೃತದೇಹವನ್ನು ಹೊರ ತೆಗೆದಿರಬಹುದು ಎಂದು ಅನುಮಾನ ವ್ಯಕ್ತಪಡಿಸಲಾಗಿದೆ.